image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನ ಪೀಪಲ್ಸ್​ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್​ ಭುಟ್ಟೋ ಜರ್ದಾರಿಯಿಂದ ಪಾಕಿಸ್ತಾನದ ಸರಕಾರದ ಬಗ್ಗೆ ಕಟು ಟೀಕೆ!

ಪಾಕಿಸ್ತಾನ ಪೀಪಲ್ಸ್​ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್​ ಭುಟ್ಟೋ ಜರ್ದಾರಿಯಿಂದ ಪಾಕಿಸ್ತಾನದ ಸರಕಾರದ ಬಗ್ಗೆ ಕಟು ಟೀಕೆ!

ಪಾಕಿಸ್ತಾನ: ವಿವಾದಾತ್ಮಕ ಕಾಲುವೆ ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಪಾಕಿಸ್ತಾನ ಪೀಪಲ್ಸ್​ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್​ ಭುಟ್ಟೋ ಜರ್ದಾರಿ, ಈ ಯೋಜನೆಯನ್ನು ರದ್ದುಗೊಳಿಸದಿದ್ದರೆ, ಆಡಳಿತ ಪಕ್ಷದ ಮೈತ್ರಿಯಿಂದ ಬೆಂಬಲ ಹಿಂಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ ಸರ್ಕಾರವು ಪ್ರಸ್ತಾವಿತ ಕಾಲುವೆ ಉಪಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಆಡಳಿತ ಒಕ್ಕೂಟದಿಂದ ಪಿಪಿಪಿ ಬೆಂಬಲ ಕಳೆದುಕೊಳ್ಳುವ ಅಪಾಯ ಎದುರಿಸಬೇಕಾದೀತು ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

ಪಾಕ್​ ಸಂಸತ್​​ನ 264 ಶಾಸಕಾಂಗ ಸ್ಥಾನಗಳಲ್ಲಿ ಪಿಎಂಎಲ್​ಎನ್​ 79 ಸ್ಥಾನಗಳನ್ನಷ್ಟೇ ಪಡೆದುಕೊಂಡಿದ್ದು, ಪಿಪಿಪಿ 54 ಸ್ಥಾನಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಹಬಾಜ್​ ಷರೀಫ್​ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಪಿಪಿಪಿಯ ಬೆಂಬಲ ನಿರ್ಣಾಯಕವಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್), ಪಿಪಿಪಿ ಮತ್ತು ಇತರ ನಾಲ್ಕು ಸಣ್ಣ ಪಕ್ಷಗಳ ಜೊತೆ ಸೇರಿ ಬಹುಮತ ಸಾಧಿಸಿ, ಆಡಳಿತದಲ್ಲಿದೆ. ಆದರೆ, 93 ಸ್ಥಾನಗಳನ್ನು ಹೊಂದಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಿರೋಧ ಪಕ್ಷದ ಸ್ಥಾನದಲ್ಲಿದೆ.

ಇಸ್ಲಾಮಾಬಾದ್ ನಾಯಕತ್ವ ಟೀಕಿಸಿದ ಬಿಲಾವಲ್ ಭುಟ್ಟೋ, "ಸಿಂಧೂ ಜನರು ಕಾಲುವೆ ಯೋಜನೆಗಳನ್ನು ತಿರಸ್ಕರಿಸಿದ್ದಾರೆ. ಆದರೆ ಇಸ್ಲಾಮಾಬಾದ್‌ನಲ್ಲಿರುವವರು ನಮ್ಮ ಧ್ವನಿಗೆ ಕುರುಡರು ಮತ್ತು ಕಿವುಡರಾಗಿದ್ದಾರೆ. ನಾವು ನಿಮ್ಮ ಯೋಜನೆಯನ್ನು ವಿರೋಧಿಸುತ್ತೇವೆ" ಎಂದು ಹೇಳಿದರು.

"ಪಿಪಿಪಿ ಬೆಂಬಲದಿಂದಾಗಿ ಅವರು ಪ್ರಧಾನಿಯಾಗಿದ್ದಾರೆ" ಎಂದು ಹೇಳುವ ಮೂಲಕ ಬಿಲಾವಲ್​ ಅವರು, ಶೆಹಬಾಜ್​ ಷರೀಫ್​ ಅವರಿಗೆ ಬೆದರಿಕೆ ಹಾಕಿದ್ದಾರೆ. "ನಾವು ಶೆಹಬಾಜ್ ಷರೀಫ್ ಅವರನ್ನು ಒಮ್ಮೆ ಅಲ್ಲ, ಎರಡು ಬಾರಿ ಪ್ರಧಾನಿಯನ್ನಾಗಿ ಮಾಡಿದ್ದೇವೆ. ಮತ್ತು ಈಗ ನೀವು ಬೆದರಿಕೆಗಳಿಂದ ನಮ್ಮನ್ನು ಹೆದರಿಸಬಹುದು ಎಂದು ನೀವು ಭಾವಿಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಯಾವತ್ತೂ ಯಾವುದೇ ಭ್ರಮೆಯಲ್ಲಿರಬಾರದು. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ. ನಾನು ಜನರೊಂದಿಗೆ ನಿಲ್ಲುತ್ತೇನೆ. ಸರ್ಕಾರ ವಿವಾದಾತ್ಮಕ ಕಾಲುವೆ ಯೋಜನೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಪಿಪಿಪಿ ಒಕ್ಕೂಟದ ಭಾಗವಾಗಿ ಉಳಿಯುವುದಿಲ್ಲ ಎಂದು ಬಿಲಾವಲ್​ ಅಂತಿಮ ಎಚ್ಚರಿಕೆ ನೀಡಿದರು.

Category
ಕರಾವಳಿ ತರಂಗಿಣಿ