image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಡುಗಡೆ ಮಾಡುವಂತೆ ಕೋರ್ಟ್​ ಮೊರೆ ಹೋದ ಪಾಪಿ ಪಾಕಿಸ್ಥಾನದ ಮಾಜಿ ಪ್ರದಾನಿ ಇಮ್ರಾನ್​ ಖಾನ್

ಬಿಡುಗಡೆ ಮಾಡುವಂತೆ ಕೋರ್ಟ್​ ಮೊರೆ ಹೋದ ಪಾಪಿ ಪಾಕಿಸ್ಥಾನದ ಮಾಜಿ ಪ್ರದಾನಿ ಇಮ್ರಾನ್​ ಖಾನ್

ಪಾಕಿಸ್ತಾನ: ಭಾರತ ಮತ್ತು ಪಾಕ್​ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾನಿರುವ ಜೈಲಿನ ಮೇಲೆ ಕೂಡ ಡ್ರೋನ್​ ದಾಳಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಪಾಕಿಸ್ತಾನ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.ಇಮ್ರಾನ್​ ಖಾನ್ ಅವರ​ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವಾಟ್ಸ್​ಆ್ಯಪ್​ ಸಂದೇಶದಲ್ಲಿ, ಇಮ್ರಾನ್​ ಖಾನ್​ ಬಿಡುಗಡೆಗಾಗಿ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿಸಲಾಗಿದೆ. ಇಮ್ರಾನ್​ ಖಾನ್​ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿತರಾಗಿದ್ದಾರೆ.

ಭಾರತದ ಜೊತೆಗೆ ಸದ್ಯದ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದ್ದು, ದೇಶದ ಸಾಮರಸ್ಯ ಮತ್ತು ಏಕತೆಗಾಗಿ ಹಾಗೂ ಅಡಿಯಾಲಾ ಜೈಲಿನ ಮೇಲೆ ಡ್ರೋನ್​ ದಾಳಿಯಾಗುವ ಸಾಧ್ಯತೆ ಇದೆ. ತಕ್ಷಣಕ್ಕೆ ಇಮ್ರಾನ್​ ಖಾನ್​ ಅವರನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಆದರೆ, ಕೋರ್ಟ್​ ಈ ಅರ್ಜಿ ವಿಚಾರಣೆಗೆ ಇನ್ನು ದಿನವನ್ನು ನಿಗದಿ ಮಾಡಿಲ್ಲ ಎಂದು ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ