image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಕ್ಕಿನ ಮೇಲಿನ ಆಮದು ಸುಂಕ ದ್ವಿಗುಣಗೊಳಿಸಿದ ಟ್ರಂಪ್

ಉಕ್ಕಿನ ಮೇಲಿನ ಆಮದು ಸುಂಕ ದ್ವಿಗುಣಗೊಳಿಸಿದ ಟ್ರಂಪ್

ಅಮೆರಿಕ: ಪೆನ್ಸಿಲ್ವೇನಿಯಾ ಉಕ್ಕಿನ ಉದ್ಯಮವನ್ನು ರಕ್ಷಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಉಕ್ಕಿನ ಮೇಲಿನ ಸುಂಕವನ್ನು ಶೇ 50ರಷ್ಟು ಏರಿಸುವುದಾಗಿ ಘೋಷಣೆ ಮಾಡಿದ್ದಾರೆ. ಪರಿಣಾಮವಾಗಿ ಇದೀಗ ಉಕ್ಕಿನ ಬೆಲೆಯಲ್ಲಿ ಹೆಚ್ಚಳ ಕಾಣಲಿದೆ. ತಮ್ಮ ಟ್ರೂತ್​​ ​ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ಅವರು, ಅಲ್ಯೂಮಿನಿಯಂ ಸುಂಕವನ್ನು ಶೇ 50ಕ್ಕೆ ಏರಿಸುವ ಮೂಲಕ ದ್ವಿಗುಣಗೊಳಿಸಲಾಗಿದೆ. ಈ ಸುಂಕ ಹೆಚ್ಚಳವೂ ಬುಧವಾರದಿಂದ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ.

ಪಿಟ್ಸ್‌ಬರ್ಗ್‌ನ ಉಪನಗರದಲ್ಲಿರುವ ಅಮೆರಿಕದ ಸ್ಟೀಲ್ಸ್​ಮಾನ್ ವ್ಯಾಲಿ ವರ್ಕ್ಸ್ ಇರ್ವಿನ್ ಪ್ಲಾಂಟ್‌ನಲ್ಲಿ ಮಾತನಾಡಿದ ಟ್ರಂಪ್, ಜಪಾನ್‌ನ ನಿಪ್ಪಾನ್ ಸ್ಟೀಲ್, ಅಮೆರಿಕದ ಪ್ರತಿಷ್ಠಿತ ಉಕ್ಕು ತಯಾರಕ ಕಂಪನಿಯಲ್ಲಿ ಹೂಡಿಕೆ ಮಾಡುವ ಒಪ್ಪಂದದ ಕುರಿತು ಚರ್ಚಿಸಿದರು. ಈ ಮುಂಚೆ ಅಮೆರಿಕದಲ್ಲಿ ಜಪಾನ್​ನ ನಿಪ್ಪಾನ್​ ಸ್ಟೀಲ್​ ಖರೀದಿಯನ್ನು ತಡೆಯುವ ಯತ್ನವನ್ನು ಟ್ರಂಪ್​ ಮಾಡಿದರೂ ಕಳೆದ ವಾರ ನಿಪ್ಪಾನ್​ ಜೊತೆಗೆ ಭಾಗಶಃ ಮಾಲೀಕತ್ವಕ್ಕೆ ಸಹಿ ಹಾಕಿದ್ದಾರೆ.

ಆಮದು ಮಾಡಿಕೊಂಡ ಉಕ್ಕಿನ ಮೇಲಿನ ಸುಂಕಗಳನ್ನು ದ್ವಿಗುಣಗೊಳಿಸುವ ಮೂಲಕ ಅಮೆರಿಕದ ಉಕ್ಕು ಉದ್ಯಮವನ್ನು ಭದ್ರ ಮಾಡಲಾಗುವುದು. ಆದರೆ, ಈ ಹೆಚ್ಚಳವೂ ಅದರ ಬೆಲೆಯನ್ನು ಹೆಚ್ಚಿಸಲಿದೆ. ಟ್ರಂಪ್​ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಉಕ್ಕಿನ ಬೆಲೆ ಶೇ 16ರಷ್ಟು ಏರಿಕೆಯಾಗಿದೆ ಎಂದು ಸರ್ಕಾರಿ ಉತ್ಪಾದನಾ ಬೆಲೆ ಸೂಚ್ಯಂಕ ತಿಳಿಸಿದೆ.

Category
ಕರಾವಳಿ ತರಂಗಿಣಿ