image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಮುನಾತ್ರಿ, ಗಂಗೋತ್ರಿ ಜೊತೆ ಕೇದಾರ​ನಾಥ ದೇವಾಲಯ ಭಕ್ತರಿಗೆ ಮುಕ್ತ....

ಯಮುನಾತ್ರಿ, ಗಂಗೋತ್ರಿ ಜೊತೆ ಕೇದಾರ​ನಾಥ ದೇವಾಲಯ ಭಕ್ತರಿಗೆ ಮುಕ್ತ....

ಉತ್ತರಾಖಂಡ : ಪವಿತ್ರ ಕೇದಾರ​ನಾಥ​​ ದೇಗುಲದ ದ್ವಾರವನ್ನು ಶಾಸ್ತ್ರೋಕ್ತವಾಗಿ ಮೇ 2 ರಂದು ತೆರೆಯಲಾಯಿತು. ಸುಮಾರು 15,000 ಭಕ್ತರು ಮೊದಲ ದಿನ ದರ್ಶನ ಪಡೆದರು. ಅರ್ಚಕರು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ದ್ವಾರಗಳನ್ನು ತೆಗೆಯಲಾಯಿತು. ಕೇದಾರನಾಥದ ಪ್ರಧಾನ ಅರ್ಚಕ ರಾವಲ್ ಭೀಮಾಶಂಕರ್ ಲಿಂಗ್ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಏಪ್ರಿಲ್ 30ರಂದು ತೆರೆಯಲಾದ ಯಮುನೋತ್ರಿ ಮತ್ತು ಗಂಗೋತ್ರಿಯ ದ್ವಾರಗಳು ಭಕ್ತರ ದರ್ಶನಕ್ಕೆ ಮುಕ್ತವಾಗಿವೆ. ಇಂದು ಕೇದಾರನಾಥದ​ ದ್ವಾರ ತೆರೆದಿದೆ. ಬದರಿನಾಥದ ಬಾಗಿಲು ಮೇ 4ರಂದು ತೆರೆಯಲಿದೆ. ಈ ಮೂಲಕ ಉತ್ತರಾಖಂಡದ ಪ್ರಸಿದ್ಧ ಚಾರ್​ಧಾಮ್​ ಯಾತ್ರೆ ಆರಂಭವಾಗುತ್ತದೆ. ಕೇದಾರನಾಥ​ ದೇಗುಲದ ಮೊದಲ ಪೂಜೆಯ ಸಮಯದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅಗ್ರ ಪೂಜೆ ನಡೆಯಿತು. ದೇಶದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಿಎಂ ಧಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥನ ಅನುಯಾಯಿಯಾಗಿದ್ದು, ಅವರ ಮಾರ್ಗದರ್ಶನದಿಂದ 2013ರ ವಿಕೋಪದ ಬಳಿಕ ಬೃಹತ್​ ಮೂಲಸೌಕರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ ಎಂದರು. ದ್ವಾರ ತೆಗೆಯುವ ಸಮಾರಂಭದ ಸಂದರ್ಭದಲ್ಲಿ ಶಾಸಕಿ ಆಶಾ ನೌಟಿಯಾ ಕೂಡ ಉಪಸ್ಥಿತರಿದ್ದರು. ಈ ಅದ್ಬುತ ಘಳಿಗೆ ಕಂಡು ಹೃದಯ ತುಂಬಿ ಬಂತು. ಮನಸ್ಸಿನಲ್ಲಿ ಶಾಂತಿ ಮೂಡಿತು ಎಂದರು.

ದೇಗಲವನ್ನು 108 ಕ್ವಿಂಟಲ್​ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ನೇಪಾಳ, ಥೈಲ್ಯಾಂಡ್​​ ಮತ್ತು ಶ್ರೀಲಂಕಾದಿಂದಲೂ ಹೂವುಗಳನ್ನು ತರಿಸಲಾಗಿತ್ತು. ಮೇ 1ರಂದು ಉಖಿಮಠದ ಓಂಕಾರೇಶ್ವರ ದೇವಸ್ಥಾನದಿಂದ ಕೇದಾರನಾಥ ವಿಗ್ರಹವನ್ನು ಪಂಚಮುಖಿ ಚಲ್ ವಿಗ್ರಹ ಡೋಲಿ ಮೂಲಕ ತರಲಾಗಿತ್ತು.

ಚಾರ್​ಧಾಮ್​ ಯಾತ್ರಿಗಳಿಗೆ ಸೌಲಭ್ಯ ಸೇರಿದಂತೆ ಜನಸಂದಣಿ ನಿರ್ವಹಿಸಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಮುಂದಿನ ಆರು ತಿಂಗಳಗಳ ಕಾಲ ಜಗತ್ತಿನೆಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಾವು ಸಿದ್ದರಾಗಿದ್ದೇವೆ ಎಂದು ಬದ್ರಿ, ಕೇದಾರ್​ ದೇಗುಲಗಳ ಸಮಿತಿಯ ಮುಖ್ಯ ಕಾರ್ಯದರ್ಶಿ ಅಧಿಕಾರಿ ವಿಜಯ್​ ಪ್ರಸಾದ್​ ಥಾಪ್ಲಿಯಾಲ್​ ತಿಳಿಸಿದರು. ಯಮುನೋತ್ರಿ, ಗಂಗೋತ್ರಿ, ಕೇದರನಾಥ ಮತ್ತು ಬದ್ರಿನಾಥ​​ಗಳ ಚಾರ್​ಧಾಮ್​ ಯಾತ್ರೆ ಅಕ್ಟೋಬರ್​-ನವಂಬರ್​ವರೆಗೆ ಸಾಗಲಿದ್ದು, ಚಳಿಗಾಲದಲ್ಲಿ ಈ ದೇಗುಲಗಳ ದ್ವಾರವನ್ನು ಮುಚ್ಚಲಾಗುತ್ತದೆ.

Category
ಕರಾವಳಿ ತರಂಗಿಣಿ