image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಹಾರ ವಿಧಾನಸಭಾ ಚುನಾವಣೆಯ ಈ ವೆಬ್​​ಕಾಸ್ಟಿಂಗ್​ ...!

ಬಿಹಾರ ವಿಧಾನಸಭಾ ಚುನಾವಣೆಯ ಈ ವೆಬ್​​ಕಾಸ್ಟಿಂಗ್​ ...!

ನವದೆಹಲಿ: ಮತದಾನ ಪ್ರಕ್ರಿಯೆ ಮೇಲೆ ಹೆಚ್ಚಿನ ಮೇಲ್ವಿಚಾರಣೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್​ ವ್ಯವಸ್ಥೆ ಜಾರಿಗೊಳಿಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ, ವೆಬ್​ಕಾಸ್ಟಿಂಗ್​ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅದರಲ್ಲಿ ಇಂಟರ್ನೆಟ್​ ಸಂಪರ್ಕ ಹೊಂದಿರುವ ಎಲ್ಲ ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್​ ಮಾಡಬೇಕು. ಇಂಟರ್ನೆಟ್​ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ವಿಡಿಯೋಗ್ರಫಿ ಹಾಗೂ ಛಾಯಾಗ್ರಹಣ ಮಾಡಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಹಿಂದೆ ಶೇ 50ರಷ್ಟು ಮತಗಟ್ಟೆಗಳಲ್ಲಿ ಮಾತ್ರ ವೆಬ್​ಕಾಸ್ಟಿಂಗ್​ ಮಾಡಲು ಅವಕಾಶವಿತ್ತು. ಜೂನ್​ 19 ರಂದು ನಡೆಯಲಿರುವ ಗುಜರಾತ್​, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್​ನ ಐದು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗಳಲ್ಲಿ ಈ ಹೊಸ ಮಾರ್ಗಸೂಚಿ ಜಾರಿಗೆ ತರುವ ಸಾಧ್ಯತೆ ಕಡಿಮೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಿಂದ ಈ ವೆಬ್​ಕಾಸ್ಟಿಂಗ್​ ಜಾರಿಗೆ ತರಲಾಗುವುದು ಎಂದು ಹೊಸ ಮಾರ್ಗಸೂಚಿ ತಿಳಿಸಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ವೆಬ್‌ಕಾಸ್ಟಿಂಗ್ ಮೇಲ್ವಿಚಾರಣಾ ನಿಯಂತ್ರಣ ಕೊಠಡಿ ಇರಬೇಕು ಹಾಗೂ ಇದನ್ನು ಪ್ರತಿ ಹಂತದಲ್ಲಿ ನೇಮಿಸಲಾದ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

ಮತದಾನದ ಗೌಪ್ಯತೆಯನ್ನು ಉಲ್ಲಂಘಿಸದೇ, ಮತಗಟ್ಟೆಯೊಳಗೆ ನಡೆಯುವ ಘಟನೆಗಳನ್ನು ನೇರ ಪ್ರಸಾರ ಮಾಡುವುದೇ ವೆಬ್​ಕಾಸ್ಟಿಂಗ್​. ಈ ಪರಿಷ್ಕೃತ ಮಾರ್ಗಸೂಚಿಗಿಂತ ಮೊದಲು, ಒಟ್ಟು ಮತಗಟ್ಟೆಗಳಲ್ಲಿ ಕನಿಷ್ಠ 50 ಶೇ ಹಾಗೂ ಎಲ್ಲ ನಿರ್ಣಾಯಕ ಮತಗಟ್ಟೆಗಳು ಮತ್ತು ದುರ್ಬಲ ಪ್ರದೇಶಗಳಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್​ ಮಾಡಲಾಗುತ್ತಿತ್ತು. ಮಾಹಿತಿ ನೀಡಿ ಮಾತನಾಡಿದ ಚುನಾವಣಾ ಆಯೋಗದ ಹಿರಿಯ ಅಧಿಕಾರಿ, "ಈ ಹಿಂದೆ ಪ್ರಮುಖ ಮತಗಟ್ಟೆಗಳ ಹೊರತಾಗಿ ಒಟ್ಟು ಮತಗಟ್ಟೆಗಳ ಶೇ 50ರಷ್ಟು ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್​ ಕಡ್ಡಾಯವಾಗಿತ್ತು. ಈಗ ಈ ಪರಿಷ್ಕೃತ ಮಾರ್ಗಸೂಚಿಯಂತೆ ಎಲ್ಲಾ ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್​ ಮಾಡುವುದು ಕಡ್ಡಾಯವಾಗಿದೆ. ಇಂಟರ್ನೆಟ್​ ಸಂಪರ್ಕವಿಲ್ಲದ ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ಮಾಡಲಾಗುತ್ತದೆ" ಎಂದು ತಿಳಿಸಿದರು.

"ಮತದಾನ ಪ್ರಕ್ರಿಯೆಯನ್ನು ಸಿಇಒ ಕಚೇರಿಗಳ ನಿಯಂತ್ರಣ ಕೊಠಡಿ ಅಥವಾ ಇಆರ್​ಒ ಕಚೇರಿಗಳಿಂದ ಕೇಂದ್ರೀಯವಾಗಿ ಮೇಲ್ವಿಚಾರಣೆ ಮಾಡಬಹುದು. ಒಬ್ಬ ಇಆರ್‌ಒ ಅಡಿ ಅನೇಕ ಮತಗಟ್ಟೆಗಳಿರುವುದರಿಂದ, ಎಲ್ಲ ಮತಗಟ್ಟೆಗಳಲ್ಲಿ ಭೌತಿಕವಾಗಿ ಹಾಜರಿರುವುದು ಅಸಾಧ್ಯ. ಮುಖ್ಯವಾಗಿ ಇದು ಮತದಾನದ ಪ್ರಕ್ರಿಯೆಯನ್ನು ಹೆಚ್ಚಿನ ಮೇಲ್ವಿಚಾರಣೆ ಮಾಡುವುದನ್ನು ಖಚಿತಪಡಿಸುತ್ತದೆ. ಜೊತೆಗೆ ನಂತರದ ಹಂದಲ್ಲಿ ಯಾವುದೇ ವಿವಾದ ಅಥವಾ ಚುನಾವಣೆ ಇದ್ದಲ್ಲಿ ಈ ವೆಬ್​ಕಾಸ್ಟಿಂಗ್​ ಸಹಾಯ ಮಾಡುತ್ತದೆ" ಎಂದು ವಿವರಿಸಿದರು. ಹೊರಡಿಸಲಾದ ಹೊಸ ಮಾರ್ಗಸೂಚಿಯ ಪ್ರಕಾರ, 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 128 ಮತ್ತು 1961 ರ ಚುನಾವಣಾ ನೀತಿ ನಿಯಮದ ರೂಲ್​ 39 ರ ಅಡಿ ಎಲ್ಲಾ ಷರತ್ತುಗಳ ಅನ್ವಯ ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್ ಮುಂಭಾಗವನ್ನು ವೆಬ್‌ಕಾಸ್ಟಿಂಗ್ ಕವರ್​ ಮಾಡುವಂತಿಲ್ಲ. ಮತದಾನದ ವಿಭಾಗವು ಕಿಟಕಿ ಅಥವಾ ಬಾಗಿಲಿನ ಬಳಿ ಅಥವಾ ಮುಂದೆ ಇರಬಾರದು. ಮಾತ್ರವಲ್ಲದೇ, ಮತದಾನದ ಪ್ರಮಾಣ, ಘಟನೆಗಳನ್ನು ವರದಿ ಮಾಡಲು ಅಧ್ಯಕ್ಷಾಧಿಕಾರಿ, ಸೂಕ್ಷ್ಮ ವೀಕ್ಷಕರನ್ನು ಹೊರತುಪಡಿಸಿ ಬೇರೆ ಯಾರೂ ಮತಗಟ್ಟೆಯೊಳಗೆ ಮೊಬೈಲ್ ಫೋನ್ ಬಳಸುವಂತಿಲ್ಲ.

Category
ಕರಾವಳಿ ತರಂಗಿಣಿ