image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ್ - ಭೂತನ್​ ಮಿಸ್ಟಿಕ್​ ಪರ್ವತ ಪ್ರವಾಸ ಆರಂಭಿಸಲಿರುವ IRCTC

ಭಾರತ್ - ಭೂತನ್​ ಮಿಸ್ಟಿಕ್​ ಪರ್ವತ ಪ್ರವಾಸ ಆರಂಭಿಸಲಿರುವ IRCTC

ನವದೆಹಲಿ: ಪ್ರವಾಸೋದ್ಯಮ ಉತ್ತೇಜಿಸಲು ಭಾರತದ ವಿವಿಧ ಸ್ಥಳಗಳಿಗೆ ಮತ್ತು ನೆರೆಯ ದೇಶಗಳಿಗೆ ಭೇಟಿ ನೀಡುವ ಅವಕಾಶವನ್ನು ಒದಗಿಸಲು, IRCTC ಅತ್ಯಾಕರ್ಷಕ ಭಾರತ್ - ಭೂತಾನ್ ಮಿಸ್ಟಿಕ್ ಪರ್ವತ ಪ್ರವಾಸವನ್ನು ದೇಶದ ಜನರಿಗೆ ಪರಿಚಯಿಸುತ್ತಿದೆ. ಭಾರತ್ ಗೌರವ್ ರೈಲುಗಳಲ್ಲಿ ಪ್ರವಾಸಿಗರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.

ಭಾರತ ಮತ್ತು ನೇಪಾಳ ಸಂಪರ್ಕಿಸುವ ಈ ವಿಶಿಷ್ಟ ರೈಲು ಜೂನ್ 28ರಿಂದ ತನ್ನ ಯಾನ ಆರಂಭಿಸಲಿದೆ. 'ಭಾರತ್ - ಭೂತಾನ್ ಮಿಸ್ಟಿಕ್ ಮೌಂಟೇನ್ ಟೂರ್' ಮೂಲಕ ನೆರೆಯ ರಾಷ್ಟ್ರ ಭೂತಾನ್‌ನೊಂದಿಗೆ ಸಂಪರ್ಕಿಸುವ ಮತ್ತೊಂದು ವಿಶಿಷ್ಟ ಪ್ರವಾಸವನ್ನು ಯಶಸ್ವಿಗಳಿಸಲು ಐಆರ್‌ಸಿಟಿಸಿ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಿಂದ ಪ್ರಾರಂಭವಾಗುವ 14 ದಿನಗಳ ಪ್ರವಾಸವು ಗುವಾಹಟಿ, ಶಿಲ್ಲಾಂಗ್ ಮತ್ತು ಚಿರಾಪುಂಜಿಯನ್ನೂ ಒಳಗೊಂಡಿದೆ. ಪಶ್ಚಿಮ ಬಂಗಾಳದ ಹಸಿಮಾರಾ ರೈಲು ನಿಲ್ದಾಣಕ್ಕೂ ಈ ಪ್ರವಾಸಿ ರೈಲು ತಲುಪಲಿದೆ. ಅಲ್ಲಿಂದ ಪ್ರವಾಸಿಗರನ್ನು ಭೂತಾನ್‌ಗೆ ಪ್ರವೇಶಿಸಲು ಗಡಿ ಪಟ್ಟಣವಾದ ಫ್ಯೂಂಟ್‌ಶೋಲಿಂಗ್‌ಗೆ ಕರೆದೊಯ್ಯಲಾಗುತ್ತದೆ. ಮುಂದಿನ ಆರು ದಿನಗಳಲ್ಲಿ ಗುಂಪು ಥಿಂಫು, ಹಿಂದಿನ ರಾಜಧಾನಿ ಪುನಾಖಾ ಮತ್ತು ನೈಸರ್ಗಿಕ ಸೌಂದರ್ಯ ಮತ್ತು ಪವಿತ್ರ ಸ್ಥಳಗಳಿಗೆ ಹೆಸರುವಾಸಿಯಾದ ಪಾರೋವನ್ನು ತಲುಪಲಿದೆ ಎಂದು ಐಆರ್​​​ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಪ್ರಯಾಣವು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗಲಿದ್ದು, ಅಸ್ಸಾಂನ ಗುವಾಹಟಿಯಲ್ಲಿ ತನ್ನ ಮೊದಲ ನಿಲುಗಡೆ ತೆಗೆದುಕೊಳ್ಳಲಿದೆ. ಅಲ್ಲಿಂದ ನೀಲಾಚಲ್ ಬೆಟ್ಟಗಳ ಹೃದಯಭಾಗದಲ್ಲಿರುವ ಕಾಮಾಕ್ಯ ದೇವಾಲಯದ ದರ್ಶನಕ್ಕಾಗಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ, ನಂತರ ಶಿಲ್ಲಾಂಗ್‌ಗೆ ತೆರಳಲಿದೆ. ಬಳಿಕ 'ಪೂರ್ವ ಸ್ಕಾಟ್ಲೆಂಡ್' ಎಂದು ಜನಪ್ರಿಯವಾಗಿರುವ ಶಿಲ್ಲಾಂಗ್ ಗೆ ಭೇಟಿ ನೀಡಲಿದೆ.

ಉಮಿಯಮ್ ಸರೋವರದ ವೀಕ್ಷಣಾ ಸ್ಥಳದಲ್ಲಿ ಸೂರ್ಯಾಸ್ತವನ್ನು ವೀಕ್ಷಣೆ ಮಾಡಿದ ಬಳಿಕ ಪ್ರವಾಸಿಗರು ರಾತ್ರಿಯ ವಾಸ್ತವ್ಯಕ್ಕಾಗಿ ಮೇಘಾಲಯಕ್ಕೆ ಆಗಮಿಸುತ್ತಾರೆ. ಮರುದಿನ, ಅವರನ್ನು ಗರಿಷ್ಠ ಮಳೆ ಬೀಳುವ ಸ್ಥಳವಾದ ಚಿರಾಪುಂಜಿಗೆ ಕರೆದೊಯ್ಯಲಾಗುತ್ತದೆ. ಹಿಮಾಲಯದ ಅಂಚಿನಲ್ಲಿರುವ ಪ್ರವಾಸಿಗರು ಅದ್ಭುತವಾದ 'ಸೆವೆನ್ ಸಿಸ್ಟರ್ಸ್ ಜಲಪಾತಗಳು, ಪ್ರಸಿದ್ಧ ನೋಹ್ಖಲಿಕೈ ಮತ್ತು ಎಲಿಫೆಂಟ್ ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಮೌಸಮಾಯಿ ಗುಹೆಗಳು ವಿಶಿಷ್ಟ ರಚನೆಗಳು ಮತ್ತು ಭೂಗತ ಕೊಳಗಳ ನೋಟವನ್ನು ನೀಡುತ್ತವೆ ಎಂಬುದು ರೈಲ್ವೆ ಅಧಿಕಾರಿಗಳ ವಿವರಣೆ ಆಗಿದೆ.

IRCTC ಅಧಿಕಾರಿಗಳ ಪ್ರಕಾರ, ಶಿಲ್ಲಾಂಗ್‌ನಲ್ಲಿ ರಾತ್ರಿಯ ವಾಸ್ತವ್ಯದ ನಂತರ ಪ್ರವಾಸಿಗರು ಮರುದಿನ ಮುಂಜಾನೆ ಶಿಲ್ಲಾಂಗ್ ಗೆ ತೆರಳಲಿದ್ದಾರೆ. ಆ ಬಳಿಕ ಅವರೆಲ್ಲ ಗುವಾಹಟಿಗೆ ಹಿಂತಿರುಗುತ್ತಾರೆ. ಈ ದಿನವು ಬ್ರಹ್ಮಪುತ್ರದಲ್ಲಿ ಸೂರ್ಯಾಸ್ತದ ವಿಹಂಗಮ ನೋಟದೊಂದಿಗೆ ಕೊನೆಗೊಳ್ಳುತ್ತದೆ. ನಂತರ ಭೂತಾನ ಗಡಿಗೆ ಹತ್ತಿರದ ರೈಲು ನಿಲ್ದಾಣವಾದ ಹಸಿಮಾರ ರೈಲು ನಿಲ್ದಾಣಕ್ಕೆ ರೈಲು ಏರುವ ಮುನ್ನ ಮರುದಿನ ಬೆಳಗ್ಗೆ ರೈಲು ಹಸಿಮಾರಾ ನಿಲ್ದಾಣವನ್ನು ತಲುಪುತ್ತದೆ. ಅಲ್ಲಿ ಅವರು 20 ಕಿ.ಮೀ ದೂರದಲ್ಲಿರುವ ಫ್ಯೂಂಟ್‌ಶೋಲಿಂಗ್ ವಲಸೆ ಚೆಕ್‌ಪಾಯಿಂಟ್‌ಗೆ ತಲುಪಲಿದ್ದಾರೆ.

ಚಕ್​ ಪಾಯಿಂಟ್​ ತಲುಪಿದ ಬಳಿಕ ಪ್ರವಾಸಿಗರು ಭೂತಾನ್‌ನ ರಾಜಧಾನಿ ಥಿಂಫು ಪ್ರವೇಶಿಸುತ್ತಾರೆ. ಮರುದಿನ ಮೋತಿಥಾಂಗ್ ಮೃಗಾಲಯ, ಚಿತ್ರಕಲೆ ಶಾಲೆ, ರಾಷ್ಟ್ರೀಯ ಗ್ರಂಥಾಲಯ ಮತ್ತು ಥಿಂಫು ಕರಕುಶಲ ವಸ್ತುಗಳಂತಹ ಸ್ಥಳೀಯ ದೃಶ್ಯವೀಕ್ಷಣೆ ಮಾಡಲಾಗುತ್ತದೆ. ಆ ದಿನ ತಾಶಿ ಛೋ ಝೋಂಗ್‌ನಲ್ಲಿ ಮುಕ್ತಾಯಗೊಳ್ಳುತ್ತದೆ.

IRCTC ವೇಳಾಪಟ್ಟಿಯ ಪ್ರಕಾರ, ಪ್ರವಾಸಿಗರು ಭೂತಾನ್‌ನ ಹಿಂದಿನ ರಾಜಧಾನಿ ಪುನಾಖಾಗೆ ಹೋಗುತ್ತಾರೆ. ಈ ಮಾರ್ಗದಲ್ಲಿ ಐತಿಹಾಸಿಕ ಹೆಗ್ಗುರುತಾದ ಡೋಚುಲಾ ಪಾಸ್‌ನಲ್ಲಿ ನಿಲುಗಡೆ ಇರುತ್ತದೆ. ಪುನಾಖಾಗೆ ಆಗಮಿಸಿದಾಗ ಪ್ರವಾಸಿಗರು ಭೂತಾನ್‌ನ ಅತಿದೊಡ್ಡ ಝೋಂಗ್‌ಗಳಲ್ಲಿ ಒಂದಾದ ಪುನಾಖಾ ಝೋಂಗ್ ವೀಕ್ಷಣೆ ಮಾಡಲಿದ್ದಾರೆ. ಇದು ಫೋ ಚು (ಪುರುಷ ನದಿ) ಮತ್ತು ಮೊ ಚು (ಸ್ತ್ರೀ ನದಿ) ಎಂಬ ಎರಡು ನದಿಗಳ ಬಳಿ ಇದೆ. ಮರುದಿನ ಪ್ರವಾಸಿಗರು ಕಣಿವೆಯಾದ್ಯಂತ ಹರಡಿರುವ ಭತ್ತದ ಗದ್ದೆಗಳು ಮತ್ತು ವಿಲಕ್ಷಣ ತೋಟದ ಮನೆಗಳಿಗೆ ಹೆಸರುವಾಸಿಯಾದ ಪಾರೋಗೆ ತೆರಳುತ್ತಾರೆ. ಲ್ಯಾಂಪೇರಿ ರಾಯಲ್ ಬೊಟಾನಿಕಲ್ ಪಾರ್ಕ್, ತಂಚೋಗ್ ಲಖಾಂಗ್ ಕಬ್ಬಿಣದ ಸೇತುವೆ - ಇದು ಪಾರೋ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಐತಿಹಾಸಿಕ ಪಾರೋ ಝೋಂಗ್ ಬ್ರಿಡ್ಜ್​ ಆಗಿದೆ.

Category
ಕರಾವಳಿ ತರಂಗಿಣಿ