image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾರುಕಟ್ಟೆಯಲ್ಲಿವೆ ಒರಿಜಿನಲ್​ನಂತೆಯೇ ಕಾಣುವ ನಕಲಿ ನೋಟುಗಳು: ಪತ್ತೆ ಹಚ್ಚುವುದು ಕಷ್ಟ...!

ಮಾರುಕಟ್ಟೆಯಲ್ಲಿವೆ ಒರಿಜಿನಲ್​ನಂತೆಯೇ ಕಾಣುವ ನಕಲಿ ನೋಟುಗಳು: ಪತ್ತೆ ಹಚ್ಚುವುದು ಕಷ್ಟ...!

ನವದೆಹಲಿ : ಗುರುತಿಸಲು ಸಾಧ್ಯವಾಗದಂತೆ ತಯಾರಿಸಲಾದ ನಕಲಿ ನೋಟುಗಳು ಅಪಾರ ಪ್ರಮಾಣದಲ್ಲಿ ಚಲಾವಣೆಗೆ ಬಂದಿವೆ. ಅವು ಅಸಲಿ ನೋಟಗಳಾ ಎಂದು ಗುರುತಿಸುವುದು ತುಂಬಾ ಕಷ್ಟ. ಇದು ಯಾರೋ ಹೇಳಿದ ಮಾತಲ್ಲ, ಬದಲಾಗಿ ಕೇಂದ್ರ ಗೃಹ ಸಚಿವಾಲಯವೇ ನೀಡಿರುವ ಎಚ್ಚರಿಕೆ. ಆ ಕುರಿತ ವಿವರ ಇಲ್ಲಿದೆ.

ದಿನೇ ದಿನೇ ಅಭಿವೃದ್ಧಿಯಾಗಿರುತ್ತಿರುವ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಂಚಕರು, ಸರ್ಕಾರಕ್ಕೆ ಮತ್ತು ಜನರಿಗೆ ಸವಾಲೊಡ್ಡುತ್ತಿದ್ದಾರೆ. ಒಂದೆಡೆ, ಸೈಬರ್ ವಂಚಕರು ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ. ಮತ್ತೊಂದೆಡೆ, ನಕಲಿ ನೋಟುಗಳು ಜನರ ಜೇಬಿಗಿಳಿಸಿ ವಂಚಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ದೊಡ್ಡ ಪ್ರಮಾಣದಲ್ಲಿ ನಕಲಿ ನೋಟುಗಳು ಮಾರುಕಟ್ಟೆ ಪ್ರವೇಶಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ನಕಲಿ ನೋಟುಗಳನ್ನು ಪತ್ತೆಹಚ್ಚುವುದು ಸುಲಭವಾಗಿತ್ತು. ಕರೆನ್ಸಿ ನೋಟಿನ ಮೇಲೆ ಹಲವು ಕಡೆ ಚಿಹ್ನೆಗಳು ಇದ್ದವು. ಅವುಗಳನ್ನು ನಕಲು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ನಕಲಿ ನೋಟು ಎಂದು ಗೊತ್ತಾಗುತ್ತಿತ್ತು. ಆದರೆ, ಈಗ ಆ ರೀತಿ ನಕಲಿ ನೋಟುಗಳನ್ನು ಪತ್ತೆ ಮಾಡುಲು ಸಾಧ್ಯವಿಲ್ಲ.

ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ನೋಟುಗಳಿಗೆ ಕಡಿಮೆ ಇಲ್ಲದಂತೆ ನಕಲಿ ನೋಟುಗಳನ್ನು ವಂಚಕರು ಮುದ್ರಿಸುತ್ತಿದ್ದಾರಂತೆ. ಒರಿಜಿನಲ್​ ನೋಟಿನ ಮೇಲಿರುವ ಎಲ್ಲಾ ಚಿಹ್ನೆಗಳು ಈ ನಕಲಿ ನೋಟುಗಳ ಮೇಲೂ ಇವೆ. ಹೀಗಾಗಿ ಸಾಮಾನ್ಯ ಜನರಿಗೆ ಅಸಲಿ ಮತ್ತು ನಕಲಿ ನೋಟಿನ ನಡುವಿನ ವ್ಯತ್ಯಾಸ ಗುರುತಿಸಲು ಅಸಾಧ್ಯವಾಗಿಸಿದೆ ಮತ್ತು ಪ್ರಜ್ಞಾವಂತರಿಗೂ ನಕಲಿ ನೋಟು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಕೇಂದ್ರ ಗೃಹ ಸಚಿವಾಲ ಎಚ್ಚೆತ್ತುಕೊಂಡಿದೆ. ಜನರು 500 ರೂಪಾಯಿ ನೋಟಿನ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದೆ. ನಕಲಿ ನೋಟುಗಳ ಬಗ್ಗೆ ಗಮನ ಹರಿಸುವಂತೆ ಸಿಬಿಐ, ಸೆಬಿ, ಎನ್‌ಐಎ, ಎಫ್‌ಐಯು ಮತ್ತು ಡಿಆರ್‌ಐಗೆ ಸೂಚಿಸಿದೆ. "ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ನಕಲಿ ನೋಟುಗಳ ಮುದ್ರಣ ಉತ್ತಮ ಗುಣಮಟ್ಟದ್ದಾಗಿದೆ. ಅವುಗಳಲ್ಲಿ ಹೆಚ್ಚಿನವು ಒರಿಜಿನಲ್​ ನೋಟುಗಳಂತೆಯೇ ಕಾಣುತ್ತವೆ. ಅವುಗಳನ್ನು ಗುರುತಿಸುವುದು ತುಂಬಾ ಕಷ್ಟ" ಎಂದು ಹೇಳಿದೆ.

ವಂಚಕರು ನೋಟು ತಯಾರಿಸುವಾಗ ಸಣ್ಣ ತಪ್ಪು ಮಾಡಿದ್ದಾರೆ, ಅದನ್ನು ಪತ್ತೆ ಮಾಡಿದರೆ ಮಾತ್ರ ಅದು ನಕಲಿ ನೋಟು ಎಂದು ಪತ್ತೆಹಚ್ಚಲು ಸಾಧ್ಯ ಎಂದು ಗೃಹ ಸಚಿವಾಲಯ ತಿಳಿಸಿದೆ. ನಕಲಿ ನೋಟಿನ ಮೇಲೆ ಸಣ್ಣ ಕಾಗುಣಿತ ದೋಷ ಇದೆ ಎಂದು ಹೇಳಿದೆ. "RESERVE BANK OF INDIA" ಎಂಬ ಪದದಲ್ಲಿ ತಪ್ಪಿದೆ. "RESERVE" ಪದದಲ್ಲಿನ "E" ಅಕ್ಷರದ ಬದಲು ನಕಲಿ ನೋಟಿನಲ್ಲಿ "A" ಅಕ್ಷರ ಬಳಸಲಾಗಿದೆ. ಈ ವ್ಯತ್ಯಾಸವನ್ನು ಗುರುತಿಸುವುದರಿಂದ ಮಾತ್ರವೇ ನಕಲಿ ನೋಟನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಹೇಳಿದೆ. ಈ ಸಣ್ಣ ತಪ್ಪನ್ನು ಗಮನಿಸಲು, ಪ್ರತಿ 500 ರೂಪಾಯಿ ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ.

 

Category
ಕರಾವಳಿ ತರಂಗಿಣಿ