image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕಾ ಪ್ರವಾಸ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕಾ ಪ್ರವಾಸ

ನ್ಯೂಯಾರ್ಕ್: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ಶನಿವಾರ ಅಮೆರಿಕಾ ತಲುಪಿರುವ ಕಾಂಗ್ರೆಸ್ ನಾಯಕ, ಅಲ್ಲಿನ ಅನಿವಾಸಿ ಭಾರತೀಯರು ಮತ್ತು ಉದ್ಯಮಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಜೊತೆಗೆ ಸೋಮವಾರ ಮತ್ತು ಮಂಗಳವಾರ ಬ್ರೌನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಭಾಷಣ ಮಾಡಲಿದ್ದಾರೆ.

ರಾಹುಲ್ ಗಾಂಧಿಗೆ ಯುಎಸ್​ಗೆ ಸ್ವಾಗತ! ಯುವಜನತೆ, ಪ್ರಜಾಪ್ರಭುತ್ವ ಮತ್ತು ಉತ್ತಮ ಭವಿಷ್ಯಕ್ಕಾಗಿ ಧ್ವನಿ. ಕೇಳೋಣ, ಕಲಿಯೋಣ ಮತ್ತು ಒಟ್ಟಿಗೆ ಕಟ್ಟೋಣ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ಎಕ್ಸ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

"ರಾಹುಲ್ ಗಾಂಧಿ ಜೊತೆ ಭಾರತದ ಕೆಲವು ತೀಕ್ಷ್ಣವಾದ ವ್ಯಾಪಾರ ಮನಸ್ಸುಗಳು ಇಂದು ಬೆಳಗ್ಗೆ ಫಲಪ್ರದಾಯಕ ಮಾತುಕತೆ ನಡೆಸಿದವು" ಎಂದು ಪಿತ್ರೋಡಾ ಪೋಸ್ಟ್ ಮಾಡಿದ್ದಾರೆ.

"ಉದ್ಯಮಶೀಲತೆ, ತಂತ್ರಜ್ಞಾನ, ಒಳಗೊಳ್ಳುವಿಕೆ ಮತ್ತು ನೈತಿಕ ನಾಯಕತ್ವದ ಅಗತ್ಯತೆ ಬಗ್ಗೆ ಚರ್ಚಿಸಿದೆವು. ನ್ಯಾಯಯುತ, ನವೀನ ಮತ್ತು ಅಂತರ್ಗತ ಭಾರತವನ್ನು ನಿರ್ಮಿಸುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಒಳನೋಟಗಳು ಮತ್ತು ಸಹಯೋಗದ ಮನೋಭಾವಕ್ಕೆ ಕೃತಜ್ಞರಾಗಿರುತ್ತೇವೆ" ಎಂದು ಪಿತ್ರೋಡಾ ಬರೆದುಕೊಂಡಿದ್ದಾರೆ.

ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿಯವರು ಉಪನ್ಯಾಸ ನೀಡುವ ಜೊತೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರೋಡ್ ಐಲೆಂಡ್‌ಗೆ ಭೇಟಿ ನೀಡುವ ಮೊದಲು ರಾಹುಲ್ ಗಾಂಧಿಯವರು ಎನ್‌ಆರ್‌ಐ ಸಮುದಾಯದ ಸದಸ್ಯರು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಭೇಟಿಯಾಗಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೂ ರಾಹುಲ್ ಗಾಂಧಿ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಇದೀಗ ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಮೊದಲ ಬಾರಿಗೆ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ