image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ-ಪಾಕ್ ಉದ್ವಿಗ್ನತೆ ಶಮನಕ್ಕೆ ಮುಂದಾದ​ ಅಮೆರಿಕ

ಭಾರತ-ಪಾಕ್ ಉದ್ವಿಗ್ನತೆ ಶಮನಕ್ಕೆ ಮುಂದಾದ​ ಅಮೆರಿಕ

ಅಮೆರಿಕ : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಶಮನಕ್ಕೆ ಅಮೆರಿಕ(america) ಮುಂದಾಗಿದ್ದು, ಭಯೋತ್ಪಾದನೆಯ ವಿರುದ್ಧ ದೆಹಲಿಯೊಂದಿಗೆ ಸಹಕರಿಸುವ ತನ್ನ ಬದ್ಧತೆಯ ಬಗ್ಗೆ ಪುನರುಚ್ಚರಿಸಿದೆ. ಅಲ್ಲದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಗೆ ಸಹಕಾರ ನೀಡುವಂತೆ ಇಸ್ಲಾಮಾಬಾದ್​ಗೆ(ಪಾಕಿಸ್ತಾನಕ್ಕೆ) ಒತ್ತಾಯಿಸಿದೆ.

ವಿದೇಶಾಂಗ ಕಾರ್ಯದರ್ಶಿ(foriegn secretary) ಮಾರ್ಕೊ ರುಬಿಯೊ(marco rubio) ಬುಧವಾರ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್(subrahmanyam jaishankar) ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ಜೈಶಂಕರ್ ಅವರೊಂದಿಗಿನ ತಮ್ಮ ಕರೆಯಲ್ಲಿ, ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿರುವ ಬಗ್ಗೆ ದುಃಖ ವ್ಯಕ್ತಪಡಿಸಿದರು.

ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಅಮೆರಿಕದ ಬದ್ಧತೆಯನ್ನು ರುಬಿಯೊ ಪುನರುಚ್ಚರಿಸಿದರು. ದಕ್ಷಿಣ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಶಾಂತಿ ಮತ್ತು ಭದ್ರತೆ(peace and security) ಕಾಪಾಡಲು ಪಾಕಿಸ್ತಾನದೊಂದಿಗೆ ಕೆಲಸ ಮಾಡುವಂತೆ ಭಾರತಕ್ಕೆ ಅವರು ಉತ್ತೇಜಿಸಿದರು ಎಂದು ವಿದೇಶಾಂಗ ಇಲಾಖೆ ವಕ್ತಾರ ಟ್ಯಾಮಿ ಬ್ರೂಸ್(tyami bruice) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಷರೀಫ್ ಜೊತೆಗಿನ ತಮ್ಮ ಸಂಭಾಷಣೆಯಲ್ಲಿ, ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಅಗತ್ಯತೆಯ ಬಗ್ಗೆ ರುಬಿಯೊ ಮಾತನಾಡಿದ್ದಾರೆ. ಈ ಅವಿವೇಕದ ದಾಳಿಯ ತನಿಖೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು(Pakistani officer's) ಸಹಕಾರ ನೀಡುವಂತೆ ಒತ್ತಾಯಿಸಿದರು.

ಉದ್ವಿಗ್ನತೆಯನ್ನು ಕಡಿಮೆ ಮಾಡಲು, ನೇರ ಸಂವಹನ ಮರುಸ್ಥಾಪನೆ ಹಾಗೂ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಕಾರ್ಯ ನಿರ್ವಹಿಸುವಂತೆ ಮಾರ್ಕೊ ರುಬಿಯೊ ತಿಳಿಸಿದರು.

 

Category
ಕರಾವಳಿ ತರಂಗಿಣಿ