ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಸಿಂಧುತ್ವದ ಕುರಿತು ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ವಿಪಕ್ಷಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ.
ಬಳೆದಾರರಿಂದ ವಕ್ಫ್ ಆಸ್ತಿಗಳನ್ನು ಡಿನೋಟಿಪೈ ಮಾಡುವುದು, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ, ವಿವಾದಿತ ವಕ್ಫ್ ಭೂಮಿಯ ಮೇಲೆ ಜಿಲ್ಲಾಧಿಕಾರಿಯ ಅಧಿಕಾರದ ನಿಬಂಧನೆಗಳ ಬಗ್ಗೆ ವಿವರವಾದ ವರದಿ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಈ ಮೂರು ನಿಬಂಧನೆಗಳ ಕುರಿತು ಮಧ್ಯಂತರ ಆದೇಶ ಹೊರಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ವಿಚಾರಣೆಯ ವೇಳೆ ತಿಳಿಸಿದಾಗ, ಆದೇಶಕ್ಕೂ ಮೊದಲು ವಿವರವಾದ ವಿಚಾರಣೆಗೆ ಕೇಂದ್ರ ಸರ್ಕಾರವು ಒಂದು ವಾರ ಗಡುವು ಕೇಳಿತು. ಇದಕ್ಕೆ ನ್ಯಾಯಪೀಠವು ಒಪ್ಪಿಗೆ ನೀಡಿದೆ.