ತಮಿಳುನಾಡು: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ರೋಬೋಟ್‌ಗಳು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬರಲಿವೆ. ಅಲ್ಲಿನ ಪೊಲೀಸ್ ಇಲಾಖೆ 'ರೆಡ್ ಬಟನ್ ರೋಬೋಟಿಕ್ ಕಾಪ್'(red button robocop) ಹೆಸರಿನ ರೋಬೋಟಿಕ್ ಪೊಲೀಸ್ ವಾಹನಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಅಳವಡಿಸುತ್ತಿದೆ. ಮಹಿಳೆಯರು, ಯುವತಿಯರು ಮತ್ತು ಅಪಾಯದಲ್ಲಿರುವ ಯಾರಾದರೂ ಈ ರೋಬೋಟ್‌ಗಳ ಮೂಲಕ ತುರ್ತು ಪೊಲೀಸ್ ನೆರವನ್ನು ಪಡೆಯಬಹುದು.
ಈ ರೋಬೋಟ್‌ನಲ್ಲಿ 'ಕೆಂಪು' ಬಟನ್ ಅಳವಡಿಸಲಾಗಿದೆ. ಅಪಾಯದಲ್ಲಿರುವವರು ಮತ್ತು ಪೊಲೀಸ್ ನೆರವು ಬೇಕಾದ ಯಾರಾದರೂ ಸರಿ, ಅದನ್ನು ಒತ್ತಿದರೆ ಸಾಕು. ತಕ್ಷಣವೇ ಈ ರೋಬೋಟ್ ತುರ್ತು ಕರೆ ಗಂಟೆಯನ್ನು ಮೊಳಗಿಸುತ್ತದೆ. ಇದು ಬಹಳ ದೂರದವರೆಗೂ ಕೇಳಿಸುತ್ತದೆ. ಇದನ್ನು ಅರಿಯುವ ಪೊಲೀಸ್ ಗಸ್ತು ಪಡೆಗಳು(patroling) ತಕ್ಷಣಕ್ಕೆ ನೆರವಿಗೆ ಬರಲಿದ್ದಾರೆ.
ಕಾಪ್ ರೋಬೋಟ್ ಗಳು ಸದ್ದು ಮಾಡುವ ಮೂಲಕ, ಹತ್ತಿರದ ಪೊಲೀಸ್(poloce) ಠಾಣೆಗೆ ಎಚ್ಚರಿಕೆಯನ್ನೂ ರವಾನಿಸುತ್ತದೆ. ಪೊಲೀಸ್ ಠಾಣೆಯ ಸಿಬ್ಬಂದಿಗೆ ಸ್ಥಳಕ್ಕೆ ತೆರಳುವಂತೆ ನೀಡುವ ಆದೇಶ ಇದಾಗಿರುತ್ತದೆ. 'ರೆಡ್ ಬಟನ್ ರೊಬೊಟಿಕ್ ಕಾಪ್' ದೊಡ್ಡ ಸದ್ದು ಮಾಡುವುದರಿಂದ ಹತ್ತಿರದ ಜನರಿಗೂ ಎಚ್ಚರಿಸುತ್ತದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ.
ರೆಡ್ ಬಟನ್ ರೋಬೋಟಿಕ್ ಕಾಪ್ ಮೈಕ್ರೊಫೋನ್(microphone), ಜಿಪಿಎಸ್ ಮತ್ತು ಕ್ಯಾಮೆರಾವನ್ನು ಹೊಂದಿದೆ. ಇದಕ್ಕೆ ಇಂಟರ್ನೆಟ್(internet) ಸಂಪರ್ಕವಿದೆ. ಸಂಕಷ್ಟದಲ್ಲಿರುವ ವ್ಯಕ್ತಿಯು ಇದರಲ್ಲಿರುವ ಕ್ಯಾಮೆರಾ ಬಳಸಿ ಹತ್ತಿರದ ಪೊಲೀಸ್ ಠಾಣೆಗೆ ವಿಡಿಯೋ ಕರೆ ಕೂಡ ಮಾಡಬಹುದು. ಈ ರೋಬೋಟ್ ಮೂಲಕ ಮಾಡಲಾದ ವೀಡಿಯೊ ಕರೆಗಳು(vedio call) ಮತ್ತು ಧ್ವನಿ ಕರೆಗಳು ದಾಖಲಾಗಿರುತ್ತದೆ. ಪೊಲೀಸರು ಆಯಾ ಪ್ರಕರಣಗಳ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಬಳಸಬಹುದು.
ರೆಡ್ ಬಟನ್ ರೋಬೋಟಿಕ್ ಕಾಪ್ ಯಾವುದೇ ದಿಕ್ಕಿನಲ್ಲಿ 360 ಡಿಗ್ರಿ ತಿರುಗುತ್ತದೆ. ಅದರಲ್ಲಿನ ಕ್ಯಾಮೆರಾಗಳು ಸುತ್ತಮುತ್ತಲಿನ ಪ್ರದೇಶದ ಮೇಲೆ ದಿನದ 24 ಗಂಟೆಯೂ ನಿಗಾ ಇಡುತ್ತವೆ. ವಿಡಿಯೋ ಮತ್ತು ಆಡಿಯೊವನ್ನು(vedio and audio)ರೆಕಾರ್ಡ್ ಮಾಡಿ ಸಂಗ್ರಹಿಸುತ್ತದೆ. ಇವುಗಳು ಪೊಲೀಸ್ ತನಿಖೆಗೆ ನೆರವಾಗಲಿವೆ.
ಮೊದಲ ಹಂತದಲ್ಲಿ, ಚೆನ್ನೈ ಮಹಾನಗರದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ 200 ಸ್ಥಳಗಳಲ್ಲಿ 'ರೆಡ್ ಬಟನ್ ರೋಬೋಟಿಕ್ ಕಾಪ್ಸ್' ಅನ್ನು ಅಳವಡಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ನಿಯಂತ್ರಿಸುವ ಭಾಗವಾಗಿ ಇವುಗಳನ್ನು ರೂಪಿಸಲಾಗಿದೆ. ಅವುಗಳ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಗುರುತಿಸಲು ಸಮೀಕ್ಷೆ ಸಹ ನಡೆಸಲಾಗಿದೆ.
ಈ ವರ್ಷದ ಜೂನ್‌ನಿಂದ ರೋಬೋಟ್ ಕಾಪ್ ಗಳು ಚೆನ್ನೈನ(chennai) ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳು, ಉದ್ಯಾನವನಗಳು ಮತ್ತು ಆಸ್ಪತ್ರೆಗಳಲ್ಲಿ ಕತ್ಯವ್ಯಕ್ಕೆ ಸಜ್ಜಾಗಲಿವೆ ಎಂದು ತಮಿಳುನಾಡು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.