ಅಮೆರಿಕ: ಪಾಕಿಸ್ತಾನ ಹೆಚ್ಚು ಬೂಟಾಟಿಕೆಯ ನಡುವಳಿಕೆಯನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಟೀಕಿಸಿದೆ. ದೇಶದಲ್ಲಿ ಭಯೋತ್ಪಾದಕರು ಮತ್ತು ನಾಗರಿಕರ ನಡುವೆ ಯಾವುದೇ ವ್ಯತ್ಯಾಸ ಮಾಡದೇ ನಾಗರಿಕರನ್ನು ರಕ್ಷಿಸುವ ಬಗ್ಗೆ ಮಾತನಾಡುವ ಯಾವುದೇ ಅರ್ಹತೆ ಪಾಕಿಸ್ತಾನಕ್ಕೆ ಇಲ್ಲ ಎಂದು ಕುಟುಕಿದೆ. ಇದೆ ವೇಳೆ ಭಾರತದ ಗಡಿಯಲ್ಲಿ ಪಾಕಿಸ್ತಾನ ಸೇನೆ ಉದ್ದೇಶ ಪೂರ್ವಕವಾಗಿ ಬಾಂಬ್ ಶೆಲಿಂಗ್ ನಡೆಸಿದ್ದು, ನಾಗರಿಕರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಪರ್ವಥನೇನಿ ಹರೀಶ್ ಮಾತನಾಡಿ, ಪಾಕಿಸ್ತಾನದ ಹಲವು ವಿಚಾರಗಳು ಆಧಾರತ ರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಯುಎನ್ಎಸ್ಸಿ ಮುಕ್ತ ಚರ್ಚೆಯಲ್ಲಿ ತಿಳಿಸಿದರು. ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಅವರು ಚರ್ಚೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಬಲವಾಗಿ ಪ್ರತಿಕ್ರಿಯಿಸಿ ಮಾತನಾಡಿದ ಹರೀಶ್, ನಮ್ಮ ಗಡಿಯುದ್ದಕ್ಕೂ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ ಎಂದರು.
6/11 ರ ಭೀಕರ ದಾಳಿಯಿಂದ ಹಿಡಿದು ಏಪ್ರಿಲ್ 22, 2025 ರಲ್ಲಿ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಸಾಮೂಹಿಕ ಹತ್ಯೆಯಯಾಗಿದೆ. ಅಮಾಯಕ ಜನರನ್ನು ಗುರಿಯಾಗಿಸಿ, ಪಾಕಿಸ್ತಾನ ಭಯೋತ್ಪಾದನೆ ದಾಳಿ ಮಾಡುತ್ತಿದೆ. ಅವರ ದಾಳಿಯ ಉದ್ದೇಶ ನಮ್ಮ ಸಮೃದ್ಧಿ, ಪ್ರಗತಿ ಮತ್ತು ನೈತಿಕತೆಯ ಮೇಲೆ ದಾಳಿ ಆಗಿದೆ. ಇಂತಹ ದೇಶ ನಾಗರಿಕರ ರಕ್ಷಣೆಯ ಚರ್ಚೆಯಲ್ಲಿ ಭಾಗವಹಿಸುವುದು ಅಂತರರಾಷ್ಟ್ರೀಯ ಸಮುದಾಯಕ್ಕೆ ಅವಮಾನವಾಗಿದೆ ಎಂದು ಪ್ರತಿಪಾದಿಸಿದರು.
ಭಯೋತ್ಪಾದನೆಯ ಉದ್ದೇಶಕ್ಕೆ ಪಾಕಿಸ್ತಾನ ಪದೇ ಪದೆ ನಾಗರಿಕರನ್ನು ತಮ್ಮನ್ನು ಗುರಿಯಾಗಿಸಿದೆ. ಆಯೋತ್ಪಾದಕರ ಅಡುಗುತಾಣ ಗುರಿಯಾಗಿಸಿ ದಾಳಿ ಮಾಡಿದ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಉಗ್ರನ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪೊಲೀಸ್ ಮತ್ತು ಸೇನಾ ಅಧಿಕಾರಿಗಳು ಗೌರವ ತೋರಿದ್ದನ್ನು ಇತ್ತೀಚಿಗೆ ಕಂಡಿದ್ದೇವೆ. ಇಂತಹ ರಾಷ್ಟ್ರ ಇದೀಗ ರಾಷ್ಟ್ರವು ನಾಗರಿಕರನ್ನು ರಕ್ಷಿಸುವ ಬಗ್ಗೆ ಮಾತನಾಡಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದರು.
ಇದೇ ವೇಳೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ ಅವರು, ಪಾಕಿಸ್ತಾನಿ ಸೇನೆಯು ಉದ್ದೇಶಪೂರ್ವಕವಾಗಿ ಭಾರತದ ಗಡಿ ಗ್ರಾಮಗಳ ಮೇಲೆ ಶೆಲ್ ದಾಳಿ ನಡೆಸಿ 20 ಕ್ಕೂ ಹೆಚ್ಚು ನಾಗರಿಕರನ್ನು ಕೊಂದು 80 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದೆ. ಗುರುದ್ವಾರಗಳು, ದೇವಾಲಯಗಳು ಮತ್ತು ಕಾನ್ವೆಂಟ್‌ಗಳು ಸೇರಿದಂತೆ ಪೂಜಾ ಸ್ಥಳಗಳನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿತ್ತು. ಇಂತಹ ವರ್ತನೆ ಬಳಿಕ ಇದೀಗ ಈ ರೀತಿ ಪಾಕಿಸ್ತಾನ ಬೋಧಿಸುವುದು ಸಂಪೂರ್ಣವಾಗಿ ಬೂಟಾಟಿಕೆಯಾಗಿದೆ ಎಂದು ತಿಳಿಸಿದರು. (ಪಿಟಿಐ)