ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಒಟ್ಟು 26 ಜನರು ಪ್ರಾಣ ಕಳೆದುಕೊಂಡಿದ್ದು, ಎಲ್ಲರ ಗುರುತು ಪತ್ತೆಯಾಗಿದೆ. ಮೃತರಲ್ಲಿ 12 ವಿವಿಧ ರಾಜ್ಯಗಳಿಂದ ಬಂದವರಿದ್ದು, ಬಹುತೇಕರು ಮಹಾರಾಷ್ಟ್ರದವರಾಗಿದ್ದಾರೆ. ಹತ್ಯೆಗೀಡಾದವರಲ್ಲಿ ಐಎಎಫ್ ಕಾರ್ಪೋರಲ್, ನೌಕಾಪಡೆ ಮತ್ತು ಅಬಕಾರಿ ಅಧಿಕಾರಿ ಮತ್ತು ಕರ್ನಾಟಕದ ಉದ್ಯಮಿ ಸೇರಿದ್ದಾರೆ.
ಮೃತಪಟ್ಟವರಲ್ಲಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ಹರಿಯಾಣ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮತ್ತು ಒಬ್ಬ ನೇಪಾಳಿ ಪ್ರಜೆ ಇದ್ದಾರೆ. ಓರ್ವ ಪಹಲ್ಗಾಮ್ನ ಸ್ಥಳೀಯ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಸಾವನ್ನಪ್ಪಿದವರೆಲ್ಲರೂ ಪುರುಷರಾಗಿದ್ದು, ಭಯೋತ್ಪಾದಕರು ಒಬ್ಬೊಬ್ಬರನ್ನೇ ಆಯ್ಕೆ ಮಾಡಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಯಲ್ಲಿ ಮರಣ ಹೊಂದಿದವರ ಹೆಸರುಗಳು ಇಂತಿವೆ
ಹರಿಯಾಣದ ಕರ್ನಾಲ್‌ನ ವಿನಯ್ ನರ್ವಾಲ್ (ನೌಕಾಪಡೆಯ ಅಧಿಕಾರಿ),
ಕೇರಳದ ಕೊಚ್ಚಿಯ ಎನ್.ರಾಮಚಂದ್ರನ್,
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಬಿಟೈನ್ ಅಧಿಖಾರಿ
ಚಂಡೀಗಢದ ದಿನೇಶ್ ಅಗರ್ವಾಲ್,
ಪಹಲ್ಗಾಮ್ನ ಸೈಯದ್ ಆದಿಲ್ ಹುಸೇನ್ ಶಾ,
ಉತ್ತರಾಖಂಡದ ನೀರಜ್ ಉಧ್ವಾನಿ,
ಮಹಾರಾಷ್ಟ್ರ ಮುಂಬೈ ನಗರದ ದಿಲೀಪ್ ದೇಸಾಲೆ,
ಮಹಾರಾಷ್ಟ್ರ ಥಾಣೆಯ ಸಂಜಯ್ ಲಕ್ಷ್ಮಣ್ ಲೇಲೆ,
ಆಂಧ್ರ ಪ್ರದೇಶ ವಿಶಾಖಪಟ್ಟಣಂನ ಎಸ್.ಚಂದ್ರಮೌಳಿ,
ಪಶ್ಚಿಮ ಬಂಗಾಳ ಕೋಲ್ಕತ್ತಾದ ಸಮೀರ್ ಗುಹಾ,
ಮಧ್ಯ ಪ್ರದೇಶದ ಇಂದೋರ್‌ನ ಸುಶೀಲ್ ನತ್ಯಾಲ್,
ಮಹಾರಾಷ್ಟ್ರದ ಥಾಣೆಯ ಅತುಲ್ ಶ್ರೀಕಾಂತ್ ಮೋನಿ,
ಮಹಾರಾಷ್ಟ್ರ ಮುಂಬೈನ ಹೇಮಂತ್ ಜೋಶಿ ಸುಹಾಸ್,
ಒಡಿಶಾ ಬಾಲೇಶ್ವರದ ಪ್ರಶಾಂತ್ ಶತಪತಿ,
ಅರುಣಾಚಲ ಪ್ರದೇಶದ ಜಿರೋದ ತೇಜ್ ಹಾಲ್ವಿಂಗ್ (ಭಾರತೀಯ ವಾಯುಪಡೆಯ ಕಾರ್ಪೋರಲ್),
ಕರ್ನಾಟಕದ ಬೆಂಗಳೂರಿನ ಮಧುಸೂದನ್ ಸೋಮಿಶೆಟ್ಟಿ ರಾವ್,
ಕರ್ನಾಟಕದ ಬೆಂಗಳೂರಿನ ಭರತ್ ಭೂಷಣ್,
ಗುಜರಾತ್‌ನ ಭಾವನಗರದ ಯತೀಶ್ ಪರ್ಮಾರ್,
ಗುಜರಾತ್‌ನ ಭಾವನಗರದ ಸುಮಿತ್ ಪರ್ಮಾರ್ (ಯತೀಶ್ ಅವರ ಮಗ),
ಕರ್ನಾಟಕದ ಶಿವಮೊಗ್ಗದಿಂದ ಮಂಜುನಾಥ ರಾವ್,
ಮಹಾರಾಷ್ಟ್ರದ ಪುಣೆಯ ಸಂತೋಷ್ ಜಗದಾಳೆ,
ಮಹಾರಾಷ್ಟ್ರದ ಪುಣೆಯ ಕಸ್ತೋಬೆ ಗನೋವೋಟೆ,
ಗುಜರಾತ್‌ನ ಸೂರತ್ನ ಶೈಲೇಶ್ ಭಾಯ್ ಕಲಾಥಿಯಾ,
ಉತ್ತರ ಪ್ರದೇಶದ ಕಾನ್ಪುರದ ಶುಭಂ ದೇವೇದಿ,
ಬಿಹಾರ ಮೂಲದ ಮನೀಶ್ ರಂಜನ್ (ಅಬಕಾರಿ ಇಲಾಖೆ ನಿರೀಕ್ಷಕ),
ನೇಪಾಳದ ರೂಪಾಂದೇಹಿಯ ಸುದೀಪ್ ನೋಪಾನಿ ಎಂದು ಗುರುತಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಅಮಿತ್ ಶಾ ಮೃತರ ಕುಟುಂಬ ಸದಸ್ಯರನ್ನು ಭೇಟಿಯಾದರು. ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವಿಗೆ ಕಿವಿಯಾದರು. ಧೈರ್ಯ ತುಂಬಿದರು. ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಮತ್ತು ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮೃತರಿಗೆ ಗೌರವನಮನ ಸಲ್ಲಿಸಿದರು.