image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಮ್ಮು ಮತ್ತು ಕಾಶ್ಮೀರದ 32 ಸ್ಥಳಗಳಲ್ಲಿ ಎನ್​ಐಎ ದಾಳಿ

ಜಮ್ಮು ಮತ್ತು ಕಾಶ್ಮೀರದ 32 ಸ್ಥಳಗಳಲ್ಲಿ ಎನ್​ಐಎ ದಾಳಿ

ನವದೆಹಲಿ: ಪ್ರದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಪಿತೂರಿ ಪ್ರಕರಣ ಸಂಬಂಧ ಇಂದು ಜಮ್ಮು ಮತ್ತು ಕಾಶ್ಮೀರದ 32 ಸ್ಥಳಗಳಲ್ಲಿ ಎನ್​ಐಎ ದಾಳಿ ನಡೆಸಿದೆ. ಕೇಂದ್ರಾಡಳಿತ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಈ ದಾಳಿ ಸಾಗಿದ್ದು, 2022ರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೊರೆತ ನಿರ್ದಿಷ್ಟ ಮಾಹಿತಿ ಮೇರೆಗೆ ಎನ್​ಐಎ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶೋಧವು 2022ರ ಪ್ರಕರಣದ ಭಯೋತ್ಪಾದಕ ಪಿತೂರಿಗೆ ಸಂಬಂಧಿಸಿದ್ದು, ಅನೇಕ ಭಯೋತ್ಪಾದನಾ ಸಂಘಟನೆಯ ಕಾರ್ಯಕರ್ತರ ವಿರುದ್ಧ ಶೋಧ ಸಾಗಿದೆ. ಈ ಶೋಧದ ಮೂಲಕ ಜಮ್ಮು ಪ್ರಾಂತ್ಯದಲ್ಲಿನ ಭಯೋತ್ಪಾದಕರ ನೆಟ್​​ವರ್ಕ್​ ಅನ್ನು ಹತ್ತಿಕ್ಕುವ ಗುರಿ ಹೊಂದಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸಾಮರಸ್ಯ ಮತ್ತು ಶಾಂತಿ ಕದಡುವ ಉದ್ದೇಶದಿಂದ ನಿಷೇಧಿತ ಭಯೋತ್ಪಾದಕ ಸಂಘಟನೆ ಸ್ಥಳೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದು, ಅದನ್ನು ಕೊನೆಗೊಳಿಸುವ ಉದ್ದೇಶ ತನಿಖಾ ಸಂಸ್ಥೆಯಾದ್ದಾಗಿದೆ.

ಕಳೆದ ವರ್ಷ ಮೇ 11ರಂದು ಎನ್​ಐಎ, ಈ ಪ್ರಕರಣ ಸಂಬಂಧ ಜಮ್ಮು ಪ್ರಾಂತ್ಯದಲ್ಲಿ ಆರು ಕಡೆ ಶೋಧ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಟಿಕಿ ಬಾಂಬ್‌ಗಳು, ಐಇಡಿಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾತ್ಮಕ ದಾಳಿಗಳನ್ನು ನಡೆಸಲು ನಿಷೇಧಿತ ಗುಂಪು ಶಾಖೆಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿತ್ತು. ಈ ಶೋಧದಲ್ಲಿ ಡಿಜಿಟಲ್​ ಸಾಧನಗಳು, ದಾಖಲೆಗಳು ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. 2022ರ ಜೂನ್​ 21ರಂದು ಇಲ್ಲಿನ ಭಯೋತ್ಪಾದಕ ನೆಟ್​ವರ್ಕ್​ ಕಾರ್ಯಾಚರಣೆ ಹತ್ತಿಕ್ಕಲು ಎನ್​ಐಎ ಸುಮೋಟೋ ಕೇಸ್​ ದಾಖಲಿಸಿಕೊಂಡಿತ್ತು.

Category
ಕರಾವಳಿ ತರಂಗಿಣಿ