image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಮಿಳುನಾಡಿನ ಇಡೀ ಹಳ್ಳಿಯನ್ನು ತನ್ನದು ಎಂದು ಘೋಷಿಸಿಲು ಕೋರಿ ವಕ್ಫ್​ ಮಂಡಳಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ..

ತಮಿಳುನಾಡಿನ ಇಡೀ ಹಳ್ಳಿಯನ್ನು ತನ್ನದು ಎಂದು ಘೋಷಿಸಿಲು ಕೋರಿ ವಕ್ಫ್​ ಮಂಡಳಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ..

ತಮಿಳುನಾಡು: ಯಾವುದೇ ಆಸ್ತಿಯನ್ನು ತನ್ನದು ಎಂದು ಘೋಷಿಸುವ ವಕ್ಫ್​ ಬೋರ್ಡ್​ನ ನಿಯಮಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕಲು ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿದ್ದು, ಕೇಂದ್ರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಮಧ್ಯೆ, ತಮಿಳುನಾಡಿನ ಇಡೀ ಹಳ್ಳಿಯನ್ನು ತನ್ನದು ಎಂದು ಘೋಷಿಸಿಲು ಕೋರಿ ವಕ್ಫ್​ ಮಂಡಳಿಯು ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದೆ.

ವೆಲ್ಲೂರು ಜಿಲ್ಲೆಯ ವಿರಿನಿಚಿಪುರಂ ಬಳಿಯ ಕಾಟುಕೊಳ್ಳೈ ಗ್ರಾಮವು ತನ್ನ ಆಸ್ತಿ ಎಂದು ವಕ್ಫ್​ ಬೋರ್ಡ್​ ವಾದಿಸಿದೆ. ಇಲ್ಲಿ ವಾಸವಾಗಿರುವ ಜನರು ಮಾಸಿಕ ತಮ್ಮ ಭೂಮಿಯನ್ನು ಬಳಸುತ್ತಿರುವ ಕಾರಣ, ಬಾಡಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಖಾಲಿ ಮಾಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

 ಕಾಟುಕೊಳ್ಳೈ ಗ್ರಾಮದ ಸಮೀಪ ಇರುವ ಮಸೀದಿ - ದರ್ಗಾದಿಂದ ಇಂಥದ್ದೊಂದು ನೋಟಿಸ್​​ ಜಾರಿಯಾಗಿದೆ. ಅದರಲ್ಲಿ ಉಲ್ಲೇಖಿಸಿದಂತೆ, ಗ್ರಾಮವು ವಕ್ಫ್​ ಆಸ್ತಿಯಡಿ ಇದೆ. ಹೀಗಾಗಿ, ಅದನ್ನು ವಕ್ಫ್​ ಆಸ್ತಿ ಎಂದು ಘೋಷಿಸಬೇಕು. ಜೊತೆಗೆ, ಇಲ್ಲಿ ವಾಸವಾಗಿರುವ ಜನರು ತಮ್ಮದಲ್ಲದ ಭೂಮಿಯಲ್ಲಿದ್ದಾರೆ ಎಂದಿದೆ.

ವಕ್ಫ್ ಆಸ್ತಿಗಳನ್ನು ಬಳಸುತ್ತಿರುವ ಜನರು ಬಾಡಿಗೆ/ಶುಲ್ಕ ಪಾವತಿಸಬೇಕು. ಇಲ್ಲವಾದಲ್ಲಿ ಜಾಗವನ್ನು ಖಾಲಿ ಮಾಡಬೇಕು. ತಮ್ಮ ಈ ಮನವಿಯನ್ನು ಪರಿಶೀಲಿಸಿ ನ್ಯಾಯ ಒದಗಿಸುವಂತೆ ವೆಲ್ಲೂರು ಜಿಲ್ಲಾಧಿಕಾರಿ ವಿ.ಆರ್. ಸುಬ್ಬುಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ವಕ್ಫ್​​ ನೋಟಿಸ್​​ಗೆ ಗ್ರಾಮಸ್ಥರು ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾವು ಇಲ್ಲಿ ಸುಮಾರು 3 - 4 ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ಇದ್ದಕ್ಕಿದ್ದಂತೆ, ವಕ್ಫ್​ ಆಸ್ತಿ ಎಂದು ಘೋಷಿಸಲು ನೋಟಿಸ್ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಅಂದಾಜು 150 ಕುಟುಂಬಗಳು ವಾಸಿಸುತ್ತಿವೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Category
ಕರಾವಳಿ ತರಂಗಿಣಿ