image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಗತ್ಯವಿದ್ದರೆ ನೆರವಿಗೆ ಸಿದ್ದವಿದ್ದೇನೆ : ಡೊನಾಲ್ಡ್ ಟ್ರಂಪ್

ಅಗತ್ಯವಿದ್ದರೆ ನೆರವಿಗೆ ಸಿದ್ದವಿದ್ದೇನೆ : ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್​: ಭಾರತ ಮತ್ತು ಪಾಕಿಸ್ತಾನ ದೇಶಗಳು ಸಂಘರ್ಷ ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೆ ನೀಡಿದ್ದು, ಅಗತ್ಯವಿದ್ದರೆ ತಾವು ಯಾವುದೇ ಸಹಾಯ ಮಾಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.

ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಭಯಾನಕ. ಎರಡೂ ಕಡೆಯವರ ಪರ ಇರುವುದು ನನ್ನ ನಿಲುವಾಗಿದೆ. ಇದು ಉಭಯ ರಾಷ್ಟ್ರಗಳಿಗೂ ಚೆನ್ನಾಗಿ ತಿಳಿದಿದೆ. ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂದು ನಾನು ನೋಡಲು ಬಯಸುತ್ತೇನೆ. ಸಂಘರ್ಷ ನಿಲ್ಲಲಿದೆ ಎಂಬ ಭರವಸೆ ಇದೆ. ಟಿಟ್​​ ಫಾರ್​ ಟಾಟ್​ (ಒಂದಕ್ಕೆ ಪ್ರತಿಯಾಗಿ ಮತ್ತೊಂದು) ಎಂಬಂತೆ ವರ್ತಿಸಲ್ಲ ಎಂದೆನಿಸುತ್ತದೆ. ಎರಡೂ ದೇಶಗಳೊಂದಿಗೆ ನಾವು ಉತ್ತಮ ಹೊಂದಾಣಿಕೆ ಬಯಸುತ್ತೇವೆ ಎಂದಿದ್ದಾರೆ.

ಎರಡೂ ಕಡೆಗಳೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ನಾನು ಏನಾದರೂ ಸಹಾಯ ಮಾಡುವ ಅಗತ್ಯವಿದ್ದರೆ, ಅದಕ್ಕೆ ಸಿದ್ದನಿದ್ದೇನೆ ಎಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದದ ಕುರಿತಾದ ಪ್ರಶ್ನೆಗೆ ಟ್ರಂಪ್​ ಪ್ರತಿಕ್ರಿಯೆ ನೀಡಿದ್ದಾರೆ. ಚೀನಾಕ್ಕೆ ಅಮೆರಿಕದ ರಾಯಭಾರಿಯಾಗಿ ಡೇವಿಡ್ ಪೆರ್ಡ್ಯೂ ಪ್ರಮಾಣವಚನ ಸ್ವೀಕರ ಸಮಾರಂಭದ ವೇಳೆ ಓವಲ್ ಕಚೇರಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದರು.

ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಭಾರತ - ಪಾಕ್​ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ ಬಳಿಕ ಟ್ರಂಪ್​ ಎರಡನೇ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಆಪರೇಷನ್​ ಸಿಂಧೂರ​ದ ಕುರಿತಂತೆ ಹೇಳಿಕೆ ನೀಡಿದ್ದ ಟ್ರಂಪ್​, ಭಾರತ ಮತ್ತು ಪಾಕಿಸ್ತಾನ ದೀರ್ಘಕಾಲದಿಂದ ಸಂಘರ್ಷ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ಇದು ಬೇಗ ಕೊನೆಗೊಳ್ಳಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

Category
ಕರಾವಳಿ ತರಂಗಿಣಿ