image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೇಪಾಳದಿಂದ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದಾಗ ಚೀನಾದ ಪ್ರಜೆ ಮತ್ತು ನೇಪಾಳಿ ಮಾರ್ಗದರ್ಶಿಯ ಬಂಧನ

ನೇಪಾಳದಿಂದ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದಾಗ ಚೀನಾದ ಪ್ರಜೆ ಮತ್ತು ನೇಪಾಳಿ ಮಾರ್ಗದರ್ಶಿಯ ಬಂಧನ

ಬಿಹಾರ: ಭಾರತ - ನೇಪಾಳ ಗಡಿಯಲ್ಲಿ ವಿದೇಶಿ ಪ್ರಜೆಗಳಿಂದ ಒಳ ನುಸುಳುವಿಕೆ ಹೆಚ್ಚುತ್ತಿದೆ. ಮತ್ತೊಂದು ಕಡೆ ನಿರಂತರವಾಗಿ ಪೊಲೀಸರು ನುಸುಳುಕೋರರನ್ನು ಬಂಧಿಸುತ್ತಿದ್ದಾರೆ. ಮತ್ತೊಮ್ಮೆ ಒಬ್ಬ ಚೀನಿ ಪ್ರಜೆಯನ್ನು ಬಂಧಿಸಲಾಗಿದೆ. ಚೀನಾ ಪ್ರಜೆಗೆ ಸಹಕರಿಸಿದ ಆರೋಪದ ಮೇಲೆ ನೇಪಾಳಿ ಪ್ರಜೆಯನ್ನೂ ಬಂಧಿಸಲಾಗಿದೆ. ಇದನ್ನು ಹರಿಯ ಪೊಲೀಸ್ ಠಾಣೆಯ ಉಸ್ತುವಾರಿ ಕಿಶನ್ ಕುಮಾರ್ ಪಾಸ್ವಾನ್ ದೃಢಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಮತ್ತು ಚೀನಾ ಪ್ರಜೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತ ಚೀನೀ ಪ್ರಜೆಯ ಹೆಸರು ಹುಯಿ ಶಿಂಗ್. ಚೀನಾದ ಗನ್ಸು ಪ್ರಾಂತ್ಯದ ನಿವಾಸಿ.ವಯಸ್ಸು ಸುಮಾರು 26 ವರ್ಷ. ಇದರೊಂದಿಗೆ, ನೇಪಾಳಿ ಪ್ರಜೆ ಶ್ಯಾಮ್ ಕುಮಾರ್ ದಹಾಲ್ ನನ್ನು ಕೂಡಾ ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಚೀನಾ ಪ್ರಜೆ ಹುಯಿ ಶಿಂಗ್ ಪ್ರವಾಸಿ ವೀಸಾದೊಂದಿಗೆ ನೇಪಾಳಕ್ಕೆ ಬಂದಿದ್ದರು. ಬಳಿಕ ಅಲ್ಲಿನ ಶ್ಯಾಮ್ ಕುಮಾರ್ ದಹಾಲ್ ಸಹಾಯದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ಸಂಬಂಧ, ಭಾರತ-ನೇಪಾಳ ಗಡಿಯಲ್ಲಿ ನಿಯೋಜಿಸಲಾದ ಸಶಸ್ತ್ರ ಸೀಮಾ ಬಲ (47 ನೇ ದಳ) ತಂಡವು ಈತನ ಚಲನವಲನ ಗಮನಿಸಿ, ಭಾರತ-ನೇಪಾಳ ಸ್ನೇಹ ಸೇತುವೆಯ ಮೂಲಕ ಭಾರತಕ್ಕೆ ಅಕ್ರಮವಾಗಿ ನುಸುಳಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಿದೆ.

ಇಬ್ಬರೂ ಒಂದೇ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನೇಪಾಳಿ ಪ್ರಜೆಯ ಸಹಾಯದಿಂದ ಚೀನಾದ ಪ್ರಜೆ ಭಾರತದ ಗಡಿಯನ್ನು ಪ್ರವೇಶಿಸುತ್ತಿದ್ದಾಗ ಇಬ್ಬರೂ ಸಿಕ್ಕಿಬಿದ್ದರು. ಎಂದು ಹರಿಯ ಪೊಲೀಸ್ ಠಾಣೆ ಉಸ್ತುವಾರಿ ಕಿಶನ್ ಕುಮಾರ್ ಪಾಸ್ವಾನ್ ಹೇಳಿದ್ದಾರೆ. ವಶಕ್ಕೆ ಪಡೆದ ನಂತರ ಈ ಇಬ್ಬರನ್ನು ವಿವಿಧ ಭದ್ರತಾ ಸಂಸ್ಥೆಗಳು ವಿಚಾರಣೆ ನಡೆಸಿವೆ. ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರನ್ನೂ ಹರಿಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಆ ಬಳಿಕ ಎಸ್‌ಎಸ್‌ಬಿಯಿಂದ ಬಂದ ಅರ್ಜಿಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಮರುದಿನ ಅಂದರೆ ಬುಧವಾರ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Category
ಕರಾವಳಿ ತರಂಗಿಣಿ