image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆಯನ್ನು ಕರೆದಿದ್ದು, ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ನೇತೃತ್ವ ವಹಿಸಲಿದ್ದಾರೆ....

ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆಯನ್ನು ಕರೆದಿದ್ದು, ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ನೇತೃತ್ವ ವಹಿಸಲಿದ್ದಾರೆ....

ನವದೆಹಲಿ: ಪಹಲ್ಗಾಮ್​ ಉಗ್ರರ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂದು ಸಂಜೆ 6ಕ್ಕೆ ಸರ್ವ ಪಕ್ಷ ಸಭೆಯನ್ನು ಕರೆದಿದೆ. ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಘಟನೆ ಕುರಿತು ಮಾಹಿತಿ ಸೇರಿದಂತೆ, ಸರ್ಕಾರದ ಮುಂದಿನ ಕ್ರಮದ ಕುರಿತು ಚರ್ಚೆ, ನಿರ್ಧಾರಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಾಲೋಚನೆ ನಡೆಯಲಿದೆ.

ಈ ಸಭೆಯಲ್ಲಿ ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ. ಈ ಕುರಿತು ತಿಳಿಸಿರುವ ಶಿವಸೇನೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಬೆಳವಣಿಗೆ ರಾಷ್ಟ್ರದ ಭದ್ರತೆಗೆ ಕಳವಳಕಾರಿಯಾಗಿದೆ. ದೇಶದ ಏಕತೆ, ಭದ್ರತೆ ಮತ್ತು ಪ್ರತಿ ನಾಗರಿಕರಿಗೆ ಬೆಂಬಲವಾಗಿ ಶಿವಸೇನೆಯ ದೃಢ ನಿಲುವನ್ನು ಶ್ರೀಕಾಂತ್ ಶಿಂಧೆ ತಿಳಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮಧುಬಾನಿಗೆ ಭೇಟಿ ನೀಡಿರುವುದರಿಂದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪ್ರತಿನಿಧಿಗಳು ಸಭೆಯಲ್ಲಿ ಭೇಟಿಯಾಗುತ್ತಿಲ್ಲ. ಆದರೆ, ಸರ್ಕಾರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪಕ್ಷ ತಿಳಿಸಿದೆ. ಈ ಕುರಿತು ಮಾತನಾಡಿರುವ ಜೆಡಿಯು ಕಾರ್ಯಕಾರಿ ಅಧ್ಯಕ್ಷ ಸಂಜಯ್​ ಕುಮಾರ್​ ಝಾ, ಇಂದು ಮಧುಬಾನಿಯಲ್ಲಿ ನಡೆಯುತ್ತಿರುವ ಪ್ರಧಾನ ಮಂತ್ರಿ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಮುಖ ಜೆಡಿಯು ನಾಯಕರು ನಿರತರಾಗಿರುವ ಹಿನ್ನೆಲೆ ಸರ್ವ ಪಕ್ಷ ಸಭೆಗೆ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರು, ಸರ್ಕಾರದ ನಿರ್ಧಾರಕ್ಕೆ ಮತ್ತು ದೇಶದ ಹಿತಾಸಕ್ತಿಯಿಂದ ಸರ್ಕಾರದ ಪರವಾಗಿ ಪಕ್ಷ ನಿಲ್ಲಲಿದೆ ಎಂದು ಪ್ರಕಟಿಸಿದರು.

ಭಯೋತ್ಪಾದಕರು ಪಹಲ್ಗಾಮ್​ನ ಬೈಸರಾನ್​ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ 25 ನಾಗರಿಕರು ಹಾಗೂ ಓರ್ವ ನೇಪಾಳಿ ಪ್ರಜೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 2019ರ ಪುಲ್ವಾಮಾ ದಾಳಿ ಬಳಿಕ ಈ ಕಣಿವೆಯಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿ ಇದಾಗಿದೆ. ಈ ದಾಳಿ ಬೆನ್ನಲ್ಲೇ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಜ್ಜಾಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​​ ಶಾ ನೇತೃತ್ವದಲ್ಲಿ ನಡೆದ ಸಿಸಿಎಸ್​ ಸಭೆಯಲ್ಲಿ, 1960ರ ಸಿಂಧು ನದಿ ಒಪ್ಪಂದವನ್ನು ಅಮಾನತು ಮಾಡಿ ನಿರ್ಧಾರ ಪ್ರಕಟಿಸಿದೆ.

ಜೊತೆಗೆ, ಅಟ್ಟಾರಿ ಚೆಕ್ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲು ನಿರ್ಧರಿಸಿದೆ. ಇದಲ್ಲದೆ, ಸಾರ್ಕ್ ವೀಸಾ ವಿನಾಯಿತಿ ಯೋಜನೆ (ಎಸ್​ವಿಇಸಿ) ಒದಗಿಸಲಾದ ಯಾವುದೇ ವೀಸಾಗಳನ್ನು ರದ್ದುಗೊಳಿಸಲು ದೇಶವು ನಿರ್ಧರಿಸಿದೆ. ಪಾಕಿಸ್ತಾನ ರಾಜತಾಂತ್ರಿಕತೆಗೆ 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಆದೇಶಿಸಿದೆ. ಹಾಗೇ ಮತ್ತೆ ಪ್ರಮುಖ ಮೂರು ನಿರ್ಧಾರಗಳನ್ನು ಕೈಗೊಂಡಿದೆ.

Category
ಕರಾವಳಿ ತರಂಗಿಣಿ