image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನದ​ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ಆರೋಪಿಯ ಬಂಧನ

ಪಾಕಿಸ್ತಾನದ​ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ಆರೋಪಿಯ ಬಂಧನ

ನವದೆಹಲಿ: ಭಾರತೀಯ ಸಿಮ್​ ಕಾರ್ಡ್​​ಗಳನ್ನು ಪೂರೈಸುವ ಮೂಲಕ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ (ಪಿಐಒ) ಬೇಹುಗಾರಿಕೆಗೆ ನೆರವಾದ ಆರೋಪದ ಮೇಲೆ ರಾಜಸ್ಥಾನದ ವ್ಯಕ್ತಿಯನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಕಾಸಿಂ (34) ಎಂದು ಗುರುತಿಸಲಾಗಿದ್ದು, ಆರೋಪಿಯು 2024ರ ಆಗಸ್ಟ್​ ಮತ್ತು ಮಾರ್ಚ್​ 2025ರಂದು ಪಾಕಿಸ್ತಾನಕ್ಕೆ ತೆರಳಿದ್ದು, 90 ದಿನಗಳ ಕಾಲ ಅಲ್ಲಿ ಉಳಿದುಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಭೇಟಿ ವೇಳೆ ಈತ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್​ ಸರ್ವೀಸ್​ ಇಂಟೆಲಿಜೆನ್ಸ್​ (ಐಎಸ್​ಐ)ನ ಅಧಿಕಾರಿಗಳನ್ನು ಭೇಟಿಯಾಗಿರುವ ಶಂಕೆ ಇದೆ. ಕಾಸಿಂ ರಾಜಸ್ಥಾನದ ದೀಗ್ ಜಿಲ್ಲೆಯ ಗಂಗೋರಾ ಗ್ರಾಮದ ನಿವಾಸಿಯಾಗಿದ್ದು, ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2024ರ ಸೆಪ್ಟೆಂಬರ್​ನಲ್ಲಿ ಪಿಐಒ ಅಧಿಕಾರಿಗಳು ಭಾರತೀಯ ಮೊಬೈಲ್​ ನಂಬರ್​ಗಳ ದುರ್ಬಳಕೆ ಮಾಡುವ ಮೂಲಕ ಭಾರತೀಯ ಸೇನೆ ಮತ್ತು ಸರ್ಕಾರದ ಯೋಜನೆಗಳ ಕುರಿತಾದ ಸೂಕ್ಷ್ಮ ವಿಚಾರವನ್ನು ಮಾಹಿತಿ ಪಡೆಯುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ವಿಶೇಷ ಘಟಕ ಪಡೆದಿತ್ತು. ಈ ಸಿಮ್​ಗಳನ್ನು ಭಾರತದಲ್ಲಿ ಖರೀದಿಸಿ, ಭಾರತೀಯ ಪ್ರಜೆಗಳ ಸಹಾಯದಿಂದ ಗಡಿಯಾಚೆಗೆ ತಲುಪಿಸುತ್ತಿರುವ ಆರೋಪ ಕೇಳಿ ಬಂದಿತ್ತು.

Category
ಕರಾವಳಿ ತರಂಗಿಣಿ