image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನಗಣತಿ ಜೊತೆ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರ ಅಧಿಸೂಚನೆ

ಜನಗಣತಿ ಜೊತೆ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರ ಅಧಿಸೂಚನೆ

ನವದೆಹಲಿ: 16 ವರ್ಷಗಳ ನಂತರ ದೇಶದಲ್ಲಿ ನಡೆಸಲಾಗುವ ಜನಗಣತಿಯ ಕುರಿತು ಕೇಂದ್ರ ಗೃಹ ಸಚಿವಾಲಯ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಬಾರಿಯ ಜನಗಣತಿ ಜೊತೆಗೆ ಜಾತಿ ಜನಗಣತಿಯನ್ನೂ ಸಹ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜನಗಣತಿ ಮತ್ತು ಜಾತಿಗಣತಿಗಾಗಿ ಒಟ್ಟು 34 ಲಕ್ಷ ಗಣತಿದಾರರು, ಮೇಲ್ವಿಚಾರಕರು ಮತ್ತು 1.34 ಲಕ್ಷ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಸಂಪೂರ್ಣ ಜನಗಣತಿಯನ್ನು ಟ್ಯಾಬ್‌ಗಳ ಮೂಲಕ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತದೆ. 2027ರ ಫೆಬ್ರವರಿ ತಿಂಗಳಲ್ಲಿ ದೇಶದ 16ನೇ ಜನಗಣತಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಇದರೊಂದಿಗೆ, ಜಾತಿ ಜನಗಣತಿಯನ್ನೂ ಸಹ ನಡೆಸಿ ಅದೇ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು.

ಇದಕ್ಕಾಗಿ, ಮಾರ್ಚ್ 1, 2027 ಅನ್ನು ಉಲ್ಲೇಖ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅಂದರೆ, ಹಿಂದಿನ ದಿನ ಫೆಬ್ರವರಿ 28ರ ಮಧ್ಯರಾತ್ರಿ 12 ಗಂಟೆಯೊಳಗೆ ಜನಗಣತಿ ಪೂರ್ಣಗೊಳ್ಳುತ್ತದೆ. ಅದಕ್ಕೂ ಮೊದಲು, ಮನೆ ಪಟ್ಟಿಯ ಮೊದಲ ಹಂತವು ಏಪ್ರಿಲ್ 2026ರಲ್ಲಿ ಪ್ರಾರಂಭವಾಗುತ್ತದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮ ಪೀಡಿತ ಪ್ರದೇಶಗಳಲ್ಲಿ ಜನಗಣತಿ ಅಕ್ಟೋಬರ್ 1, 2026ರಂದು ಆರಂಭವಾಗಲಿದೆ. 2011ರಲ್ಲಿ ಕೊನೆಯ ಬಾರಿ ಜನಗಣತಿ ನಡೆದಿತ್ತು. ಕೋವಿಡ್ ಕಾರಣದಿಂದ 2021ರಲ್ಲಿ ಜನಗಣತಿ ನಡೆದಿರಲಿಲ್ಲ. ಇದೀಗ 16 ವರ್ಷಗಳ ಬಳಿಕ ಜನಗಣತಿ ಮಾಡಲಾಗುತ್ತಿದೆ. ಜೊತೆಗೆ ಇದರ ಜೊತೆ ಇದೇ ಮೊದಲ ಬಾರಿಗೆ ಜಾತಿಗಣತಿಯನ್ನೂ ಕೂಡ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ಮೂಲಕ ಮಾಡಲಾಗುತ್ತದೆ. ಟ್ಯಾಬ್ ಮೂಲಕವೇ ಎಲ್ಲ ದಾಖಲಾತಿಯನ್ನು ನಮೂದಿಸಲಾಗುತ್ತದೆ. ಇದರಿಂದ ನಿಖರ ಮಾಹಿತಿ ಲಭ್ಯವಾಗಲಿದೆ.

Category
ಕರಾವಳಿ ತರಂಗಿಣಿ