image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕಾಶ್ಮೀರದ ಜಿಲ್ಲೆಗಳ ವಿವಿಧೆಡೆ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ದಾಳಿ ನಡೆಸಿ, ಪರಿಶೀಲನೆ

ದಕ್ಷಿಣ ಕಾಶ್ಮೀರದ ಜಿಲ್ಲೆಗಳ ವಿವಿಧೆಡೆ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ದಾಳಿ ನಡೆಸಿ, ಪರಿಶೀಲನೆ

ಕಾಶ್ಮೀರ: ದಕ್ಷಿಣ ಕಾಶ್ಮೀರದ(south Kashmir) ಕುಲ್ಗಾಮ್ ಮತ್ತು ಶೋಪಿಯಾನ್ ಜಿಲ್ಲೆಗಳ ವಿವಿಧೆಡೆ ರಾಜ್ಯ ತನಿಖಾ ಸಂಸ್ಥೆ (SIA)) ಇಂದು ಮುಂಜಾನೆ ದೊಡ್ಡ ಪ್ರಮಾಣದ ದಾಳಿ ನಡೆಸಿದೆ. ಇತರ ಭದ್ರತಾ ಪಡೆಗಳ ಸಹಯೋಗದೊಂದಿಗೆ ಎಸ್​ಐಎ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಮೂಲಗಳ ಪ್ರಕಾರ, ಕುಲ್ಗಾಮ್ ಜಿಲ್ಲೆಯ ಹೋಮ್ ಶಾಲಿ ಬಕ್ ಪ್ರದೇಶದಲ್ಲಿ ದಾಳಿ ಕೈಗೊಳ್ಳಲಾಗಿದ್ದು, ಶೋಪಿಯಾನ್(SHOPIAN) ಜಿಲ್ಲೆಯ ಮಜ್ ಮಾರ್ಗ್ ಜೈನ್‌ಪುರ, ವೈನ್ ಇಮಾಮ್ ಸಾಹಿಬ್ ಮತ್ತು ರಿಬಾನ್ ಶೋಪಿಯಾನ್ ಪ್ರದೇಶಗಳಲ್ಲಿಯೂ ಎಸ್‌ಐಎ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯ ಹಿಂದಿನ ಉದ್ದೇಶದ ಬಗ್ಗೆ ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ದಾಳಿ ವೇಳೆ ಯಾರನ್ನೂ ಬಂಧನ ಮಾಡಿಲ್ಲ ಹಾಗೂ ಯಾವುದೇ ವಸ್ತುಗಳನ್ನು ವಶಪಡೆದಿರುವ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಈ ಬಗ್ಗೆ ಎಸ್‌ಐಎ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

Category
ಕರಾವಳಿ ತರಂಗಿಣಿ