image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟ್ರಂಪ್​- ಮಸ್ಕ್​ ನಡುವಿನ ಸಂಬಂಧ ಹದಗೆಟ್ಟ ಪರಿಣಾಮ ಅಮೆರಿಕದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ

ಟ್ರಂಪ್​- ಮಸ್ಕ್​ ನಡುವಿನ ಸಂಬಂಧ ಹದಗೆಟ್ಟ ಪರಿಣಾಮ ಅಮೆರಿಕದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ

ಅಮೆರಿಕ​: ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಮತ್ತು ಟೆಸ್ಲಾ ಸಂಸ್ಥಾಪಕ ಎಲೋನ್​ ಮಸ್ಕ್​ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಪರಸ್ಪರ ಟೀಕಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ನಡುವಿನ ಕದನದ ಪರಿಣಾಮ ಟೆಸ್ಲಾ ಷೇರು ಶೇ 14ರಷ್ಟು ಕುಸಿದಿದೆ. ಈ ಮೂಲಕ ವಾಲ್​ ಸ್ಟ್ರೀಟ್​ ಕೂಡಾ ಕುಸಿತ ಕಂಡಿದೆ. ಈ ಮೂಲಕ ಭಾರಿ ತಲ್ಲಣ ಸೃಷ್ಟಿಸಿದೆ. ಡೌನ್​ ಜೋನ್ಸ್​ ಇಂಡಸ್ಟ್ರಿಯಲ್​ 0.3ರಷ್ಟು ಕುಸಿದಿದ್ದು, ಬ್ರೋಡ್​ ಬೇಸ್ಡ್​​ ಎಸ್​ ಅಂಡ್​ ಪಿ 500 ಸೂಚ್ಯಂಕವೂ 0.5ರಷ್ಟು ಕುಸಿದಿದ್ದು 5,939.30ಕ್ಕೆ ಇಳಿಕೆ ಕಂಡಿದೆ. ಟೆಕ್​ ದಿಗ್ಗಜ ನಾಸ್ಡಾಕ್​​ ಕಾಂಪೊಸಿಟ್​ ಸೂಚ್ಯಂಕ 0.8ರಷ್ಟು ಕುಸಿತ ಕಂಡು 19,298.45ಕ್ಕೆ ಇಳಿದಿದೆ. ಟೆಸ್ಲಾ ಷೇರು ಶೇ 14ರಷ್ಟು ಕುಸಿಯುವ ಮೂಲಕ 100 ಬಿಲಿಯನ್​ ಡಾಲರ್​ ನಷ್ಟ ಅನುಭವಿಸಿದೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ವಿಶ್ವದ ಬಿಲೇನಿಯರ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈ ಮೂಲಕ ಟ್ರಂಪ್​ ಮತ್ತು ಮಸ್ಕ್​ ನಡುವಿನ ಸಂಬಂಧವೂ ಹದಗೆಟ್ಟಿದ್ದು, ಜಗಜ್ಜಾಹೀರಾತಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್​ ಪರಿಚಯಿಸಿದ ಖರ್ಚಿನ ಮಸೂದೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮಸ್ಕ್​ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್​ ಆಡಳಿತ ಮಸ್ಕ್​ ಅವರ ಎಲ್ಲಾ ಸರ್ಕಾರಿ ಒಪ್ಪಂದಗಳನ್ನು ಹಿಂಪಡೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈ ಪರಸ್ಪರ ಟೀಕಾಪ್ರಹಾರಗಳು ಅಮೆರಿಕದ ಷೇರು ಮಾರುಕಟ್ಟೆಗಳ ಮೇಲೆ ಆಗಿದೆ. ಪರಿಣಾಮ ಅಮೆರಿಕದ ಷೇರು ಮಾರುಕಟ್ಟೆ ಕುಸಿತದ ಹಾದಿ ಹಿಡಿದಿದೆ. ಈ ಬೆದರಿಕೆ ಟೆಸ್ಲಾ ಮಾರುಕಟ್ಟೆ ಮೇಲೆ ವಿಶೇಷವಾಗಿ ಗ್ರಾಹಕ ವಲಯದಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಪ್ಯಾಟ್ರಿಕ್​ ಒ ಹ್ಯಾರೆ ತಿಳಿಸಿದ್ದಾರೆ. ಷೇರು ಕುಸಿತದ ಬಳಿಕವೂ ಮಾರುಕಟ್ಟೆಯಲ್ಲಿ ಟೆಸ್ಲಾ ಬಲಿಷ್ಟವಾಗಿಯೇ ಇದೆ . ಯಾವುದೇ ಹೊಸ ನಕರಾತ್ಮಕ ಪರಿಣಾಮ ಬೀರಿಲ್ಲ ಎಂದು ಅವರು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ