ಬೌಲ್ಡರ್: ಪ್ಯಾಲೆಸ್ತೇನ್ ಪರ ಘೋಷಣೆ ಕೂಗತ್ತ ವ್ಯಕ್ತಿಯೊಬ್ಬ ಕೊಲೊರಾಡೋದ ಬೌಲ್ಡರ್‌ನಲ್ಲಿರುವ ಹೊರಾಂಗಣ ಮಾಲ್‌ನಲ್ಲಿ ಉದ್ದೇಶಿತ ಭಯೋತ್ಪಾದಕ ದಾಳಿ ನಡೆಸಿದ್ದಾನೆ ಎಂದು ಎಫ್‌ಬಿಐ ತಿಳಿಸಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಜಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಕುರಿತು ಚರ್ಚಿಸಲು ಇಸ್ತೇಲ್ ಮೂಲದ ನಾಗರಿಕರು ಸಭೆ ಸೇರಿದ್ದ ವೇಳೆ ಈ ಘಟನೆ ನಡೆದಿದೆ. 45 ವರ್ಷದ ಮೊಹಮ್ಮದ್ ಸಬ್ರಿ ಸೋಲಿಮಾನ್ ಎಂಬ ವ್ಯಕ್ತಿ ಫ್ರೀ ಪ್ಯಾಲೆಸ್ತೇನ್ ಎಂದು ಕೂಗುತ್ತಾ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯಲ್ಲಿ ಆರೋಪಿ ಸೋಲಿಮಾನ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಸ್ವರೂಪದ ಗಾಯದಿಂದ ಆತ ಬಳಲುತ್ತಿದ್ದಾನೆ ಎಂಬುದನ್ನು ತಿಳಿಸಿಲ್ಲ. ಬೌಲ್ಡರ್ ನಗರದ ಮಧ್ಯಭಾಗದಲ್ಲಿರುವ ಸ್ಟ್ರೀಟ್ ಪೆಡಸ್ಟ್ರೀಯನ್ ಮಾಲ್‌ನಲ್ಲಿ ಈ ದಾಳಿ ನಡೆದಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿರುವ ನಡುವೆ ಅಮೆರಿಕದಲ್ಲಿ ಯಹೂದಿ ವಿರೋಧಿ ಹಿಂಸಾಚಾರದ ಹೆಚ್ಚಳಕ್ಕೆ ಗಾಜಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳು ಚರ್ಚಿಸಲು ರನ್ ಫಾರ್ ದೇರ್ ಲೈವ್ಸ್ ಎಂಬ ಸ್ವಯಂಸೇವಕ ಗುಂಪಿನೊಂದಿಗೆ ಪ್ರದರ್ಶನಕಾರರು ಸಭೆಯನ್ನು ಇಲ್ಲಿ ಆಯೋಜಿಸಿದ್ದರು.
ವಾಷಿಂಗ್ಟನ್‌ನಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಎರಡು ವಾರಗಳ ಬಳಿಕ ಈ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ಶಿಕಾಗೋ ವ್ಯಕ್ತಿ ಪಾಲೆಸ್ತೇನಿಗಾಗಿ, ಗಾಜಾಗಾಗಿ ಈ ಕೃತ್ಯ ಮಾಡಿದೆ ಎಂದು ಕೂಗುತ್ತಿರುವುದು ಕೇಳಿ ಬಂದಿದೆ. ಬೌಲ್ಡರ್ ದಾಳಿಯನ್ನು ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸುತ್ತಿರುವುದಾಗಿ ವಾಷಿಂಗ್ಟನ್‌ನಲ್ಲಿರುವ ಎಫ್‌ಬಿಐ ನಾಯಕರು ಹೇಳಿದ್ದಾರೆ. ಈ ಜನಾಂಗೀಯ ಪ್ರೇರಣೆಗಳಿಂದ ನಡೆಸಲ್ಪಡುವ ಹಿಂಸಾಚಾರದ ಕೃತ್ಯಗಳು ಹೆಚ್ಚುತ್ತಿದೆ. ಈ ಕುರಿತ ಪ್ರಕರಣಗಳನ್ನು ತನಿಖೆ ನಡೆಸುವ ನ್ಯಾಯ ಇಲಾಖೆ ಯಹೂದಿ ಅಮೆರಿಕನ್ನರ ಮೇಲಿನ ಇತ್ತೀಚಿನ ದಾಳಿಗಳು ಅನಗತ್ಯ ಹಿಂಸಾಚಾರ ಎಂದು ಕರೆದಿದೆ.