image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಂಜಾಬ್​ನ ಗಡಿಗಳಲ್ಲಿ ನಡೆಯುವ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ ಮತ್ತೆ ಸಾರ್ವಜನಿಕರಿಗೆ ಮುಕ್ತ

ಪಂಜಾಬ್​ನ ಗಡಿಗಳಲ್ಲಿ ನಡೆಯುವ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ ಮತ್ತೆ ಸಾರ್ವಜನಿಕರಿಗೆ ಮುಕ್ತ

ನವದೆಹಲಿ: ಆಪರೇಷನ್​ ಸಿಂಧೂರ ಬಳಿಕ ಪಂಜಾಬ್​ನ ಗಡಿಯ ಮೂರೂ ಚೆಕ್​ಪೋಸ್ಟ್​ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ಬೀಟಿಂಗ್​ ರಿಟ್ರೀಟ್​ (ಕವಾಯತ್​​) ಇಂದಿನಿಂದ ಆರಂಭವಾಗಲಿದೆ ಎಂದು ಬಿಎಸ್​ಎಫ್​ ಘೋಷಿಸಿದೆ. ಅಟ್ಟಾರಿ - ವಾಘಾ, ಹುಸೇನಿವಾಲಾ ಮತ್ತು ಸದ್ಕಿ ಜಂಟಿ ಚೆಕ್ ಪೋಸ್ಟ್‌ಗಳಲ್ಲಿ ಧ್ವಜ ಇಳಿಸುವ ಕಾರ್ಯಕ್ರಮವೇ ಈ ಬೀಟಿಂಗ್​ ರಿಟ್ರೀಟ್​ ಆಗಿದೆ. ಆಪರೇಷನ್​ ಸಿಂಧೂರ ಕಾರ್ಯಾಚರಣೆಯಿಂದಾಗಿ ಮೇ 9 ರಂದು ಸಂಜೆ 6 ರಿಂದ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಈ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಪುನಾರಂಭಗೊಳ್ಳಲಿದೆ. ಬುಧವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಈ ರಿಟ್ರೀಟ್​ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಿಸ್ತು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸಲಾಗುವುದು. ಗೊತ್ತುಪಡಿಸಿದ ಗಡಿಯಲ್ಲಿ ಬಿಎಸ್​ಎಫ್​ ಮತ್ತು ಪಾಕಿಸ್ತಾನಿ ಸೇನೆ ಮುಖಾಮುಖಿಯಾಗಿ ಈ ಕವಾಯತು ನಡೆಸುತ್ತದೆ. ಈ ಕಾರ್ಯಕ್ರಮ ಪ್ರಮುಖವಾಗಿ ಮೂರು ಗಡಿ ಸ್ಥಳದಲ್ಲಿ ನಡೆಯುತ್ತದೆ. ಅಮೃತ್​ಸರದ ಅಟ್ಟಾರಿ Atul, ಫಿರೋಜ್​ಪುರ್​ನ ಹುಸೇನಿವಾಲಾ ಮತ್ತು ಫಾಜಿಲ್ಕಾ ಜಿಲ್ಲೆಯ ಸದ್ಕಿಯಲ್ಲಿ ಸಾಗುತ್ತದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುವ ಧ್ವಜಗಳನ್ನು ಇಳಿಸುವ ಕಾರ್ಯಕ್ರಮ ಹಾಗೂ ಕವಾಯತುಗಳನ್ನು ವೀಕ್ಷಿಸಲು ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಮತ್ತು ಪ್ರವಾಸಿಗರು ಸೇರುತ್ತಾರೆ. ಈ ಕವಾಯತು ಪುನರ್​ ಆರಂಭವಾಗುತ್ತಿರುವ ಹಿನ್ನೆಲೆ ಪ್ರವಾಸಿಗರನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲ ಭದ್ರತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಭದ್ರತಾ ಕಾಳಜಿಗಳು ಮತ್ತು ಸಾಂಕ್ರಾಮಿಕ ರೋಗ ಸಂಬಂಧಿತ ನಿರ್ಬಂಧಗಳಿಂದಾಗಿ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Category
ಕರಾವಳಿ ತರಂಗಿಣಿ