image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಸಾದ ಅಧಿಕೃತ ಜಾಲತಾಣದಲ್ಲಿನ ಸೈಬರ್​ ಲೋಪವನ್ನು ಪತ್ತೆ ಮಾಡಿದ 17 ರ ಭಾರತದ ಪೋರ

ನಾಸಾದ ಅಧಿಕೃತ ಜಾಲತಾಣದಲ್ಲಿನ ಸೈಬರ್​ ಲೋಪವನ್ನು ಪತ್ತೆ ಮಾಡಿದ 17 ರ ಭಾರತದ ಪೋರ

ಬಿಹಾರ: ಬಿಹಾರದ 17 ವರ್ಷದ ಬಾಲಕನೊಬ್ಬ ನಾಸಾದ ಅಧಿಕೃತ ಜಾಲತಾಣದಲ್ಲಿನ ಸೈಬರ್​ ಲೋಪವನ್ನು ಪತ್ತೆ ಮಾಡಿ, ಸರಿಪಡಿಸುವ ಮೂಲಕ ಪ್ರತಿಷ್ಠಿತ ಸೈಬರ್​ ಸೆಕ್ಯೂರಿಟಿ ಹಾಲ್​ ಆಫ್​ ಫೇಮ್​ ಪ್ರಶಸ್ತಿಗೆ ಭಾಜನನಾಗಿ ಸುದ್ದಿಯಾಗಿದ್ದಾನೆ. ಸಮಸ್ಥಿಪುರ ಜಿಲ್ಲೆಯ ಪಹೇಪುರ ನಿವಾಸಿ ರಿಂಕೇಶ್​ ಕುಮಾರ್​ ಅವರ ಪುತ್ರ ರಾಮ್​ ಜೀ ರಾಜ್​ ಈ ಸಾಧನೆ ಮಾಡಿದ 17 ಹರೆಯದ ವಿದ್ಯಾರ್ಥಿ ಎಥಿಕಲ್​ ಹ್ಯಾಕರ್​ ಆಗಿರುವ ರಾಮ್​ ಜಿ, ವೆಬ್​ಸೈಟ್​ಗಳನ್ನು ಹೆಚ್ಚು ಸುರಕ್ಷತಗೊಳಿಸಲು ಸಹಾಯ ಮಾಡುತ್ತಿರುತ್ತಾರೆ. ಕಳೆದ ಮೇ 14ರಂದು ಮುಂಜಾನೆ 2 ಗಂಟೆಗೆ ಈತ ಅನೇಕ ವೆಬ್​ಸೈಟ್​ಗಳ ಭದ್ರತೆ ಪರಿಶೀಲನೆ ನಡೆಸುತ್ತಿದ್ದ. ಈತ 50ಕ್ಕೂ ಹೆಚ್ಚು ವೆಬ್​ಸೈಟ್​ಗಳ ಸುರಕ್ಷತಾ ವ್ಯವಸ್ಥೆಯನ್ನು ಸ್ಕಾನ್​ ಮಾಡಿದ್ದಾನೆ. ಈ ವೇಳೆ ಆತ ನಾಸಾ ವೆಬ್​ಸೈಟ್​ನಲ್ಲಿ ದೋಷ ಇರುವುದನ್ನು ಪತ್ತೆ ಹಚ್ಚಿದ್ದ.

ವೆಬ್​ಸೈಟ್​ನ ದೋಷ ಮತ್ತು ಬಗ್​ ಇರುವ ಕುರಿತು ವರದಿಯನ್ನು ಅಮೆರಿಕದ ಬಾಹ್ಯಕಾಶ ಸಂಸ್ಥೆಗೆ ಇ ಮೇಲ್​ ಮೂಲಕ ರವಾನಿಸಿದ್ದ. ಮೇ 19ರಂದು ನಾಸಾ ಅಧಿಕೃತವಾಗಿ ಇದನ್ನು ಸ್ವೀಕರಿಸಿ, ಆ ಸಮಸ್ಯೆಯನ್ನು ಸರಿಪಡಿಸಲು ಮುಂದಾಗಿದೆ ಎಂದು ರಾಮ್​ ಜಿ ಮಾಹಿತಿ ನೀಡಿದರು. ರಾಮ್​ ಜಿ ಬಾಲ್ಯದಲ್ಲೇ ಗೇಮಿಂಗ್​ ಬಗ್ಗೆ ಆಸಕ್ತಿ ಹೊಂದಿದ್ದು, ಗೇಮಿಂಗ್​ ಜಗತ್ತಿನಲ್ಲಿ ಏನಾದರೂ ಸಾಧನೆ ಮಾಡಬೇಕು. ಇಲ್ಲಿ ವಿಶಿಷ್ಟ ಚಾಪು ಮಾಡಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದರು. ಈ ತಮ್ಮ ಒಲವು ಎಥಿಕಲ್​ ಹ್ಯಾಕರ್​ ಆಗುವಲ್ಲಿ ಸಹಾಯವಾಯಿತು ಎಂದು ಅವರು ತಿಳಿಸಿದ್ದಾರೆ.

ಬಾಲ್ಯದಲ್ಲಿದ್ದಾಗ ಗೇಮಿಂಗ್​ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ನನಗೆ, ಇದನ್ನು ಹೇಗೆ ನಿರ್ಮಿಸುತ್ತಾರೆ ಎಂಬ ಕುತೂಹಲವಿತ್ತು. ಈ ನನ್ನ ಆಸಕ್ತಿ ಕೋಟಿಂಗ್​, ಗೇಮ್​ ಅಭಿವೃದ್ದಿ ಮತ್ತು ವೆಬ್​​ ಅಭಿವೃದ್ಧಿಗೆ ಮುಂದಾಗುವಂತೆ ಮಾಡಿತು. ಬಳಿಕ ಹ್ಯಾಕಿಂಗ್​ ಸಂಬಂಧಿತ ಕೆಲವು ಸಿನಿಮಾಗಳನ್ನು ನಾನು ನೋಡಿ. ಇದು ನನಗೆ ಈ ಹ್ಯಾಕಿಂಗ್​ನಲ್ಲಿ ಆಸಕ್ತಿ ಮೂಡಿಸಿತು. 11ನೇ ವಯಸ್ಸಿಗೆ ನಾನು ಕೋಡಿಂಗ್​ ಶುರು ಮಾಡಿದೆ. ತನ್ನನ್ನು ತಾನು ವೈಟ್​ ಜ್ಯಾಟ್​ ಹ್ಯಾಕರ್​ ಎಂದು ಕರೆದುಕೊಂಡಿರುವ ರಾಜ್​, ಡಿಜಿಟಲ್​ ಜಗತ್ತಿನಲ್ಲಿ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಸೈಬರ್​ ಸೆಕ್ಯೂರಿಟಿ ಜಗತ್ತಿನ ನಂಟಿನ ಜೊತೆಗೆ ರಾಜ್​​, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣವನ್ನು ಸುಧಾರಿಸಲು ಎಐ - ಚಾಲಿತ ಸಾಧನಗಳ ಅಭಿವೃದ್ಧಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾಗಿದೆ.

ಮೆಡ್‌ವೆಡ್ ಎಐ, ಫಾರ್ಮ್‌ಐ ಮತ್ತು ಯುವ ಸತಿ ಸೇರಿದಂತೆ ಹಲವು ಕೆಲಸಗಳಿಂದಾಗಿ ರಾಜ್​ ಯುಎಸ್‌ಎ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಈ ದಾಖಲೆಯು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಗುರುತಿಸುವ ಮತ್ತು ಆಚರಿಸುವ ಜಾಗತಿಕ ವೇದಿಕೆ ಆಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರಾಜ್​ ಜೀವನ ಆಧರಿಸಿದ ಚಲನಚಿತ್ರವನ್ನು ಸಹ ನಿರ್ಮಿಸಿದೆ. ರಾಜ್ ಆನ್‌ಲೈನ್ ಮತ್ತು ಆಫ್‌ಲೈನ್ ಮಾಧ್ಯಮಗಳ ಮೂಲಕ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೈಬರ್ ಸಂಬಂಧಿತ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ