ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮೂಡಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಹಲವು ನಿರ್ಬಂಧಗಳನ್ನು ವಿಧಿಸಿವೆ. ಈ ನಡುವೆ ಪಾಕಿಸ್ತಾನವು ಎರಡೂ ರಾಷ್ಟ್ರಗಳ ಪರಿಸ್ಥಿತಿಯ ಕುರಿತು ತುರ್ತು ಸಮಾಲೋಚನೆ ನಡೆಸುವಂತೆ ಕೋರಿದ್ದು, ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ(united nations organization) ಇಂದು ಗೌಪ್ಯ ಸಭೆ ನಡೆಸಲಿದೆ.
ಪಾಕಿಸ್ತಾನ(Pakistan) ಸದ್ಯ 12 ರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ದೇಶವಾಗಿದ್ದು, ಮೇ ತಿಂಗಳಲ್ಲಿ ಗ್ರೀಸ್ನಲ್ಲಿ ಸಭೆಯ ಅಧ್ಯಕ್ಷತೆ ವಹಿಸಲಿದೆ. ಪಾಕಿಸ್ತಾನದ ಮನವಿ ಮೇರೆಗೆ ಗ್ರೀಕ್ ಪ್ರೆಸಿಡೆನ್ಸಿಯು(greek presidency) ಇಂದು ಮಧ್ಯಾಹ್ನಕ್ಕೆ ಸಭೆ ನಿಗದಿಪಡಿಸಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಕುರಿತು ರಹಸ್ಯ ಸಮಾಲೋಚನೆ ನಡೆಸುವಂತೆ ಇಸ್ಲಾಮಾಬಾದ್(Islamabad) ವಿನಂತಿಸಿತ್ತು.
ವೀಟೋದ(VITO) ಐವರು ಶಾಶ್ವತ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಜೊತೆಗೆ, ಭದ್ರತಾ ಮಂಡಳಿಯ 10 ಖಾಯಂ ಸದಸ್ಯರಾಗಿ ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸೊಮಾಲಿಯಾಗಳು ಇವೆ.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪರಮಾಣು ಶಸ್ತ್ರಸಜ್ಜಿತ(Atomic weapon's) ದಕ್ಷಿಣ ಏಷ್ಯಾದ ನೆರೆಹೊರೆಯವರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಸಭೆಯು ಮಹತ್ವ ಪಡೆದುಕೊಂಡಿದೆ. ವಿಶ್ವಸಂಸ್ಥೆಗೆ ಗ್ರೀಸ್‌ನ ಖಾಯಂ ಪ್ರತಿನಿಧಿ ಮತ್ತು ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜೆಲೋಸ್ ಸೆಕೆರಿಸ್ ಅವರು ಕಳೆದ ವಾರ ಮಾತನಾಡಿ, ''ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಚರ್ಚಿಸಲು ಸಭೆಗೆ ವಿನಂತಿ ಬಂದರೆ, ಆ ಸಭೆ ನಡೆಯಬೇಕು ಎಂದು ನಾನು ಭಾವಿಸುತ್ತೇನೆ. ಪರಸ್ಪರ ಅಭಿಪ್ರಾಯ ವ್ಯಕ್ತಪಡಿಸಲು ಇದೊಂದು ಅವಕಾಶ ಆಗಬಹುದು. ಹಾಗೂ ಉದ್ವಿಗ್ನತೆಯನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಲು ನೆರವಾಗಬಹುದು" ಎಂದು ಹೇಳಿದ್ದರು.
"ಈ ಬಗ್ಗೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಅಲ್ಲದೆ, ಸಮಸ್ಯೆಯು ಬಹುಬೇಗ ಇತ್ಯರ್ಥವಾಗುವ ಸಾಧ್ಯತೆ ಇದೆ. ಅದಕ್ಕಾಗಿ ನಾವು ಎದುರು ನೋಡುತ್ತೇವೆ, ಹಾಗೂ ತಯಾರಿ ನಡೆಸುತ್ತಿದ್ದೇವೆ" ಎಂದು ಸುದ್ದಿ ಸಂಸ್ಥೆ ಪಿಟಿಐಗೆ ಸೆಕೆರಿಸ್ ತಿಳಿಸಿದ್ದರು. ಅಲ್ಲದೆ, "ನಾನು ಮೊದಲೇ ಹೇಳಿದಂತೆ, ತಾತ್ವಿಕವಾಗಿ ನಾವು ಯಾವುದೇ ಭಯೋತ್ಪಾದನಾ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ಬಗ್ಗೆಯೂ ನಮ್ಮ ನಿಲುವು ಇದೇ ಆಗಿದೆ" ಎಂದು ಪ್ರಶ್ನೆಯೊಂದಕ್ಕೆ ಸೆಕೇರಿಸ್ ಪ್ರತಿಕ್ರಿಯಿಸಿದ್ದರು.
"ಭಾರತ, ನೇಪಾಳ ಸರ್ಕಾರ ಮತ್ತು ಮೃತರ ಕುಟುಂಬಗಳಿಗೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ಇದು ನಮ್ಮ ತತ್ವದ ನಿಲುವು. ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಮತ್ತೊಂದೆಡೆ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ. ಎರಡು ದೊಡ್ಡ ದೇಶಗಳಾಗಿವೆ. ಸಹಜವಾಗಿ, ಭಾರತ ಪಾಕಿಸ್ತಾನಕ್ಕಿಂತ ದೊಡ್ಡದಾಗಿದೆ" ಎಂದು ಸೆಕೆರಿಸ್ ತಿಳಿಸಿದ್ದರು.