image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟ್ರಂಪ್​ ಆಡಳಿತದ ಉನ್ನತ ಸಲಹೆಗಾರ ಹುದ್ದೆಯನ್ನು ತೊರೆದ ಎಲೋನ್ ಮಸ್ಕ್?

ಟ್ರಂಪ್​ ಆಡಳಿತದ ಉನ್ನತ ಸಲಹೆಗಾರ ಹುದ್ದೆಯನ್ನು ತೊರೆದ ಎಲೋನ್ ಮಸ್ಕ್?

ವಾಷಿಂಗ್ಟನ್ : ಅಧಿಕಾರಿಶಾಹಿ ಸಿಬ್ಬಂದಿ ಕಡಿಮೆ ಮಾಡಲು ಹಾಗೂ ಈ ಬಗ್ಗೆ ಕೂಲಂಕಷ ಪ್ರಯತ್ನಗಳನ್ನು ಮುನ್ನಡೆಸಿದ ನಂತರ ಎಲೋನ್ ಮಸ್ಕ್, ಟ್ರಂಪ್​ ಆಡಳಿತದ ಉನ್ನತ ಸಲಹೆಗಾರ ಹುದ್ದೆಯನ್ನು ತೊರೆದಿದ್ದಾರೆ ಎಂಬುದಾಗಿ ಅಸೋಸಿಯೇಟೆಡ್ ಪ್ರೆಸ್​(AP) ವರದಿ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿನ ವೆಚ್ಚ ಕಡಿತ ಕಾರ್ಯಪಡೆಯ ನೇತೃತ್ವ ವಹಿಸಿದ್ದ ತಮ್ಮ ಸಮಯ "ಮುಗಿಯುತ್ತಿದೆ" ಎಂದು ಬಿಲಿಯನೇರ್ ಎಲೋನ್​ ಮಸ್ಕ್ ಕೂಡಾ ತಮ್ಮ ಎಕ್ಸ್​ ಹ್ಯಾಂಡಲ್​​​​ ಪೋಸ್ಟ್​ ಮೂಲಕ ಹೇಳಿದ್ದಾರೆ. ಈ ಅವಕಾಶ ನೀಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್​ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.

ಅವರ ನಿರ್ಗಮನವನ್ನು ಘೋಷಿಸಿಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಾವಿರಾರು ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಇದು ಸರ್ಕಾರಿ ಸಂಸ್ಥೆಗಳ ನಿರ್ಗಮನ ಮತ್ತು ಮೊಕದ್ದಮೆಗಳ ರಾಶಿಯನ್ನು ಒಳಗೊಂಡ ಪ್ರಕ್ಷುಬ್ಧ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಮ್ಮ ಕ್ರಾಂತಿಕಾರಿ ನಿರ್ಧಾರದ ಹೊರತಾಗಿಯೂ, ಬಿಲಿಯನೇರ್ ಉದ್ಯಮಿ ವಾಷಿಂಗ್ಟನ್‌ನ ಪರಿಚಯವಿಲ್ಲದ ವಾತಾವರಣದಲ್ಲಿ ಹೆಣಗಾಡಬೇಕಾಯಿತು ಮತ್ತು ಅವರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸಾಧಿಸಿದರು ಎಂದು ವರದಿಯಾಗಿದೆ. ಅಧಿಕಾರಿಶಾಹಿಗಳ ವೆಚ್ಚವನ್ನು 2 ಟ್ರಿಲಿಯನ್‌ ಡಾಲರ್​ ನಿಂದ 1 ಟ್ರಿಲಿಯನ್ ಡಾಲರ್​ ಗೆ ಇಳಿಸುವ ಗುರಿ ಹೊಂದಿದ್ದರು. ಈ ಭಾಗವಾಗಿ ಅವರು ಸರ್ಕಾರಿ ಆಡಳಿತದ ವೆಚ್ಚವನ್ನು $150 ಬಿಲಿಯನ್‌ಗೆ ಕಡಿಮೆ ಮಾಡುವಲ್ಲಿ ಯಶಸ್ವಿಯೂ ಆಗಿದ್ದರು. ಅವರ ಈ ಗುರಿ ಸಾಧನೆಗೆ ಭಾರಿ ಪ್ರತಿರೋಧ ವ್ಯಕ್ತವಾಯಿತು. ಈ ಬಗ್ಗೆ ಅವರು ಹೆಚ್ಚು ಹತಾಶೆಯನ್ನು ವ್ಯಕ್ತಪಡಿಸಿದರು. ಈ ವಿಚಾರವಾಗಿ ಅವರು ಟ್ರಂಪ್ ಆಡಳಿತದ ಇತರ ಉನ್ನತ ಸದಸ್ಯರೊಂದಿಗೆ ಘರ್ಷಣೆಗೆ ಕೂಡಾ ಇಳಿಯಬೇಕಾಯಿತು. ಅವರ ಈ ಪ್ರಯತ್ನಗಳಿಗಾಗಿ ಅವರು ತೀವ್ರ ರಾಜಕೀಯ ಹೊಡೆತ ಎದುರಿಸಬೇಕಾಯಿತು ಎಂದು ಹೇಳಲಾಗುತ್ತಿದೆ.

"ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಸಮಯ ಕೊನೆಗೊಳ್ಳುತ್ತಿದೆ. ಆಡಳಿತದಲ್ಲಿನ ವ್ಯರ್ಥ ಖರ್ಚು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ @realDonaldTrump ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮಸ್ಕ್ ತಮ್ಮ ಎಕ್ಸ್ ಹ್ಯಾಂಡಲ್​ ನಲ್ಲಿ ಬರೆದುಕೊಂಡಿದ್ದಾರೆ . @DOGE ಮಿಷನ್ ಕಾಲಾನಂತರದಲ್ಲಿ ಬಲಗೊಳ್ಳುತ್ತದೆ ಎಂಬ ವಿಶ್ವಾಸವನ್ನೂ ಅವರು ಇದೇ ವೇಳೆ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ