image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಓಪಾಲ್​ ಸುಚಾತಾ ಚೌಂಗಶ್ರೀ ಮುಡಿಗೆ ವಿಶ್ವ ಸುಂದರಿ ಕಿರೀಟ...

ಓಪಾಲ್​ ಸುಚಾತಾ ಚೌಂಗಶ್ರೀ ಮುಡಿಗೆ ವಿಶ್ವ ಸುಂದರಿ ಕಿರೀಟ...

ಹೈದರಾಬಾದ್: 72ನೇ ಪ್ರತಿಷ್ಟಿತ ವಿಶ್ವ ಸುಂದರಿ ಕಿರೀಟವನ್ನು ಥಾಯ್ಲೆಂಡ್​ನ ಓಪಾಲ್​ ಸುಚಾತಾ ಚೌಂಗಶ್ರೀ ಅವರು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿರುವ ಚೌಂಗಶ್ರೀ ಅವರು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಇಲ್ಲಿರುವ ಅನೇಕ ದೇವಾಲಯಗಳಿಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದರು. ತಮ್ಮ ಅತೀ ದೊಡ್ಡ ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಭಾರತ ಹಾಗೂ ಥಾಯ್ಲೆಂಡ್​ ನಡುವಿನ ಸಾಂಸ್ಕೃತಿಕ ಸಂಬಂಧಗಳ ಕುರಿತು ಮಾತನಾಡಿದರು.

"ಭಾರತದಲ್ಲಿ ತುಂಬಾ ಆಕರ್ಷಕವಾಗಿರುವ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಿಗೆ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ನಾನು ಹೇಳಿದಂತೆ ಭಾರತ ಹಾಗೂ ಥಾಯ್ಲೆಂಡ್​ ನಡುವೆ ನಾವು ಬಹಳಷ್ಟು ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹಂಚಿಕೊಳ್ಳುತ್ತೇವೆ. ಆದ್ದರಿಂದ ಆ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಆ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಆಸೆ ನನ್ನದು" ಎಂದರು.

"ಭಾರತ ಹಾಗೂ ಥಾಯ್ಲೆಂಡ್​ ನಡುವಿನ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧಗಳಿಗೆ ದೀರ್ಘ ಇತಿಹಾಸವಿದೆ. ಥಾಯ್ಲೆಂಡ್​ನಲ್ಲಿ ರಾಮಾಯಣವನ್ನು 'ರಾಮಕಿಯೆನ್​' ಎಂದು ಕರೆಯಲಾಗುತ್ತದೆ. ಭಾರತೀಯ ಮಹಾಕಾವ್ಯ, ಥಾಯ್​ ಸಾಹಿತ್ಯ, ಕಲೆ, ಮತ್ತು ರಾಜ ಸಂಪ್ರದಾಯಗಳ ಮೇಲೆ ಗಾಢವಾಗಿ ಪ್ರಭಾವ ಬೀರಿದೆ. ಮೂಲ ಭಾರತೀಯ ರಾಮಾಯಣವನ್ನು ಆಧರಿಸಿ, ತನ್ನದೇ ಆದ ವ್ಯಾಖ್ಯಾನಗಳು ಮತ್ತು ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳೊಂದಿಗೆ ವಿಶಿಷ್ಟವಾದ ಥಾಯ್​ ರಾಮಕಿಯೆನ್​ ರಚಿಸಲಾಗಿದೆ. ಥಾಯ್​ ಆವೃತ್ತಿಯಲ್ಲಿ ಹನುಮಂತನಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದರ ಜೊತೆಗೆ ಹನುಮಂತನನ್ನು ಹೆಚ್ಚು ತಮಾಷೆಯ ಪಾತ್ರವಾಗಿಯೂ ಬರೆಯಲಾಗಿದೆ" ಎಂದು ತಿಳಿಸಿದರು. ಹೈದರಾಬಾದ್​ನಲ್ಲಿ ಶನಿವಾರ ರಾತ್ರಿ ನಡೆದಂತ ವರ್ಣರಂಜಿತ ಮಿಸ್ ವರ್ಲ್ಡ್​-2025ರ ಗ್ರ್ಯಾಂಡ್​ ಫಿನಾಲೆಯಲ್ಲಿ, ಮಳೆಯರ ಪರವಾದ ತಮ್ಮ ದೃಢ ಮಾತುಗಳಿಂದ ಓಪಾಲ್​ ಸುಚಾತಾ ಚೌಂಗಶ್ರೀ ಅವರು 72ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸುಚಾತಾ ಅವರು ಕೊನೆಯ ಸುತ್ತಿನಲ್ಲಿ, "ನಾನು, ಭಾರತದ ತೆಲಂಗಾಣದಲ್ಲಿರುವ ಎಲ್ಲಾ ಮಹಿಳೆಯರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ನಿಮ್ಮ ಎಲ್ಲಾ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ, ಮತ್ತು ನಿಮ್ಮ ಆಂತರ್ಯದ ಸೌಂದರ್ಯದಿಂದ ನೀವೆಲ್ಲರೂ, ನನ್ನ ಈ ಪ್ರಯಾಣದಲ್ಲಿ, ನನಗೆ ನಿಜವಾಗಿಯೂ ಸ್ಫೂರ್ತಿ ನೀಡಿದ್ದೀರಿ. ಹಾಗೂ ಭಾರತದ ಎಲ್ಲಾ ಮಹಿಳೆಯರಿಂದ ನಾನು ಪಡೆದ ಎಲ್ಲಾ ಬೆಂಬಲ ಮತ್ತು ಕಾಳಜಿ ಅಮೋಘವಾದದ್ದು. ಇಲ್ಲಿರುವ ಮಹಿಳೆಯರೆಲ್ಲರೂ ತುಂಬಾ ಬಲಶಾಲಿಗಳು. ತಮ್ಮ ಜೀವನದಲ್ಲಿ ಅಂದುಕೊಂಡದ್ದೆಲ್ಲವನ್ನೂ ಸಾಧಿಸುವಷ್ಟು ಸಮರ್ಥರು ಎಂದು ನಾನು ಭಾವಿಸುತ್ತೇನೆ" ಎನ್ನುವ ಮಾತುಗಳನಾಡಿದ್ದರು.

Category
ಕರಾವಳಿ ತರಂಗಿಣಿ