ಜಮ್ಮು: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸ್ವಲ್ಪ ಸಮಯದ ನಂತರ, ಜಮ್ಮುವಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಲು ಸನ್ನದ್ಧವಾಗಿರುವ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆಹಿಡಿದಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಾಂಬಾ ವಲಯದಲ್ಲಿ ಕಡಿಮೆ ಸಂಖ್ಯೆಯ ಡ್ರೋನ್‌ಗಳು ಬಂದಿವೆ. ಗಾಬರಿಪಡುವ ಅವಶಯಕತೆಗಳೇನೂ ಇಲ್ಲ ಎಂದು ರಕ್ಷಣಾ ಸಚಿವಾಲಯದ (MoD) ಮೂಲಗಳು ತಿಳಿಸಿವೆ. ಈ ನಡುವೆ ಪಂಜಾಬ್ ನ ಹೊಸಿಯಾರಪುರದಲ್ಲಿ ಮುಂಜಾಗ್ರತವಾಗಿ ಸ್ವಯಂ ಆಗಿ ಬ್ಲಾಕ್ ಔಟ್ ಮಾಡಲಾಗಿದೆ. ಯಾವುದೇ ಮುಂಬರುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಡಿಸಿ ಆಶಿಕಾ ಜೈನ್ ತಿಳಿಸಿದ್ದಾರೆ.