image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುಎಸ್​ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್‌ ಸುಂಕ ವಿಧಿಸುವುದನ್ನು ಮುಂದುವರೆಸಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಅನುಮತಿ

ಯುಎಸ್​ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್‌ ಸುಂಕ ವಿಧಿಸುವುದನ್ನು ಮುಂದುವರೆಸಲು ಅಮೆರಿಕದ ಮೇಲ್ಮನವಿ ನ್ಯಾಯಾಲಯ ಅನುಮತಿ

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ಸುಂಕ ನೀತಿಗೆ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಅವರಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ. ಮೇಲ್ಮನವಿ ನ್ಯಾಯಾಲಯವು ಚೀನಾ ಮತ್ತು ಇತರ ವ್ಯಾಪಾರ ಪಾಲುದಾರರ ಮೇಲೆ ಟ್ರಂಪ್​ ಹೇರಿದ್ದ ವ್ಯಾಪಕ ಆಮದು ಸುಂಕಗಳನ್ನು ತಾತ್ಕಾಲಿಕವಾಗಿ ಎತ್ತಿಹಿಡಿದಿದೆ. ಈ ಅಲ್ಪಾವಧಿಯ ರಿಲೀಫ್​ ಹಿನ್ನೆಲೆಯಲ್ಲಿ ಅಮೆರಿಕದ ಆಡಳಿತವು ಮೇಲ್ಮನವಿ ಪ್ರಕ್ರಿಯೆಯನ್ನು ಮುಂದುವರೆಸಬಹುದಾಗಿದೆ.

ಗಮನಾರ್ಹವಾಗಿ, ಯುಎಸ್ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯವು ಟ್ರಂಪ್ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಘೋಷಿಸಿದ ಹೆಚ್ಚಿನ ಸುಂಕಗಳಿಗೆ ಬುಧವಾರ ತಡೆ ವಿಧಿಸಿತ್ತು. ಟ್ರಂಪ್​ ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತ್ತು. ಸುಂಕ ವಿಧಿಸುವುದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಗಾಗಿ ವಾಣಿಜ್ಯ ನ್ಯಾಯಾಲಯವು ಶ್ವೇತಭವನಕ್ಕೆ 10 ದಿನಗಳ ಕಾಲಾವಕಾಶ ನೀಡಿತ್ತು. ಇದನ್ನು ಆಡಳಿತಾತ್ಮಕ ತಡೆಯಾಜ್ಞೆ ಎಂದೇ ಕರೆಯಲಾಗುತ್ತದೆ.

ಇದರ ಬೆನ್ನಲ್ಲೇ, ತಮ್ಮ ವ್ಯಾಪಾರ ನೀತಿಗಳ ಕುರಿತಾದ ಕಾನೂನು ವಿವಾದಗಳಲ್ಲಿನ ಇತ್ತೀಚಿನ ತಿರುವನ್ನು ಪ್ರಸ್ತಾಪಿಸಿದ್ದ ಟ್ರಂಪ್, ನ್ಯಾಯಾಲಯದ ತೀರ್ಪಿನ ಕುರಿತಂತೆ ವಾಗ್ದಾಳಿ ನಡೆಸಿದ್ದರು. ಕೋರ್ಟ್​ ತೀರ್ಪನ್ನು 'ಭಯಾನಕ' ಎಂದು ಕರೆದಿದ್ದರು. ಈ ಅಡಚಣೆಯನ್ನು ತ್ವರಿತ, ನಿರ್ಣಾಯಕ ಹಾಗೂ ಶಾಶ್ವತವಾಗಿ ಹಿಮ್ಮೆಟ್ಟಿಸುವುದಾಗಿ ಹೇಳಿದ್ದರು.

Category
ಕರಾವಳಿ ತರಂಗಿಣಿ