ನವದೆಹಲಿ: ಪ್ರತೀ ವರ್ಷ ನಡೆಯುವಂತಹ ಅಖಿಲ ಭಾರತ ಪೀಠಾಶೀನಾಧಿಕಾರಿಗಳ ಸಮ್ಮೇಳನವನ್ನು ಸುದೀರ್ಘ 22 ವರ್ಷಗಳ ನಂತರ ಕರ್ನಾಟಕದಲ್ಲಿ ನಡೆಸುವ ಕುರಿತು ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯ. ಟಿ. ಖಾದರ್ ಫರೀದ್ ರವರು ಇಂದು ಸನ್ಮಾನ್ಯ ಲೋಕಸಭಾಧಕ್ಯರಾದ ಶ್ರೀ ಒಮ್ ಬಿರ್ಲಾ ಅವರನ್ನು ಭೇಟಿ ಮಾಡಿ 85ನೇ ಅಖಿಲ ಭಾರತ ಪೀಠಾಶೀನಾಧಿಕಾರಿಗಳ ಸಮ್ಮೇಳನವನ್ನು ನಡೆಸುವ ಅಭಿ ಲಾಷೆಯನ್ನು ವ್ಯಕ್ತಪಡಿಸಿದರು. ಸನ್ಮಾನ್ಯ ಸಭಾದಕ್ಷರ ನಿಲುವನ್ನು ಸನ್ಮಾನ್ಯ ಲೋಕ ಸಭಾಧ್ಯಕ್ಷರು ಸಕರಾತ್ಮಕ ವಾಗಿ ಸ್ವೀಕರಿಸಿ,ಈ ಕುರಿತು ಇದೇ ಸೆಪ್ಟೆಂಬರ್ 23 ಮತ್ತು 24 ರಂದು ದೆಹಲಿಯ ನೂತನ ಸಂಸತ್ ಭವನದಲ್ಲಿ ನಡೆಯಲಿರುವ ಅಖಿಲ ಭಾರತ ಪೀಠಾಶೀನಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿರುತ್ತಾರೆ.
ಸನ್ಮಾನ್ಯ ಲೋಕಸಭಾಧಕ್ಷರನ್ನು ಬೇಟಿ ಮಾಡಿದ ಈ ಸಂದರ್ಭದಲ್ಲಿ ಶ್ರೀ ಯು.ಟಿ. ಖಾದರ್ ರವರು,ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸದನವನ್ನು ಕ್ರಿಯಾತ್ಮಕವಾಗಿ ನಡೆಸಲು ಸನ್ಮಾನ್ಯ ಸದಸ್ಯರುಗಳ ಭಾಗವಹಿಸುವಂತೆ ಪ್ರೇರೇಪಿಸುವಲ್ಲಿ ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆಯೂ ಸನ್ಮಾನ್ಯ ಲೋಕಸಭಾಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ. ಅವುಗಳಲ್ಲಿ ಪ್ರಮುಖವಾದುವುಗಳು ಈ ಕೆಳಕಂಡಂತಿವೆ.
▪️ಸದನವನ್ನು ಈ ಹಿಂದೆ ಸಾಧಾರಣವಾಗಿ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭಿಸಲಾಗುತ್ತಿತ್ತು, ಆದರೆಕಾ ರ್ಯಕಲಾಪಗಳು ಹೆಚ್ಚು ಸಮಯ ನಡೆಯುವಂತಾಗಲು ಬೆಳಿಗ್ಗೆ 9.00 ಗಂಟೆಯಿಂದ ಪ್ರಾರಂಭಿಸಲು ತೀರ್ಮಾನ.
▪️ಸದನವನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಅನುಕೂಲವಾಗುವಂತೆ ಕೊರಂ ಗೆ ಸಹಕರಿಸುವಂತಹ ಪ್ರಥಮ 23 ಸದಸ್ಯರುಗಳನ್ನು ಗೌರವಪೂರಕವಾಗಿ ಸನ್ಮಾನಿಸಲು ತಿರ್ಮಾನ.
▪️ಈ ನಿಟ್ಟಿನಲ್ಲಿ ಮಾನ್ಯ ಸದಸ್ಯರುಗಳಿಗೆ ವಿಧಾನ ಸಭಾಂಗಣದ ಮೊಗಸಾಲೆಯಲ್ಲಿಯೇ ಅತ್ಯತ್ತಮವಾದ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಬೋಜನದ ವ್ಯವಸ್ಥೆ.
▪️ಸದನದಲ್ಲಿ ಮಾನ್ಯ ಸದಸ್ಯರು ಒಟ್ಟಾರೆಯಾಗಿ ಕಲಾಪದ ಸಮಯದಲ್ಲಿ ಕಳೆದ ಸಮಯವನ್ನು ಗುರುತಿಸಲು ಆರ್ಟಿಪಿಸಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಳಕೆಯಿಂದ ಮಾಹಿತಿ ಉಪ ಲಬ್ದ ಮಾಡುವುದು.
▪️ಸದನದಲ್ಲಿ ಎಲ್ಲಾ ಸದಸ್ಯರುಗಳು ಗಮನಿಸುವಂತಹ ಅತ್ಯುತ್ತಮ ಗುಣಮಟ್ಟದ ಲೋಹದಲ್ಲಿ ಸಂವಿಧಾನ ಪೀಠಿಕೆಯನ್ನು ವಿಧಾನ ಸಭೆಯ ಸಭಾಂಗಣದಲ್ಲಿ ಅಳವಡಿಕೆ.
▪️ಮಾನ್ಯ ಶಾಸಕರುಗಳ ಬಹುದಿನಗಳ ಬೇಡಿಕೆಯಾದ, ನವದೆಹಲಿಯಲ್ಲಿನ ಸಂಸತ್ತಿನ ಸದಸ್ಯರುಗಳ ಅನುಕೂಲಕ್ಕಾಗಿರುವಂತಹ ಕಾನಸ್ಟಿಸ್ಕೂಶನ್ ಕ್ಲಬ್ ಮಾದರಿಯಲ್ಲಿ ಕರ್ನಾಟದಲ್ಲೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕರ್ನಾಟಕ ವಿಧಾನ ಮಂಡಲ ಸಂಸ್ಥೆಯನ್ನು ಬೆಂಗಳೂರಿನ ಬಾಲಬ್ರೂಹಿ ಕಟ್ಟಡದಲ್ಲಿ ದಿನಾಂಕ 12ನೇ ಪೆಬ್ರುವರಿ, 2024ರಲ್ಲಿ ಉದ್ಘಾಟಿಸುವ ಮೂಲಕ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ.
ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ