image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್​​ನ "ಮುಸ್ಲಿಮರ ನಕಲಿ ಓಲೈಕೆ ನೀತಿ"ಯನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್​​ನ "ಮುಸ್ಲಿಮರ ನಕಲಿ ಓಲೈಕೆ ನೀತಿ"ಯನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ

ಹರಿಯಾಣ : ಕಾಂಗ್ರೆಸ್‌ಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸಹಾನುಭೂತಿ ಇದ್ದರೆ, ಪಕ್ಷದ ಅಧ್ಯಕ್ಷರನ್ನಾಗಿ ಆ ಸಮುದಾಯದ ನಾಯಕನನ್ನು ನೇಮಿಸಲಿ ಮತ್ತು ಚುನಾವಣೆಗಳಲ್ಲಿ ಶೇಕಡಾ 50 ರಷ್ಟು ಟಿಕೆಟ್‌ಗಳನ್ನು ಆ ಸಮುದಾಯದ ಅಭ್ಯರ್ಥಿಗಳಿಗೇ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದರು.

ಕಾಂಗ್ರೆಸ್​ ಎಂದಿಗೂ, ಯಾರಿಗೂ ಪ್ರಯೋಜನವಾಗದ 'ಮಧ್ಯಂತರ ನೀತಿ'ಯನ್ನು ಅನುಸರಿಸುತ್ತದೆ. ಪಕ್ಷವು ಚುನಾವಣೆಗಳಲ್ಲಿ ಗೆದ್ದ ಬಳಿಕ ಮತ್ತು ಅದಕ್ಕೂ ಮೊದಲಿನ ನಡವಳಿಕೆಯು ಒಂದೇ ಆಗಿರುವುದಿಲ್ಲ ಎಂದು ಟೀಕಿಸಿದರು.

ಇಲ್ಲಿನ ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್​​ಗೆ ಅಡಿಪಾಯ ಹಾಕಿ, ಅಯೋಧ್ಯೆಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ವಕ್ಫ್ ಕಾನೂನಿನಲ್ಲಿ ಕಾಂಗ್ರೆಸ್ ಮಾಡಿದ ಬದಲಾವಣೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಸ್ಲಿಂ​ ಸಮುದಾಯದ ಕೆಲವೇ ಕೆಲವು 'ಮೂಲಭೂತವಾದಿ' ವ್ಯಕ್ತಿಗಳನ್ನು ಸಂತೋಷಪಡಿಸುವ ನೀತಿಯನ್ನು ಅನುಸರಿಸುತ್ತದೆ. ಒಟ್ಟಾರೆ ಸಮಾಜವನ್ನು ನಿರ್ಲಕ್ಷಿಸಿ, ಅವರನ್ನು ಅನಕ್ಷರಸ್ಥ ಮತ್ತು ಬಡವರಾಗಿಯೇ ಉಳಿಯುವಂತೆ ಮಾಡುತ್ತದೆ ಎಂದು ಆರೋಪಿಸಿದರು. ಇದಕ್ಕೆ ದೊಡ್ಡ ಪುರಾವೆಯೆಂದರೆ, 2014 ರ ಸಾರ್ವತ್ರಿಕ ಚುನಾವಣೆಗೂ ಮೊದಲು ವಕ್ಫ್ ಕಾನೂನಿನಲ್ಲಿ ಮಾಡಿದ ತಿದ್ದುಪಡಿಗಳು ಎಂದು ಉದಾಹರಿಸಿದರು.

ಕಾಂಗ್ರೆಸ್​ಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸಹಾನುಭೂತಿ ಇದ್ದರೆ, ಪಕ್ಷದ ಅಧ್ಯಕ್ಷರನ್ನಾಗಿ ಮುಸ್ಲಿಂ ಸಮುದಾಯದ ನಾಯಕನನ್ನು ನೇಮಿಸಬೇಕು. ಚುನಾವಣೆಗಳಲ್ಲಿ ಶೇಕಡಾ 50 ರಷ್ಟು ಟಿಕೆಟ್​ಗಳನ್ನು ಅದೇ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಿಡಬೇಕು. ಇದನ್ನು ಮೊದಲು ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ ಮುಸ್ಲಿಂ​ ಸೇರಿದಂತೆ ಯಾವುದೇ ಸಮುದಾಯಗಳ ಅಭ್ಯುದಯ ಬಯಸುವುದಿಲ್ಲ. ನಾಗರಿಕರ ಹಕ್ಕುಗಳನ್ನು ಕಸಿಯುವುದೇ ಅದರ ಕೆಲಸ. ಇದು ಆ ಪಕ್ಷದ ಕರಾಳ ಸತ್ಯ ಎಂದು ಆಪಾದಿಸಿದರು.

Category
ಕರಾವಳಿ ತರಂಗಿಣಿ