image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇರಾನ್ ಮತ್ತು ಇಸ್ರೇಲ್​ ಸಂಘರ್ಷದಲ್ಲಿ ಜಿ7 ರಾಷ್ಟ್ರಗಳು ಇಸ್ರೇಲ್​​ಗೆ ಬೆಂಬಲ

ಇರಾನ್ ಮತ್ತು ಇಸ್ರೇಲ್​ ಸಂಘರ್ಷದಲ್ಲಿ ಜಿ7 ರಾಷ್ಟ್ರಗಳು ಇಸ್ರೇಲ್​​ಗೆ ಬೆಂಬಲ

ಇರಾನ್​​: ಕಳೆದ ಐದು ದಿನಗಳಿಂದ ಇರಾನ್​ ಮತ್ತು ಇಸ್ರೇಲ್​ ಮಧ್ಯೆ ನಡೆಯುತ್ತಿರುವ ದಾಳಿಯು ಮತ್ತೊಂದು ಹಂತ ತಲುಪಿದೆ. ಉಭ ರಾಷ್ಟ್ರಗಳ ಸೇನಾ ಪಡೆಗಳ ನಡುವೆ ಹಗಲು- ರಾತ್ರಿ ಕ್ಷಿಪಣಿ ದಾಳಿ ವಿನಿಮಯವಾಗುತ್ತಿವೆ. ಇದರಿಂದ ಟೆಹ್ರಾನ್​ ಮತ್ತು ಟೆಲ್​ ಅವೀವ್​ ಹೊತ್ತಿ ಉರಿಯುತ್ತಿವೆ. ಈ ಮಧ್ಯೆ ಇಸ್ರೇಲಿ ಸೇನೆಯು ಮಂಗಳವಾರ ರಾತ್ರಿ ನಡೆಸಿದ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್ ಅಲಿ ಶಾದ್ಮಾನಿ ಹತರಾಗಿದ್ದಾರೆ. ಈತ ಇರಾನ್​ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತನಾಗಿದ್ದ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್​ ಭದ್ರತಾ ಪಡೆ, "ಟೆಹ್ರಾನ್​​ನಲ್ಲಿನ ಭದ್ರತಾ ಪಡೆಗಳ ಕೇಂದ್ರ ಕಚೇರಿ ಮೇಲೆ ಶನಿವಾರ ರಾತ್ರಿ ನಡೆಸಿದ ದಾಳಿಯಲ್ಲಿ ಇರಾನ್​​ನ ಯುದ್ಧಕಾಲದ ಮುಖ್ಯಸ್ಥ, ಹಿರಿಯ ಸೇನಾ ಕಮಾಂಡರ್​ ಮತ್ತು ಅಲಿ ಖಮೇನಿ ಅವರ ಪರಮಾಪ್ತ ಅಲಿ ಶಾದ್ಮಾನಿ ಅವರನ್ನು ಹತ್ಯೆ ಮಾಡಿದ್ದೇವೆ" ಎಂದು ತಿಳಿಸಿದೆ. ಶಾದ್ಮಾನಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಇರಾನಿನ ಸಶಸ್ತ್ರ ಪಡೆಗಳಿಗೆ ಕಮಾಂಡರ್​ ಆಗಿದ್ದರು. ಕಳೆದ ಐದು ದಿನಗಳಲ್ಲಿ ಇದು ಎರಡನೇ ಅತಿದೊಡ್ಡ ಬೇಟೆಯಾಗಿದೆ. ಮೊದಲ ದಿನದ ದಾಳಿಯಲ್ಲಿ ಸೇನೆಯ ಮುಖ್ಯಸ್ಥರು ಮತ್ತು ವಿಜ್ಞಾನಿಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಇಸ್ರೇಲಿ ಸೇನೆ ಹೇಳಿದೆ.

ಯುದ್ಧ ಸ್ವರೂಪದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್​ ಸಂಘರ್ಷದಲ್ಲಿ ಜಿ7 ರಾಷ್ಟ್ರಗಳಾದ ಜಪಾನ್‌, ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಕೆನಡಾ, ಇಟಲಿ ದೇಶಗಳು ಇಸ್ರೇಲ್​​ಗೆ ಬೆಂಬಲ ನೀಡಿವೆ. ಇರಾನ್​ ಯಾವುದೇ ಕಾರಣಕ್ಕೂ ನಿಯಮ ಮೀರಿ ಅಣ್ವಸ್ತ್ರಗಳನ್ನು ಹೊಂದುವಂತಿಲ್ಲ ಎಂದು ಹೇಳಿವೆ. ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಭೆಯಲ್ಲಿ ಭಾಗವಹಿಸಿರುವ ಆಯಾ ರಾಷ್ಟ್ರಗಳ ಮುಖ್ಯಸ್ಥರು, ಇರಾನ್​ ನೀತಿಯನ್ನು ಖಂಡಿಸಿವೆ. ಇಸ್ರೇಲ್​ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಹಕ್ಕು ಹೊಂದಿದೆ. ಇರಾನ್​ ಮಧ್ಯಪ್ರಾಚ್ಯದಲ್ಲಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಆರೋಪಿಸಿವೆ.

ಜಿ78 ಶೃಂಗದಲ್ಲಿ ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇರಾನ್​ ಮತ್ತು ಇಸ್ರೇಲ್​ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ ತರಾತುರಿಯಲ್ಲಿ ಅಮೆರಿಕಕ್ಕೆ ವಾಪಸ್​ ಆಗಿದ್ದಾರೆ. ಜೊತೆಗೆ, ಇರಾನ್​ನ ರಾಜಧಾನಿ ಟೆಹ್ರಾನ್​​ನಲ್ಲಿರುವ ಜನರಿಗೆ ತಕ್ಷಣವೇ ನಗರ ತೊರೆಯಲು ಸೂಚನೆ ನೀಡಿದ್ದಾರೆ. ದಾಳಿಯಲ್ಲಿ ಏನೇ ಸಂಭವಿಸಿದರೂ, ಅದಕ್ಕೆ ನಾವು ಹೊಣೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ