image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಯೋತ್ಪಾದನೆ ಪ್ರಾಯೋಜಿಸುತ್ತಿರುವುದನ್ನು ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದೆ : ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದ ಭಾರತ

ಭಯೋತ್ಪಾದನೆ ಪ್ರಾಯೋಜಿಸುತ್ತಿರುವುದನ್ನು ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದೆ : ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದ ಭಾರತ

ನವದೆಹಲಿ: ಏಪ್ರಿಲ್​ 22ರ ಪಹಲ್ಗಾಮ್(pahalgam)​ ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ(UNO) ವಾಗ್ದಾಳಿ ನಡೆಸಿರುವ ಭಾರತ, ಭಯೋತ್ಪಾದನೆ ಪ್ರಾಯೋಜಿಸುತ್ತಿರುವುದನ್ನು ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಆರೋಪಿಸಿದೆ.

ವಿಶ್ವಸಂಸ್ಥೆಯ ಭಾರತದ ಉಪ ಖಾಯಂ ರಾಯಭಾರಿ ಯೋಜನಾ ಪಟೇಲ್(yojanaa patel) ಮಾತನಾಡಿ, ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್(kwaja asif) ಅವರು ಭಯೋತ್ಪಾದಕ(terrorism) ಸಂಘಟನೆಗಳನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದು ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಮತ್ತು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನಾ ನಿಗ್ರಹ ಕಚೇರಿಯ 'ಭಯೋತ್ಪಾದನಾ ಬಲಿಪಶುಗಳ ಸಂಘ ಜಾಲ' (VoTAN) ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನದ ಪ್ರತಿನಿಧಿ ಉಲ್ಲೇಖಿಸಿದಾಗ, ಪಟೇಲ್ ಪ್ರತ್ಯುತ್ತರ ನೀಡಿದರು.

ಒಂದು ನಿರ್ದಿಷ್ಟ ನಿಯೋಗ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ದುರ್ಬಲಗೊಳಿಸುವ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹಾಗೂ ಭಾರತದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿರುವುದು ದುರದೃಷ್ಟಕರ ಎಂದು ಪಟೇಲ್ ತಿರುಗೇಟು ನೀಡಿದರು.

ಇತ್ತೀಚಿಗೆ ಟಿವಿ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ(pakisthan defence minister) ಖ್ವಾಜಾ ಆಸೀಫ್ ಅವರು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುತ್ತಿರುವ ಪಾಕಿಸ್ತಾನದ ಇತಿಹಾಸವನ್ನು ಒಪ್ಪಿಕೊಂಡಿರುವುದನ್ನು ಇಡೀ ಜಗತ್ತು ಕೇಳಿದೆ. ಅವರ ಈ ಬಹಿರಂಗ ತಪ್ಪೊಪ್ಪಿಗೆ ಅಚ್ಚರಿ ಮೂಡಿಸಿಲ್ಲ. ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ಪ್ರದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಇದು ಬಹಿರಂಗಪಡಿಸಿದೆ. ಜಗತ್ತು ಇನ್ನು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ನಾನು ಹೇಳಲು ಸಾಧ್ಯವಿಲ್ಲ ವಿಶ್ವಸಂಸ್ಥೆಯಲ್ಲಿ ಪಟೇಲ್ ಉತ್ತರಿಸಿದರು.

 

Category
ಕರಾವಳಿ ತರಂಗಿಣಿ