ನವದೆಹಲಿ: ಎಂಟು ದಿನಗಳ ಮುಂಚಿತವಾಗಿಯೇ ನೈರುತ್ಯ ಮಾನ್ಸೂನ್ ಕೇರಳವನ್ನು ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2009ರಿಂದ ಇಷ್ಟು ಮುಂಚಿತವಾಗಿ ರಾಜ್ಯವನ್ನು ಮುಂಗಾರು ಆವರಿಸಿದೆ ಎಂದಿದ್ದಾರೆ. ಜೂನ್ 1ಕ್ಕೆ ಆಗಮಿಸಬೇಕಿದ್ದ ಮಾನ್ಸೂನ್ ಮೇ 24ರಂದೇ ನೈರುತ್ಯ ಮಾನ್ಸೂನ್ ಕೇರಳಕ್ಕೆ ಆಗಮಿಸಿದೆ. ಈ ಮೂಲಕ ಸಾಮಾನ್ಯ ದಿನಕ್ಕಿಂತ 8 ದಿನ ಮುಂಚಿತವಾಗಿಯೇ ಕೇರಳಕ್ಕೆ ಮುಂಗಾರು ಆಗಮಿಸಿದೆ. 2009ರ ಬಳಿಕ ಕೇರಳಕ್ಕೆ ಇಷ್ಟು ವೇಗಾವಾಗಿ (ಮುಂಚಿತವಾಗಿ) ಮುಂಗಾರ ಪ್ರವೇಶಿದ್ದು ಇದೇ ವರ್ಷವಾಗಿದೆ. 2009ರಲ್ಲಿ ಕೂಡ ಮೇ 23ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಿತು ಎಂದು ಐಎಂಡಿ ಎಕ್ಸ್ ಜಾಲತಾಣದಲ್ಲಿ ತಿಳಿಸಿದೆ.