image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೋಟ್​ ಬ್ಯಾನ್​ ಆಗಿ ಒಂಬತ್ತು ವರ್ಷಗಳ ಬಳಿಕ 18 ಲಕ್ಷ ರೂ. ಮೌಲ್ಯದ ಹಳೆಯ ಕರೆನ್ಸಿ ನೋಟು ವಶ!

ನೋಟ್​ ಬ್ಯಾನ್​ ಆಗಿ ಒಂಬತ್ತು ವರ್ಷಗಳ ಬಳಿಕ 18 ಲಕ್ಷ ರೂ. ಮೌಲ್ಯದ ಹಳೆಯ ಕರೆನ್ಸಿ ನೋಟು ವಶ!

ಹರಿಯಾಣ: ಕೇಂದ್ರ ಸರ್ಕಾರವು 500 ಮತ್ತು 1,000 ರೂ.ಗಳ ಮೇಲಿನ ಕಾನೂನು ಬದ್ಧತೆಯನ್ನು(ಲೀಗಲ್​ ಟೆಂಡರ್​) ಹಿಂತೆಗೆದುಕೊಂಡು, ರದ್ದತಿ ಘೋಷಿಸಿದೆ. ಈ ನಡುವೆ ನೋಟ್​ ಬ್ಯಾನ್​ ಆಗಿ ಒಂಬತ್ತು ವರ್ಷಗಳ ಬಳಿಕವೂ ಹರಿಯಾಣದ ಸೋನಿಪತ್‌ನ ಪೊಲೀಸರು ಸುಮಾರು 18 ಲಕ್ಷ ರೂ. ಮೌಲ್ಯದ ಹಳೆಯ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಲ್ಲಿನ ರಥಧಾನ ರಸ್ತೆಯಲ್ಲಿರುವ ಹೋಟೆಲ್‌ನಿಂದ 17.97 ಲಕ್ಷ ರೂ. ಮೌಲ್ಯದ 500 ಮತ್ತು 1000 ರೂ.ಗಳ ಹಳೆಯ ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನವದೆಹಲಿಯ ನಯ್ ಬಸ್ತಿ ನಿವಾಸಿ ಸುರೇಶ್ ಮತ್ತು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಪಾವ್ಲಾ ಗ್ರಾಮದ ನಿವಾಸಿ ಪ್ರದೀಪ್ ಎಂಬ ಇಬ್ಬರು ಆರೋಪಿಗಳನ್ನು ಸೋನಿಪತ್ ಪೊಲೀಸರು ಬಂಧಿಸಿದ್ದಾರೆ.

ಕೆಲವರು ಹಳೆಯ ನೋಟುಗಳನ್ನು ಅಕ್ರಮವಾಗಿ ಹೊಸ ಕರೆನ್ಸಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ, ಪೊಲೀಸರು ರಥದಾನ ರಸ್ತೆಯಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆಸಿದರು. ಶೋಧದ ಸಮಯದಲ್ಲಿ, ನಾವು ಹೆಚ್ಚಿನ ಸಂಖ್ಯೆಯ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದೇವೆ. ವಿಚಾರಣೆಯ ಸಮಯದಲ್ಲಿ ಆರೋಪಿಗಳು ಬ್ಯಾಂಕ್ ನೌಕರರು ಅಥವಾ ಅನಿವಾಸಿ ಭಾರತೀಯರ ಮೂಲಕ ಈ ನೋಟುಗಳನ್ನು ಹೊಸ ಕರೆನ್ಸಿಯಾಗಿ ಪರಿವರ್ತಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಟು ರದ್ದತಿಯ ನಂತರ ಹಳೆಯ ಕರೆನ್ಸಿ ದುರುಪಯೋಗ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಭಾಷ್ ಚಂದ್ರ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಮತ್ತು ಪ್ರಕರಣದ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಈ ನೋಟುಗಳು ಎಲ್ಲಿಂದ ಬಂದವು ಮತ್ತು ಅವುಗಳನ್ನು ವಿನಿಮಯ ಮಾಡಿಕೊಳ್ಳುವ ಯೋಜನೆಯಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬುದನ್ನು ಕಂಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

 

Category
ಕರಾವಳಿ ತರಂಗಿಣಿ