image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದೇಶಾಂಗ ಸಚಿವ ಎಸ್​​. ಜೈಶಂಕರ್​​​​ ಹಾಗೂ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಚರ್ಚೆ

ವಿದೇಶಾಂಗ ಸಚಿವ ಎಸ್​​. ಜೈಶಂಕರ್​​​​ ಹಾಗೂ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಚರ್ಚೆ

ನವದೆಹಲಿ: ವಿದೇಶಾಂಗ ಸಚಿವ ಎಸ್​​. ಜೈಶಂಕರ್​​​​ ಹಾಗೂ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಧೃಡಗೊಳಿಸುವ ಸಂಬಂಧ ಮೊದಲ ಫೋನ್​ ಕರೆಯಲ್ಲಿ ಮಾತನಾಡಿದ್ದಾರೆ. ಪ್ರಧಾನಿ ಮಾರ್ಕ್ ಕಾರ್ನೆ ಅವರ ಹೊಸ ಸಂಪುಟದಲ್ಲಿ ಅನಿತಾ ಆನಂದ್ ಈ ತಿಂಗಳು ಕೆನಡಾದ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಕಳೆದ ತಿಂಗಳು ನಡೆದ ಸಂಸತ್ತಿನ ಚುನಾವಣೆಯಲ್ಲಿ ಅವರು ಲಿಬರಲ್ ಪಕ್ಷವನ್ನು ಗಮನಾರ್ಹ ಗೆಲುವಿನತ್ತ ಮುನ್ನಡೆಸಿದ್ದರು. ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ ತೀವ್ರ ಒತ್ತಡಕ್ಕೆ ಒಳಗಾದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳನ್ನು ಸರಿಪಡಿಸಲು ಮಾರ್ಕ್ ಕಾರ್ನೆ ಅಧಿಕಾರವಹಿಸಿರುವುದನ್ನು ಒಂದು ಅವಕಾಶ ಎಂದು ನೋಡಲಾಗುತ್ತಿದೆ.

ಸದ್ಯ ನಿನ್ನೆಯ ಕರೆಯಲ್ಲಿ ಭಾರತ - ಕೆನಡಾ ಸಂಬಂಧಗಳ ನಿರೀಕ್ಷೆಗಳ ಬಗ್ಗೆ ಚರ್ಚಿಸಲಾಗಿದೆ. ಸಚಿವೆ ಅನಿತಾ ಆನಂದ್​ರ ಅಧಿಕಾರಾವಧಿಯು ತುಂಬಾ ಯಶಸ್ವಿಯಾಗಲಿ ಎಂದು ಹಾರೈಸಿದೆ" ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಸಚಿವೆ ಅನಿತಾ ಆನಂದ್​ ಅವರು ಜೈಶಂಕರ್ ಅವರೊಂದಿಗೆ "ಉತ್ಪಾದಕ ಚರ್ಚೆ" ನಡೆಸಿದ್ದೇನೆ ಎಂದು ಹೇಳಿದ್ದಾರೆ. "ಕೆನಡಾ ಭಾರತದ ಸಂಬಂಧಗಳನ್ನು ಬಲಪಡಿಸುವುದು, ನಮ್ಮ ಆರ್ಥಿಕ ಸಹಕಾರವನ್ನು ಗಾಢವಾಗಿಸುವ ಕುರಿತು ನಡೆಸಿದ ಉತ್ಪಾದಕ ಚರ್ಚೆಗಾಗಿ ವಿದೇಶಾಂಗ ಸಚಿವ ಎಸ್​​. ಜೈಶಂಕರ್​​​​​ ಅವರಿಗೆ ಧನ್ಯವಾದಗಳು. ನಮ್ಮ ಕೆಲಸವನ್ನು ಒಟ್ಟಿಗೆ ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅನಿತಾ ಆನಂದ್​ ತಮ್ಮ ಎಕ್ಸ್​ ಹ್ಯಾಂಡಲ್​​ ನಲ್ಲಿ ಹೇಳಿದ್ದಾರೆ.

ಕೆನಡಾದಲ್ಲಿ ಹರ್ದೀಪ್​ ಸಿಂಗ್​​ ನಿಜ್ಜರ್​​​ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾತ್ರವಿದೆ ಎಂದು ಸೆಪ್ಟೆಂಬರ್ 2023ರಲ್ಲಿ ಜಸ್ಟಿನ್ ಟ್ರುಡೋ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀವ್ರ ಹದಗೆಟ್ಟಿತ್ತು. ಟ್ರೂಡೊ ಅವರ ಆರೋಪಗಳನ್ನು ಅಸಂಬದ್ಧ ಎಂದು ಭಾರತ ಸರ್ಕಾರ ಬಲವಾಗಿ ತಿರಸ್ಕರಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ, ಭಾರತವು ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿತು. ಭಾರತವು ನವದೆಹಲಿಯಿಂದ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿತು. ಖಲಿಸ್ತಾನಿ ಪರ ಶಕ್ತಿಗಳು ಕೆನಡಾ ನೆಲದಿಂದ ಕಾರ್ಯನಿರ್ವಹಿಸಲು ಟ್ರುಡೊ ಸರ್ಕಾರ ಅವಕಾಶ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು.

ಕಳೆದ ಕೆಲವು ತಿಂಗಳುಗಳಲ್ಲಿ, ಮತ್ತೆ ಭಾರತ ಮತ್ತು ಕೆನಡಾದ ಭದ್ರತಾ ಅಧಿಕಾರಿಗಳು ಸಂಪರ್ಕವನ್ನು ಆರಂಭಿಸಿದರು. ಮತ್ತು ಎರಡೂ ಕಡೆಯಿಂದ ಹೊಸ ಹೈಕಮಿಷನರ್‌ಗಳನ್ನು ನೇಮಿಸುವ ಸಾಧ್ಯತೆ ನೋಡುತ್ತಿದ್ದರು. ಟ್ರುಡೊ ಅವರ ಅಧಿಕಾರ ನಿರ್ಗಮನವನ್ನು ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಮತ್ತೊಂದು ಅವಕಾಶವೆಂದು ಪರಿಗಣಿಸಲಾಗಿತ್ತು.

Category
ಕರಾವಳಿ ತರಂಗಿಣಿ