image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದನ ವಿರಾಮಕ್ಕೆ ನಿರ್ದಿಷ್ಟ ಅಂತಿಮ ದಿನಾಂಕವಿಲ್ಲ ಎಂದ ಸೇನೆ

ಕದನ ವಿರಾಮಕ್ಕೆ ನಿರ್ದಿಷ್ಟ ಅಂತಿಮ ದಿನಾಂಕವಿಲ್ಲ ಎಂದ ಸೇನೆ

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವು ಇಂದಿಗೆ(ಭಾನುವಾರ) ಕೊನೆಗೊಳ್ಳುವ ವರದಿಗಳ ಹಿನ್ನೆಲೆಯಲ್ಲಿ, ಸ್ಪಷ್ಟನೆ ನೀಡಿರುವ ಭಾರತೀಯ ಸೇನೆಯು, ಇಂದೂ ಸಹ ಈ ಒಪ್ಪಂದವು ಮುಂದುವರೆಯಲಿದೆ. ಕದನ ವಿರಾಮಕ್ಕೆ ನಿರ್ದಿಷ್ಟ ಅಂತಿಮ ದಿನಾಂಕವಿಲ್ಲ ಎಂದು ತಿಳಿಸಿದೆ. ''ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಇಂದು ಕೊನೆಗೊಳ್ಳುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಮೇ 12ರಂದು ಡಿಜಿಎಂಒಗಳ ಮಾತುಕತೆ ವೇಳೆ ನಿರ್ಧರಿಸಿದಂತೆ ಯುದ್ಧ ವಿರಾಮದ ಮುಂದುವರಿಕೆಗೆ ಸಂಬಂಧಿಸಿದಂತೆ, ಅದಕ್ಕೆ ಯಾವುದೇ ಅಂತಿಮ ದಿನಾಂಕವಿಲ್ಲ" ಎಂದು ಸೇನೆಯು ಹೇಳಿದೆ. ಈ ಸಂಬಂಧ ಇಂದು ಡಿಜಿಎಂಒ ನಡುವೆ ಯಾವುದೇ ಮಾತುಕತೆಯು ನಿಗದಿಯಾಗಿಲ್ಲ ಎಂದು ಸೇನೆಯು ಮಾಹಿತಿ ನೀಡಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್​​ನ ಬೈಸರನ್ ಹುಲ್ಲುಗಾವಲಿನಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯನೋರ್ವನನ್ನು ಉಗ್ರರು ಕೊಂದ ಹಿನ್ನೆಲೆಯಲ್ಲಿ ಭಾರತವು ಪಾಕ್​​ನಲ್ಲಿನ ಉಗ್ರರ ನೆಲೆಗಳ ಮೇಲೆ ಆಪರೇಷನ್​ ಸಿಂಧೂರ ಕೈಗೊಂಡಿತ್ತು. ಅದರ ಬೆನ್ನಲ್ಲೇ, ಪಾಕಿಸ್ತಾನಿ ಸೇನೆಯು ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದ ಬಳಿಕ, ಉಭಯ ದೇಶಗಳ ನಡುವೆ ನಾಲ್ಕು ದಿನಗಳ ಸಶಸ್ತ್ರ ಸಂಘರ್ಷ ಉಂಟಾಗಿತ್ತು. ಈ ಸಂಘರ್ಷವು ಎರಡೂ ಕಡೆಗಳಲ್ಲಿ ಹಲವಾರು ನಾಗರಿಕರ ಸಾವಿಗೆ ಕಾರಣವಾಯಿತು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶದಿಂದ ಎರಡೂ ದೇಶಗಳು ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿದ್ದವು. ಮೇ 10ರಂದು ಪರಸ್ಪರ ಕದನ ವಿರಾಮ ಘೋಷಣೆ ಮಾಡಲಾಗಿತ್ತು.

Category
ಕರಾವಳಿ ತರಂಗಿಣಿ