image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುಕೆ, ಫ್ರಾನ್ಸ್, ಕೆನಡಾ ವಿರೋಧಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಕಿಡಿ

ಯುಕೆ, ಫ್ರಾನ್ಸ್, ಕೆನಡಾ ವಿರೋಧಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಕಿಡಿ

ಇಸ್ರೇಲ್​: ಇಡೀ ಗಾಜಾವನ್ನು ಆಕ್ರಮಿಸಿಕೊಳ್ಳುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್​ ಪ್ರಧಾನಿ ನೆತನ್ಯಾಹು ಅವರ ಈ ಹೇಳಿಕೆಯನ್ನು ಯುಕೆ, ಫ್ರಾನ್ಸ್ ಮತ್ತು ಕೆನಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇಸ್ರೇಲ್​ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ದೇಶಗಳ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ . ಅಕ್ಟೋಬರ್ 7, 2023 ರಂದು ನಡೆದ ಘಟನೆ ನಿರ್ಲಕ್ಷಿಸಿ, ನಮ್ಮ ಮೇಲಿನ ದಾಳಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ಹಮಾಸ್ ವಿರುದ್ಧ ಸಂಪೂರ್ಣ ಗೆಲುವು ಸಾಧಿಸುವುದು ಇಸ್ರೇಲ್‌ನ ಗುರಿ ಎಂದು ನೆತನ್ಯಾಹು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಸಂಪೂರ್ಣ ವಿಜಯ ಸಾಧಿಸುವವರೆಗೆ ಕಾನೂನುಬದ್ಧ ವಿಧಾನಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮತ್ತು ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಹಮಾಸ್ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮೊದಲು ರಕ್ಷಣಾತ್ಮಕ ಯುದ್ಧವನ್ನು ನಿಲ್ಲಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಗೆ ಈ ಎಲ್ಲ ರಾಷ್ಟ್ರಗಳ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ನಾವು ನಮ್ಮ ರಕ್ಷಣೆಗಾಗಿ ನಡೆಸುತ್ತಿರಯುವ ದಾಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಹೆಚ್ಚಿನ ದಾಳಿಗಳಿಗೆ ಆಹ್ವಾನ ನೀಡುತ್ತದೆ. ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಪ್ರಸ್ತಾಪಿಸಿದ ವಿಧಾನವನ್ನು ಇಸ್ರೇಲ್ ಒಪ್ಪಿಕೊಳ್ಳುತ್ತಿದೆ.

'ಗಿಡಿಯಾನ್ಸ್ ಚಾರಿಯಟ್ಸ್' ಎಂದು ಕರೆಯಲ್ಪಡುವ ಇಸ್ರೇಲಿ ಸೇನೆಯಿಂದ ನಡೆಯುತ್ತಿರುವ ಭೂ ಸೇನೆಯ ಕಾರ್ಯಾಚರಣೆಯನ್ನು ಯುಕೆ, ಫ್ರಾನ್ಸ್ ಮತ್ತು ಕೆನಡಾ ಖಂಡಿಸಿದ್ದು, ಈ ಬಗ್ಗೆ ಜಂಟಿ ಹೇಳಿಕೆ ನೀಡಿವೆ. ಈ ದಾಳಿಯು ಗಾಜಾದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಹೇಳಿವೆ. ಮಾನವೀಯ ನೆರವು ಗಾಜಾವನ್ನು ತಲುಪುವುದನ್ನು ತಡೆಯುವ ಇಸ್ರೇಲಿ ನಿರ್ಬಂಧಗಳನ್ನು ತೆಗೆದುಹಾಕುವಂತೆ ಈ ರಾಷ್ಟ್ರಗಳು ಇಸ್ರೇಲ್​​ ಗೆ ಸೂಚಿಸಿವೆ. ಇಸ್ರೇಲ್ ಇದೇ ರೀತಿ ಮುಂದುವರಿದರೆ ಖಂಡಿತವಾಗಿಯೂ ಇದಕ್ಕೆ ಪ್ರತಿಕ್ರಿಯೆ ಇರುತ್ತದೆ ಎಂದು ಈ ರಾಷ್ಟ್ರಗಳ ನಾಯಕರು ಸ್ಪಷ್ಟಪಡಿಸಿದ್ದಾರೆ . ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಪ್ರಯತ್ನಗಳನ್ನು ಅಮೆರಿಕ, ಕತಾರ್ ಮತ್ತು ಈಜಿಪ್ಟ್ ಸಹ ಬೆಂಬಲಿಸಿವೆ.

ಬೆಂಜಮಿನ್ ನೆತನ್ಯಾಹು "ಗಿಡಿಯಾನ್ಸ್ ಚಾರಿಯಟ್ಸ್" ಎಂಬ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಇಡೀ ಗಾಜಾ ಹಿಡಿತದಲ್ಲಿಟ್ಟುಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಹೋರಾಟ ಮುಂದುವರಿದ ಹಂತದಲ್ಲಿದ್ದು, ಪ್ರಗತಿ ಸಾಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಡೀ ಗಾಜಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದಾಗಿ ಹೇಳಿರುವ ನೆತನ್ಯಾಹು ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

 

Category
ಕರಾವಳಿ ತರಂಗಿಣಿ