image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಸ್ರೇಲ್, ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ ಪಾಕಿಸ್ತಾನ ಮಧ್ಯಪ್ರವೇಶಿಸಲಿದೆ : ಇರಾನ್ ಜನರಲ್

ಇಸ್ರೇಲ್, ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ ಪಾಕಿಸ್ತಾನ ಮಧ್ಯಪ್ರವೇಶಿಸಲಿದೆ : ಇರಾನ್ ಜನರಲ್

ಇರಾನ್: ಇಸ್ರೇಲ್ - ಇರಾನ್ ಉದ್ವಿಗ್ನತೆಯ ಸಂದರ್ಭದಲ್ಲಿ ಅಲ್ಲಿನ ಇಸ್ಲಾಮಿಕ್​ ರೆವಲ್ಯೂಷನರಿ ಗಾರ್ಡ್​​ ನ ಜನರಲ್ ಮೊಹ್ಸೆನ್ ರೆಝೆಯ್‌ ಸಂಚಲನಕಾರಿಯಾದ ಹೇಳಿಕೆಯೊಂದನ್ನು ನೀಡಿದ್ದಾರೆ. ಇಸ್ರೇಲ್, ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ ಪಾಕಿಸ್ತಾನ ಮಧ್ಯಪ್ರವೇಶಿಸಲಿದೆ ಎಂದು ಅವರು ಇಸ್ರೇಲ್​​​ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಈ ಹೇಳಿಕೆಗಳು ನಿಜವೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಏಕೆಂದರೆ ಅದು ಹಿಂದೆ ಹಲವಾರು ಬಾರಿ ಇರಾನ್‌ಗೆ ಬೆಂಬಲ ನೀಡಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಸಮಯದಲ್ಲಿ ಇರಾನ್ ಗಂಭೀರ ಆರೋಪಗಳನ್ನು ಮಾಡಿದೆ. ಇಸ್ರೇಲ್ ತನ್ನ ದೇಶದ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿದರೆ, ಅದು ಕಣಕ್ಕೆ ಇಳಿಯುತ್ತದೆ ಎಂದು ಪಾಕಿಸ್ತಾನ ಎಚ್ಚರಿಸಿದೆ. ಇರಾನ್‌ನ ಐಆರ್‌ಜಿಸಿ ಜನರಲ್ ಮೊಹ್ಸೆನ್, ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ, ಪಾಕಿಸ್ತಾನವು ಆ ದೇಶದ ಮೇಲೆ ಪರಮಾಣು ದಾಳಿ ನಡೆಸುತ್ತದೆ ಎಂದು ಹೇಳಿದ್ದಾರೆ.

ಇರಾನ್ ಸರ್ಕಾರದ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಪರಮಾಣು ದಾಳಿ ನಡೆಸಿದರೆ ಇಸ್ಲಾಮಾಬಾದ್ ಟೆಲ್ ಅವೀವ್‌ನ ಮೇಲೂ ಪರಮಾಣು ಬಾಂಬ್ ದಾಳಿ ನಡೆಸಲಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪಾಕಿಸ್ತಾನದಿಂದ ಭರವಸೆ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇರಾನ್‌ಗೆ ಬೆಂಬಲವಾಗಿ ಪಾಕಿಸ್ತಾನವು ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಒಂದಾಗುವಂತೆ ಮನವಿ ಮಾಡಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಜಗತ್ತಿಗೆ ತಿಳಿದಿಲ್ಲದ ಅನೇಕ ಗೌಪ್ಯ ಶಕ್ತಿ- ಸಾಮರ್ಥ್ಯಗಳನ್ನು ಟೆಹ್ರಾನ್ ಇನ್ನೂ ಹೊಂದಿದೆ ಎಂದು ಹೇಳುವ ಮೂಲಕ ಮೊಹ್ಸೆನ್ ಇದೇ ವೇಳೆ ಇಸ್ರೇಲ್​ ಗೆ ಎಚ್ಚರಿಕೆ ರವಾನಿಸಿದ್ದಾರೆ. ಇರಾನ್‌ಗೆ ಬೆಂಬಲ ನೀಡಲು ಪಾಕಿಸ್ತಾನ ಟರ್ಕಿ, ಸೌದಿ ಅರೇಬಿಯಾ ಮತ್ತು ಇತರ ದೇಶಗಳೊಂದಿಗೆ ಇಸ್ಲಾಮಿಕ್ ಸೈನ್ಯವನ್ನು ರಚಿಸಬೇಕು ಎಂದು ಮೊಹ್ಸೆನ್ ಇದೇ ವೇಳೆ ಪ್ರತಿಪಾದಿಸಿದ್ದಾರೆ. ಈ ದೇಶಗಳಲ್ಲಿ ಒಂದಾದರೂ ಈ ಪ್ರಸ್ತಾಪವನ್ನು ಅನುಮೋದಿಸಿದರೆ, ಪ್ರಾದೇಶಿಕ ಅಧಿಕಾರದ ಸಮತೋಲನವು ರಾತ್ರೋರಾತ್ರಿ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ