ಶ್ರೀನಗರ: ಶ್ರೀನಗರದ ಹೆಗ್ಗುರುತು ಗಡಿಯಾರ ಗೋಪುರದಿಂದ (ಘಂಟಾ ಘರ್) ಕೆಲವು ಮೀಟರ್ ದೂರದಲ್ಲಿರುವ ಜಸ್ಬೀರ್ ಸಿಂಗ್ 100 ವರ್ಷಗಳಿಗೂ ಹಳೆಯದಾದ ಒಣ ಹಣ್ಣುಗಳ ಅಂಗಡಿಯನ್ನು ನಡೆಸುತ್ತಿರುವ ತಮ್ಮ ಪೂರ್ವಜರ ಪರಂಪರೆಯನ್ನು ಹೊಂದಿದ್ದಾರೆ. ಆದರೆ ಕಳೆದ ತಿಂಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರ ಅನುಭವಿಸುತ್ತಿರುವ ವ್ಯಾಪಾರ ಕುಸಿತವು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
"ಒಂದೆಡೆ ಉಷ್ಣಾಂಶ ಹೆಚ್ಚಳದಿಂದಾಗಿ ಮತ್ತೊಂದೆಡೆ ಗ್ರಾಹಕರಿಲ್ಲದೆ ನನ್ನ ಸ್ಟಾಕ್ ಹಾಳಾಗುತ್ತಿದೆ. ಏರುತ್ತಿರುವ ತಾಪಮಾನದಿಂದ ಸ್ಟಾಕ್ ಗೆ ಕೀಟಗಳು ಮುತ್ತಿಕೊಳ್ಳಬಹುದು.
ಶ್ರೀನಗರದಲ್ಲಿರುವ ಕಾಶ್ಮೀರದ ಪ್ರಸಿದ್ಧ ಒಣ ಹಣ್ಣುಗಳ ಮಾರುಕಟ್ಟೆ ಮತ್ತು ರಾಷ್ಟ್ರೀಯ ಹೆದ್ದಾರಿ 44 ರ ಪಕ್ಕದಲ್ಲಿರುವ ಒಣ ಹಣ್ಣುಗಳನ್ನು ಕೊಳ್ಳಲು ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹೆಚ್ಚಿನ ಒಣ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗಿದ್ದರೂ, ಪ್ರವಾಸಿಗರು ಕಾಶ್ಮೀರದಿಂದ ಸ್ಥಳೀಯ ಉತ್ಪನ್ನವೆಂದೇ ಪರಿಗಣಿಸಿ ಹಣ್ಣುಗಳನ್ನು ಖರೀದಿಸಲು ಇಷ್ಟಪಡುತ್ತಾರೆ ಎಂದರು. ಅಂಜೂರ, ಪಿಸ್ತಾ, ಒಣದ್ರಾಕ್ಷಿ ಮತ್ತು ಏಪ್ರಿಕಾಟ್‌ಗಳಂತಹ 70 ಪ್ರತಿಶತಕ್ಕೂ ಹೆಚ್ಚು ಒಣಗಿದ ಹಣ್ಣುಗಳನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು 2024 ರಲ್ಲಿ ಒಟ್ಟು ಆಮದು ನೂರಾರು ಬಿಲಿಯನ್ಗೆ ತಲುಪಿತ್ತು.
ಪ್ರವಾಸಿಗರಿಂದ ಸಾಮೂಹಿಕ ಬುಕಿಂಗ್‌ಗಳನ್ನು ರದ್ದುಗೊಳಿಸಿದ ನಂತರ ಆತಿಥ್ಯ ವಲಯಕ್ಕೆ ನಷ್ಟವನ್ನು ನಿರೀಕ್ಷಿಸಲಾಗಿದ್ದರೂ, ಇದು ತಮ್ಮ ವ್ಯವಹಾರಕ್ಕಾಗಿ ಪ್ರವಾಸಿಗರನ್ನು ಅವಲಂಬಿಸಿರುವ ಒಣ ಹಣ್ಣು ಉದ್ಯಮದಂತಹ ವ್ಯಾಪಾರ ವಲಯಗಳಿಗೆ ಬಹುದೊಡ್ಡ ಹೊಡೆತ ನೀಡಿದೆ. ಪರಿಣಾಮ, ಇದು ಬಾಡಿಗೆ ಕಾರ್ಮಿಕರನ್ನು ವಜಾಗೊಳಿಸುವ ಮೂಲಕ ವೆಚ್ಚವನ್ನು ಕಡಿತಗೊಳಿಸಲು ಸಂಸ್ಥೆಗಳನ್ನು ಪ್ರೇರೇಪಿಸಿದೆ. ಆರ್ಥಿಕತೆಗೆ ಆಗುತ್ತಿರುವ ನಷ್ಟದಿಂದ ಚಿಂತಿತರಾಗಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರವಾಸೋದ್ಯಮವನ್ನು 'ಸಂಘರ್ಷ-ತಟಸ್ಥ ಚಟುವಟಿಕೆ' ಎಂದು ಪರಿಗಣಿಸುವ ಮೂಲಕ ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಪ್ರಯತ್ನಗಳನ್ನು ಮಾಡುತ್ತಿದೆ.