image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉತ್ತರ ಬುರ್ಕಿನಾ ಫಾಸೊದಲ್ಲಿ ಜಿಹಾದಿ ಗುಂಪಿನ ದಾಳಿ

ಉತ್ತರ ಬುರ್ಕಿನಾ ಫಾಸೊದಲ್ಲಿ ಜಿಹಾದಿ ಗುಂಪಿನ ದಾಳಿ

ಬಮಕೊ: ಉತ್ತರ ಬುರ್ಕಿನಾ ಫಾಸೊದಲ್ಲಿ ಜಿಹಾದಿ ಗುಂಪಿನ ದಾಳಿ ನಡೆದಿದ್ದು, 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಾಗಿ ಸೈನಿಕರು, ವೈದ್ಯಕೀಯ ಸಹಾಯಕ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳಿದ್ದಾರೆ. ಮಿಲಿಟರಿ ನೆಲೆ ಮತ್ತು ದೀರ್ಘಕಾಲದಿಂದ ಮುತ್ತಿಗೆ ಹಾಕಿದ್ದ ಜಿಬೊ ಸೇರಿದಂತೆ ಹಲವು ಸ್ಥಳಗಳ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆದಿದೆ. ತನ್ನ ತಂದೆ ಸೇರಿದಂತೆ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಿಲಿಟರಿ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿರುವ, ಜಾಗತಿಕ ಉಗ್ರ ತಾಣ ಎಂದು ಕರೆಯಲ್ಪಡುವ ಆಫ್ರಿಕಾದ ಸಹೇಲ್ ಪ್ರದೇಶ ಭದ್ರತಾ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾಗಿದೆ. 2022 ರಲ್ಲಿ ಎರಡು ದಂಗೆಗಳಿಗೆ ಕಾರಣವಾದ ಹಿಂಸಾಚಾರದ ಪರಿಣಾಮವಾಗಿ ಬುರ್ಕಿನಾ ಫಾಸೊದ ಅರ್ಧದಷ್ಟು ಭಾಗವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಸರ್ಕಾರಿ ಭದ್ರತಾ ಪಡೆಗಳ ಮೇಲೆ ಕಾನೂನುಬಾಹಿರ ಹತ್ಯೆಗಳ ಆರೋಪವೂ ಇದೆ.

ಸಹೇಲ್​ ನಗರ ಸೇರಿದಂತೆ  ಏಕಕಾಲದಲ್ಲಿ ವಿವಿಧ ಸ್ಥಳದಲ್ಲಿ ದಾಳಿಗಳು ಹೇಗೆ ನಡೆದಿವೆ ಎಂದು ವೈದ್ಯಕೀಯ ಸಹಾಯ ಕಾರ್ಯಕರ್ತರ ಚಾರ್ಲಿ ವರ್ಬ್​ ವಿವರಿಸಿದ್ದಾರೆ. ಬುರ್ಕಿನಾ ಫಾಸೊ ವಾಯುಪಡೆಯನ್ನು ಚದುರಿಸಲು ಜೆಎನ್​ಐಎಂ ಉಗ್ರರು ಏಕಕಾಲದಲ್ಲಿ ಎಂಟು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಜಿಬೋ ಮೇಲೆ ದಾಳಿ ಮಾಡಲಾಗಿದೆ. ಜೆಎನ್​ಐಎಂ ಉಗ್ರರು ಮೊದಲು ಮಿಲಿಟರಿ ಶಿಬಿರಗಳ ಮೇಲೆ, ವಿಶೇಷವಾಗಿ ವಿಶೇಷ ಭಯೋತ್ಪಾದನಾ ನಿಗ್ರಹ ಘಟಕದ ಶಿಬಿರದ ಮೇಲೆ ದಾಳಿ ನಡೆಸಿ ಹಿಡಿತ ಸಾಧಿಸಿದ್ದಾರೆ.

ಈ ಪ್ರದೇಶದಲ್ಲಿ ದಾಳಿಕೋರರು ಹಲವು ಗಂಟೆಗಳ ಕಾಲ ಕಳೆದಿದ್ದು, ಬುರ್ಕಿನಾ ಫಾಸೋ ಸೇನೆಯ ಬೆಂಬಲವಿಲ್ಲದೇ ಹಲವು ಗಂಟೆಗಳ ಕಾಲ ಕಳೆದಿದ್ದಾರೆ. ಇದೇ ರೀತಿಯ ದಾಳಿ ಈ ಹಿಂದೆ ಜಿಬೊದಲ್ಲಿ ನಡೆದಿತ್ತು. ಈ ವೇಳೆ ಭದ್ರತಾ ಪಡೆಗಳು ಉಗ್ರಗಾಮಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರು.

Category
ಕರಾವಳಿ ತರಂಗಿಣಿ