image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಮಾನ ಭೀಕರ ಅಪಘಾತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ 99 ಮೃತದೇಹಗಳ ಡಿಎನ್‌ಎ ಪರೀಕ್ಷೆಯ ಮೂಲಕ ಗುರುತು ಪತ್ತೆ

ವಿಮಾನ ಭೀಕರ ಅಪಘಾತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ 99 ಮೃತದೇಹಗಳ ಡಿಎನ್‌ಎ ಪರೀಕ್ಷೆಯ ಮೂಲಕ ಗುರುತು ಪತ್ತೆ

ಗುಜರಾತ್​ : ಏರ್ ಇಂಡಿಯಾ ವಿಮಾನ ಭೀಕರ ಅಪಘಾತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ 99 ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಗುರುತು ಪತ್ತೆ ಮಾಡಲಾಗಿದೆ. ಅದರಲ್ಲಿ ಗುಜರಾತ್​ನ ಮಾಜಿ ಸಿಎಂ ವಿಜಯ್​ ರೂಪಾನಿ ಸೇರಿದಂತೆ 64 ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಮೃತದೇಹವನ್ನು ಅಹಮದಾಬಾದ್​ನ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿತ್ತು. ಬಹುತೇಕ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಅಥವಾ ತೀವ್ರ ಹಾನಿಗೀಡಾಗಿವೆ. ಹೀಗಾಗಿ, ಅವುಗಳ ಗುರುತು ಪತ್ತೆ ಮಾಡಲು ಅಧಿಕಾರಿಗಳು ಮೃತರ ಕುಟುಂಬಸ್ಥರ ಡಿಎನ್‌ಎ ಪಡೆದು ಅದನ್ನು ಶವಗಳ ಜೊತೆ ಹೊಂದಾಣಿಕೆ ಮಾಡಲಾಗುತ್ತಿದೆ. ಅದರಲ್ಲಿ ಈವರೆಗೂ 99 ಜನರ ಡಿಎನ್​ಎ ಹೊಂದಾಣಿಕೆಯಾಗಿದೆ.

"ಇಲ್ಲಿಯವರೆಗೆ 99 ಡಿಎನ್ಎ ಮಾದರಿಗಳನ್ನು ಹೊಂದಿಸಲಾಗಿದೆ. ಅದರಲ್ಲಿ 64 ಶವಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಮೃತರೆಲ್ಲರೂ ಗುಜರಾತ್ ಮತ್ತು ರಾಜಸ್ಥಾನದವರಾಗಿದ್ದಾರೆ" ಎಂದು ಜಿಲ್ಲಾಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ರಾಕೇಶ್ ಜೋಶಿ ಅವರು ತಿಳಿಸಿದ್ದಾರೆ. "ಡಿಎನ್ಎ ಮಾದರಿಗಳನ್ನು ಮೃತ ದೇಹಗಳೊಂದಿಗೆ ಹೊಂದಿಸಲು ತುಸು ಸಮಯ ಹಿಡಿಯಲಿದೆ. ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದೇವೆ. 72 ಗಂಟೆಗಳ ನಂತರವೂ ವರದಿ ಬಂದಿಲ್ಲ ಎಂದು ಕೆಲವು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಹಿಡಿಯುತ್ತಿದೆ. ಶೀಘ್ರವೇ ಎಲ್ಲ ಪ್ರಕ್ರಿಯೆ ಮುಗಿಸಲಾಗುವುದು" ಎಂದು ಜೋಶಿ ಅವರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟ ವಿಮಾನದಲ್ಲಿದ್ದ ಪ್ರಯಾಣಿಕರು, ಹಾಸ್ಟೆಲ್​ ವಿದ್ಯಾರ್ಥಿಗಳು, ಇತರ ನಿವಾಸಿಗಳು ಸೇರಿದಂತೆ 250 ಜನರ ಡಿಎನ್​ ಮಾದರಿ ಸಂಗ್ರಹಿಸಲಾಗಿದೆ.

Category
ಕರಾವಳಿ ತರಂಗಿಣಿ