image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮೊಹಮ್ಮದ್ ಯೂನಸ್ ರಾಜೀನಾಮೆ..!!

ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮೊಹಮ್ಮದ್ ಯೂನಸ್ ರಾಜೀನಾಮೆ..!!

ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡಾಗಿನಿಂದಲೂ ಅರಾಜಕತೆ ಮುಂದುವರೆದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ರಾಜಕೀಯ ಒತ್ತಡದಿಂದಾಗಿ ತಮ್ಮ ಹುದ್ದೆ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ ಎಂದು ವಿದ್ಯಾರ್ಥಿ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಮುಖ್ಯಸ್ಥ ನಹಿದ್ ಇಸ್ಲಾಂ ಅವರ ಹೇಳಿಕೆ ಉಲ್ಲೇಖಿಸಿ ಬಿಬಿಸಿ ಬಾಂಗ್ಲಾ ಸುದ್ದಿ ಪ್ರಕಟಿಸಿದೆ.

ಯೂನಸ್ ರಾಜೀನಾಮೆ ಕುರಿತಾದ ಸುದ್ದಿಯನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ, ನಾನು ಈ ವಿಚಾರದ ಬಗ್ಗೆ ಚರ್ಚಿಸಲು ಸರ್(ಯೂನಸ್) ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಕೂಡ ಅದರ ಬಗ್ಗೆಯೇ ಯೋಚಿಸುತ್ತಿರುವುದಾಗಿ ಹೇಳಿದರು. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಇಸ್ಲಾಂ ಬಿಬಿಸಿ ಬಾಂಗ್ಲಾಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ರಾಜಕೀಯ ಪಕ್ಷಗಳು ನಿರೀಕ್ಷಿತ ಮಟ್ಟ ತಲುಪದ ಹೊರತು ಅವರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೂನಸ್ ಅವರ ಮುಖ್ಯ ಸಲಹೆಗಾರ ತಿಳಿಸಿದ್ದಾರೆ. ಆದರೆ, ದೇಶದ ಭದ್ರತೆ, ಭವಿಷ್ಯದ ಸಲುವಾಗಿ ಹಾಗೂ ಸಾಮೂಹಿಕ ದಂಗೆಯ ನಿರೀಕ್ಷೆಗಳನ್ನು ತಲುಪುವ ನಿಟ್ಟಿನಲ್ಲಿ ನೀವು ಗಟ್ಟಿಯಾಗಿರಿ ಎಂದು ಯೂನಸ್‌ಗೆ ಸಲಹೆ ನೀಡಿರುವುದಾಗಿ ನಹಿದ್ ಇಸ್ಲಾಂ ಹೇಳಿದ್ದಾರೆ.

ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ನಿರೀಕ್ಷೆಯಿದೆ. ಅಲ್ಲದೆ, ತಮ್ಮೊಂದಿಗೆ ಸಹಕರಿಸುತ್ತಾರೆಂದು ಯೂನಸ್ ಭಾವಿಸಿದ್ದಾರೆ ಎಂದು ಅವರ ಮುಖ್ಯ ಸಲಹೆಗಾರ ಹೇಳಿದ್ದಾರೆ. ಆದರೆ ರಾಜಕೀಯ ಪಕ್ಷವೇ ಯೂನಸ್ ಅವರು ರಾಜೀನಾಮೆ ನೀಡಬೇಕೆಂದು ಬಯಸಿದರೆ, ಅವರ ಮೇಲೆ ನಂಬಿಕೆ, ಭರವಸೆ ಇಲ್ಲದ ಸ್ಥಾನದಲ್ಲಿ ಅವರು ಯಾಕೆ ಮುಂದುವರೆಯುತ್ತಾರೆ ಎಂದು ನಹಿದ್ ಇಸ್ಲಾಂ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಯೂನಸ್ ಸರ್ಕಾರವು ಹಲವು ಸವಾಲುಗಳನ್ನು ಎದುರಿಸಿದೆ. ಪ್ರಮುಖ ಸವಾಲುಗಳಲ್ಲಿ ಒಂದು ಬಾಂಗ್ಲಾದೇಶದ ಸಂಭಾವ್ಯ ಏಕೀಕೃತ ಮಿಲಿಟರಿ ಪಡೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಮಿಲಿಟರಿಯು ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ನೇತೃತ್ವದ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Category
ಕರಾವಳಿ ತರಂಗಿಣಿ