image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿದ ನಕ್ಷೆಯನ್ನು ಪೋಸ್ಟ್ ಮಾಡಿದ ಇಸ್ರೇಲ್ ಸೇನೆ ಕ್ಷಮೆಯಾಚನೆ

ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿದ ನಕ್ಷೆಯನ್ನು ಪೋಸ್ಟ್ ಮಾಡಿದ ಇಸ್ರೇಲ್ ಸೇನೆ ಕ್ಷಮೆಯಾಚನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿದ ನಕ್ಷೆಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಇಸ್ರೇಲ್ ಸೇನೆ ಶನಿವಾರ ಕ್ಷಮೆಯಾಚಿಸಿ, ನಕ್ಷೆಯಲ್ಲಿ ಗಡಿಗಳನ್ನು ನಿಖರವಾಗಿ ಚಿತ್ರಿಸುವಲ್ಲಿ ವಿಫಲವಾಗಿರುವುದಾಗಿ ಸ್ಪಷ್ಟಪಡಿಸಿದೆ. ಇರಾನಿನ ಕ್ಷಿಪಣಿಗಳ ವ್ಯಾಪ್ತಿಯನ್ನು ತೋರಿಸಲು ಇಸ್ರೇಲಿ ರಕ್ಷಣಾ ಪಡೆಗಳು (IDF) ಶುಕ್ರವಾರ ತಮ್ಮ ಎಕ್ಸ್​​ ಹ್ಯಾಂಡಲ್‌ನಲ್ಲಿ ನಕ್ಷೆಯನ್ನು ಪೋಸ್ಟ್ ಮಾಡಿದ್ದವು. ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿತ್ತು. ಇದಕ್ಕಾಗಿ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಇಸ್ರೇಲ್​ ಸೇನೆ ಟೀಕೆಗೆ ಗುರಿಯಾಯಿತು.

"ಭಾರತ ಏಕೆ ತಟಸ್ಥವಾಗಿದೆ ಎಂದು ಈಗ ನಿಮಗೆ ಅರ್ಥವಾಗಿದೆ. ರಾಜತಾಂತ್ರಿಕತೆ ವಿಚಾರದಲ್ಲಿ ನಿಜವಾಗಿ ಯಾರೂ ನಿಮ್ಮ ಸ್ನೇಹಿತರಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್​​ನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಐಡಿಎಫ್​​, ನಕ್ಷೆಯು "ಗಡಿಗಳನ್ನು ನಿಖರವಾಗಿ ಚಿತ್ರಿಸುವಲ್ಲಿ ವಿಫಲವಾಗಿದೆ. ಈ ನಕ್ಷೆಯಲ್ಲಿನ ಪ್ರಮಾದಕ್ಕೆ ನಾವು ಕ್ಷಮೆಯಾಚಿಸುತ್ತೇವೆ" ಎಂದು ಐಡಿಎಫ್​ ಹೇಳಿದೆ. ಇರಾನ್ ಜಾಗತಿಕವಾಗಿ ಈಗ ಅಪಾಯಕಾರಿಯಾಗಿದೆ . ಇದು ಇಸ್ರೇಲ್ ಅಂತಿಮ ಗುರಿಯಲ್ಲ, ಆರಂಭ ಮಾತ್ರ. ನಮಗೆ ಕಾರ್ಯಾಚರಣೆ ನಡೆಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಇರಾನ್ ವಿರುದ್ಧ ಆಪರೇಷನ್ ರೈಸಿಂಗ್ ಲಯನ್ ಪ್ರಾರಂಭಿಸುವುದನ್ನು ಸಮರ್ಥಿಸಿ ಐಡಿಎಫ್ ತಪ್ಪಾದ ನಕ್ಷೆಯೊಂದಿಗೆ ಪೋಸ್ಟ್ ಹಂಚಿಕೊಂಡಿತ್ತು.

ಇಸ್ರೇಲಿ ವಾಯುಪಡೆಯು ಇರಾನಿನ ಕ್ಷಿಪಣಿಗಳ ವ್ಯಾಪ್ತಿಯನ್ನು ತೋರಿಸುವ ಇದೇ ರೀತಿಯ ನಕ್ಷೆಯನ್ನು ಹೊಂದಿರುವ ಕಿರು ವಿಡಿಯೋವನ್ನು ಸಹ ಪೋಸ್ಟ್ ಮಾಡಿತ್ತು. ಈ ಪ್ರಮಾದ ಸಂಬಂಧ ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ರುವೆನ್ ಅಜರ್ ಅವರು, ನಕ್ಷೆ ಉದ್ದೇಶಪೂರ್ವಕವಲ್ಲದ ಇನ್ಫೋಗ್ರಾಫಿಕ್ಸ್ ಎಂದಿದ್ದಾರೆ.

Category
ಕರಾವಳಿ ತರಂಗಿಣಿ