image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಎಂ ಶ್ರೀ ಸಮಗ್ರ ಶಿಕ್ಷಾ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಾದ 2,291 ಕೋಟಿ ರೂ ಬಿಡುಗಡೆಗೆ ಸಿಎಂ ಸ್ಟಾಲಿನ್​ ಆಗ್ರಹ

ಪಿಎಂ ಶ್ರೀ ಸಮಗ್ರ ಶಿಕ್ಷಾ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಾದ 2,291 ಕೋಟಿ ರೂ ಬಿಡುಗಡೆಗೆ ಸಿಎಂ ಸ್ಟಾಲಿನ್​ ಆಗ್ರಹ

ತಮಿಳುನಾಡು: ದೆಹಲಿಯಲ್ಲಿ ನಾಳೆ ನಡೆಯಲಿರುವ 10ನೇ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ತಮಿಳುನಾಡು ಸಿಎಂ ಸ್ಟಾಲಿನ್​ ನಿರ್ಧರಿಸಿದ್ದಾರೆ.. ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯೋಚಿತ ಆರ್ಥಿಕ ಹಕ್ಕಿಗೆ ಆಗ್ರಹಿಸಿ ಅವರು, ಈ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನವದೆಹಲಿ ಪ್ರಯಾಣಕ್ಕೆ ಮುನ್ನ ಈ ಕುರಿತು ತಿಳಿಸಿರುವ ಅವರು, ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಯುತವಾದ ಆರ್ಥಿಕ ಪಾಲು ಪಡೆಯಲು ತಾವು ಹೋರಾಡುತ್ತಲೇ ಇರುತ್ತಾರೆ. ಇದರಿಂದ ಯಾಕೆ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ನೋವಾಗುತ್ತಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಮುನ್ನ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ತಮಿಳುನಾಡಿಗೆ ನ್ಯಾಯಯುತ ಆರ್ಥಿಕ ಹಕ್ಕಿಗಾಗಿ ಆಗ್ರಹಿಸಿ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಸ್ವಾತಂತ್ರ್ಯದ ಧ್ವಜವನ್ನು ಯಾವಾಗಲೂ ನಾನು ಹೊತ್ತುಕೊಳ್ಳುತ್ತೇನೆ ಆದರೆ ತೆವಳುವುದಿಲ್ಲ. ತಮಿಳುನಾಡಿನ ಆರ್ಥಿಕ ಹಕ್ಕುಗಳಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೇನೆ. ಈ ವಿಚಾರದಲ್ಲಿ ನಾನು ದೃಢವಾಗಿ ನಿಂತಿದ್ದೇನೆ. ತಮಿಳುನಾಡಿಗೆ ಪಾಲಿನ ನಿಧಿ ಪಡೆಯಲು ನಾನು ದೆಹಲಿಯಲ್ಲಿ ಹೋರಾಡುತ್ತೇನೆ ಎಂದಿದ್ದಾರೆ.

ಪಿಎಂ ಶ್ರೀ ಸಮಗ್ರ ಶಿಕ್ಷಾ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಾದ 2,291 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡುತ್ತಿದೆ. ಈ ಹಣ ಬಿಡುಗಡೆ ಮಾಡುವಂತೆ ಸ್ಟಾಲಿನ್​ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಈ ಹಣ ಬಿಡುಗಡೆಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಮತ್ತು ತ್ರಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದೆ ಎಂದೂ ಕೂಡ ಆರೋಪಿಸಿ. ತಮ್ಮ ಪಾಲಿನ ಹಣ ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಇದೀಗ ಸುಪ್ರೀಂಕೋರ್ಟ್​ ಮೊರೆ ಹೋಗಿದೆ.

Category
ಕರಾವಳಿ ತರಂಗಿಣಿ