image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಛತ್ತಿಸ್ಗಡದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಡಿ 22 ಮಂದಿ ಶರಣಾಗತ

ಛತ್ತಿಸ್ಗಡದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಡಿ 22 ಮಂದಿ ಶರಣಾಗತ

ಛತ್ತೀಸ್​​ಗಢ: ಸುಮಾರು 40.5 ಲಕ್ಷ ಬಹುಮಾನ ಘೋಷಿತವಾಗಿದ್ದ 12 ನಕ್ಸಲರು ಸೇರಿದಂತೆ ಒಟ್ಟು 22 ನಕ್ಸಲರು ಛತ್ತೀಸ್​ಗಢದ ಸುಕ್ಮಾದ ಭದ್ರತಾ ಪಡೆ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

22 ಜನರ ತಂಡದಲ್ಲಿ 9 ಮಹಿಳೆಯರಿದ್ದು, ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಇವರೆಲ್ಲಾ ಮಾವೋವಾದಿ ಸಿದ್ಧಾಂತ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದ ಮೇಲಿನ ದೌರ್ಜನ್ಯಗಳಿಂದ ನಿರಾಶೆಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚೌಹಾಣ್​ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಾದ್​​ ನೆಲ್ಲಾನರ್ (ನಿಮ್ಮ ಉತ್ತಮ ಗ್ರಾಮ) ಯೋಜನೆಯಿಂದ ಅವರೆಲ್ಲ ಪ್ರಭಾವಿತಗೊಂಡಿದ್ದಾರೆ. ಈ ಯೋಜನೆ ಕುಗ್ರಾಮಗಳ ಅಭಿವೃದ್ಧಿ ಹೆಚ್ಚಿಸುವ ಮತ್ತು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ನೀತಿಯನ್ನು ಗುರಿಯಾಗಿರಿಸಿಕೊಂಡಿದೆ. ಪೊಲೀಸರಿಗೆ ಶರಣಾಗಿರುವ ನಕ್ಸಲರು ಛತ್ತೀಸ್​ಗಢದ ಮಾಡ್ ಮತ್ತು ಒಡಿಶಾದ ನುವಾಪಾದ ಮಾವೋವಾದಿ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ. ಶರಣಾದವರಲ್ಲಿ ಮಾವೋವಾದಿಗಳ ಮಾಡ್ ವಿಭಾಗದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಕಂಪನಿ ನಂ. 1ರ ಉಪ ಕಮಾಂಡರ್ ಮುಚಕಿ ಜೋಗಾ (33) ಮತ್ತು ಅದೇ ತಂಡದ ಸದಸ್ಯೆ ಆಗಿರುವ ಅವರ ಪತ್ನಿ ಮುಚಕಿ ಜೋಗಿ (28) ಇದ್ದು, ಇವರ ಪತ್ತೆಗೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಇವರಿಬ್ಬರ ಹೊರತಾಗಿ ಕಿಕಿಡ್​ ದೆವೆ (20) ಮತ್ತು ಮನೋಜ್​ ಆಲಿಯಾಸ್​ ದುಬಿ ಬುದ್ರಾ (28) ಇದ್ದುಮ ಇವರಿಗೆ ತಲಾ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇನ್ನು ಶರಣಾದ 7 ಸದಸ್ಯರಿಗೆ ತಲಾ 2 ಲಕ್ಷ ರೂ. ಹಾಗೂ ಮತ್ತಿತ್ತರ ಮಾವೋವಾದಿಗಳಿಗೆ ತಲಾ 50 ಸಾವಿರ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವರ ಶರಣಾಗತಿಯಲ್ಲಿ ಜಿಲ್ಲಾ ಪೊಲೀಸ್​, ಜಿಲ್ಲಾ ರಿಸರ್ವ್​ ಗಾರ್ಡ್​ ಮತ್ತು ಕೊಬ್ರಾ ಪ್ರಮುಖ ಪಾತ್ರವಹಿಸಿದೆ. ಶರಣಾದ ಮಾವೋಗಳಿಗೆ 50,000 ಸಹಾಯಧನ ಹಾಗೂ ಸರ್ಕಾರದ ನೀತಿ ಅನುಸಾರ ಪುನರ್ವಸತಿ ಕಲ್ಪಿಸಲಾಗುವುದು ಎಂದರು. ಕಳೆದ ವರ್ಷ ಸುಕ್ಮಾ ಸೇರಿದಂತೆ 7 ಜಿಲ್ಲೆಗಳನ್ನು ಹೊಂದಿರುವ ಬಸ್ತಾರ್​ ಪ್ರದೇಶದಲ್ಲಿ 792 ಮಾವೋಗಳು ಶರಣಾಗಿದ್ದರು ಎಂದು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ