image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟನ್ ನೌಕಾಪಡೆಯ ಯುದ್ಧ ವಿಮಾನ

ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟನ್ ನೌಕಾಪಡೆಯ ಯುದ್ಧ ವಿಮಾನ

ಕೇರಳ : ಹಾರಾಡುತ್ತಿರುವಾಗಲೇ ಇಂಧನ ಖಾಲಿಯಾದ ಹಿನ್ನೆಲೆ, ಬ್ರಿಟನ್​​ನ ನೌಕಾಪಡೆಯ ಯುದ್ಧ ವಿಮಾನ ಎಫ್​-35 ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ತುರ್ತು ಭೂಸ್ಪರ್ಶ ಕಂಡಿದೆ. ಶನಿವಾರ ರಾತ್ರಿ 9.30 ರ ಸುಮಾರಿನಲ್ಲಿ ಭಾರತದ ಮೇಲೆ ಹಾರುತ್ತಿರುವಾಗ ಇಂಧನ ಖಾಲಿಯಾದ ಬಗ್ಗೆ ಪೈಲಟ್​ ಮಾಹಿತಿ ರವಾನಿಸಿದ್ದಾನೆ. ತಕ್ಷಣವೇ ಬ್ರಿಟನ್​ ಅಧಿಕಾರಿಗಳು ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ವಿಮಾನ ಇಳಿಯಲು ಅನುಮತಿ ಕೋರಿದ್ದಾರೆ. ಇದಕ್ಕೆ ಒಪ್ಪಿದ ಭಾರತದ ಅಧಿಕಾರಿಗಳು ಕೇರಳದ ತಿರುವನಂತಪುರಂ ನಿಲ್ದಾಣದಲ್ಲಿ ಇಳಿಸಲು ಅನುವು ಮಾಡಿಕೊಟ್ಟಿದ್ದಾರೆ. ವಿಮಾನವು ಸುಗಮ ಮತ್ತು ಸುರಕ್ಷಿತ ಭೂಸ್ಪರ್ಶವಾಗಲು ನಿಲ್ದಾಣದ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇಂಧನ ಖಾಲಿಯಾದ ಬಗ್ಗೆ ಪೈಲಟ್ ಮಾಹಿತಿ ನೀಡಿ, ಲ್ಯಾಂಡಿಂಗ್​​ಗೆ ಅನುಮತಿ ಕೋರಿದರು. ವಿಮಾನ ಸುರಕ್ಷತೆಗಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್​​ನ ಎಫ್​-35 ಯುದ್ಧ ವಿಮಾನ ತುರ್ತು ಭೂಸ್ಪರ್ಶವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಹಾರಾಟ ಸುರಕ್ಷತಾ ಕಾರಣಗಳಿಗಾಗಿ ಲ್ಯಾಂಡಿಂಗ್​​ಗೆ ಅನುವು ಮಾಡಿಕೊಡಲಾಗಿದೆ ಎಂದು ಭಾರತೀಯ ವಾಯು ಸೇನೆ ತಿಳಿಸಿದೆ. ಬ್ರಿಟನ್​ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ವಿಮಾನದ ಮರು ಹಾರಾಟಕ್ಕೆ ಅಗತ್ಯ ನೆರವು ನೀಡಲಾಗುತ್ತಿದೆ. ಇಂಧನ ತುಂಬಿಸಿದ ಬಳಿಕ ತೆರಳಲು ಅವಕಾಶ ನೀಡಲಾಗುವುದು ಎಂದು ವಾಯಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಎಫ್​-35 ಐದನೇ ತಲೆಮಾರಿನ ಫೈಟರ್​ ಜೆಟ್​ ಇದಾಗಿದೆ. ಬ್ರಿಟನ್​​ನ ಹೆಚ್​ಎಂಎಸ್​ ಪ್ರಿನ್ಸ್​ ಆಫ್​​ ವೇಲ್ಸ್​ ಕ್ಯಾರಿಯರ್​ ಸ್ಟ್ರೈಕ್​ ಗ್ರೂಪ್​​ಗೆ ಸೇರಿದೆ. ಯುದ್ಧ ವಿಮಾನವು ಪ್ರಸ್ತುತ ಇಂಡೋ- ಪೆಸಿಫಿಕ್​ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮಾರಾಭ್ಯಾಸ ನಡೆಸಿತ್ತು ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ