image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೂನ್ 19ರಂದು ದೇಶದ ವಿವಿಧ ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣಾ ಮತದಾನ

ಜೂನ್ 19ರಂದು ದೇಶದ ವಿವಿಧ ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣಾ ಮತದಾನ

ನವದೆಹಲಿ: ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ವಿಧಾನಸಭಾ ಸದಸ್ಯರ ನಿಧನ ಮತ್ತು ರಾಜೀನಾಮೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ 5 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಇದರಲ್ಲಿ ಗುಜರಾತ್‌ನ ಎರಡು ಸ್ಥಾನಗಳು (ಕಾಡಿ ಮತ್ತು ವಿಸಾವದರ್) ಮತ್ತು ಕೇರಳ (ನಿಲಂಬೂರ್), ಪಶ್ಚಿಮ ಬಂಗಾಳ (ಕಾಲಿಯಾಗಂಜ್) ಮತ್ತು ಪಂಜಾಬ್ (ಲುಧಿಯಾನ) ಗಳಲ್ಲಿ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ಜರುಗಲಿದೆ.

ಆಯೋಗ ಘೋಷಿಸಿದ ವೇಳಾಪಟ್ಟಿ ಪ್ರಕಾರ, ಜೂನ್ 19ರಂದು ಮತದಾನ ನಡೆಯಲಿದೆ. ಮೇ 26ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಜೂನ್ 2 ಕೊನೆಯ ದಿನಾಂಕವಾಗಿದ್ದು, ಅದರ ಮರುದಿನ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 5 ಅಂತಿಮ ದಿನ. ಹಾಗೆಯೇ, ಮತ ಎಣಿಕೆಯು ಜೂನ್ 23ರಂದು ನಿಗದಿಯಾಗಿದೆ. ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳುವ ದಿನ ಜೂನ್ 25 ಎಂದು ಆಯೋಗ ಹೇಳಿದೆ. ಎಲ್ಲಾ ಮತಗಟ್ಟೆಗಳಲ್ಲಿ ಉಪಚುನಾವಣೆಗಳಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಅಗತ್ಯ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಸುಗಮ ಮತದಾನ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಮಾಹಿತಿ ನೀಡಿದೆ.

ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳು ಹಾಗೂ ಆಯಾ ಜಿಲ್ಲೆಗಳಲ್ಲಿ ತಕ್ಷಣದಿಂದ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ.

Category
ಕರಾವಳಿ ತರಂಗಿಣಿ