image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 84ರಿಂದ ಶೇ 125ಕ್ಕೆ ಏರಿಸುವುದಾಗಿ ಘೋಷಣೆ ಮಾಡಿದ ಚೀನಾ...!

ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 84ರಿಂದ ಶೇ 125ಕ್ಕೆ ಏರಿಸುವುದಾಗಿ ಘೋಷಣೆ ಮಾಡಿದ ಚೀನಾ...!

ಚೀನಾ: ಶನಿವಾರದಿಂದ ಚೀನಾ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 84 ರಿಂದ ಶೇ 125 ಕ್ಕೆ ಹೆಚ್ಚಿಸುವ ಮೂಲಕ ಪ್ರತೀಕಾರದ ಕ್ರಮಗಳನ್ನು ಘೋಷಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತರ ದೇಶಗಳ ಮೇಲೆ ಹೇರಿದ್ದ ಸುಂಕಗಳಿಗೆ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ. ಆದರೆ ಚೀನಾ ಮೇಲಿನ ಸುಂಕ ಈಗಾಗಲೇ ಜಾರಿಯಲ್ಲಿದೆ. ಹೀಗಾಗಿ ಚೀನಾ ಕೂಡಾ ಅಮೆರಿಕದ ವಸ್ತುಗಳ ಮೇಲೆ ಶೇ 125 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ. ಈ ಘೋಷಣೆ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಚೀನಾ ಹೇಳಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ಆರಂಭವಾಗಿದೆ.

ಟ್ರಂಪ್‌ ಅವರ ಕ್ರಮಗಳನ್ನು "ಆರ್ಥಿಕ ಬೆದರಿಸುವಿಕೆ" ಎಂದು ಕರೆದಿರುವ ಚೀನಾ ಇದಕ್ಕೆ ತಾನು ಹೆದರುವುದಿಲ್ಲ ಎಂದು ಹೇಳಿದ್ದು, ಚೀನಾ ತನ್ನದೇ ಆದ ಪ್ರತಿಕ್ರಮಗಳೊಂದಿಗೆ ಅಮೆರಿಕದ ಸುಂಕಗಳ ವಿರುದ್ಧ ಹೋರಾಡುವುದಾಗಿ ಪ್ರಕಟಿಸಿದೆ.

ಟ್ರಂಪ್​ ಅವರ ಟಾರಿಫ್​ ಘೋಷಣೆಯಿಂದ ವಿಶ್ವದ ಹಾಗೂ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲಗಳೇ ಸೃಷ್ಟಿಯಾಗಿದ್ದವು. ಆ ಬಳಿಕ ಯುಎಸ್​ ಅಧ್ಯಕ್ಷ ಟ್ರಂಪ್​​​​​​​​​ ಗುರುವಾರ ಚೀನಾ ಹೊರತುಪಡಿಸಿ ಎಲ್ಲ ರಾಷ್ಟ್ರಗಳ ಮೇಲೆ ಹಾಕಿದ್ದ ರೆಸಿಪ್ರೋಕಲ್​ ತೆರಿಗೆಯನ್ನು 3 ತಿಂಗಳ ಕಾಲ ತಡೆ ಹಿಡಿಯುವುದಾಗಿ ಘೋಷಿಸಿದ್ದರು. ಇದು ಅಲ್ಲಿನ ಷೇರು ಮಾರುಕಟ್ಟೆಗಳ ಐತಿಹಾಸಿಕ ಏರಿಕೆಗೆ ಕಾರಣವಾಗಿತ್ತು.

ಇನ್ನೊಂದು ಕಡೆ ಅಮೆರಿಕ ಚೀನಾದ ಮೇಲೆ ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ಹೆಚ್ಚಿಸುವುದು ಸಂಖ್ಯೆಗಳ ಆಟವಾಗಿ ಮಾರ್ಪಟ್ಟಿದೆ. ಇದು ಪ್ರಾಯೋಗಿಕ ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿಲ್ಲ ಹಾಗೂ ವಿಶ್ವ ಆರ್ಥಿಕತೆಯ ಇತಿಹಾಸದಲ್ಲಿ ಒಂದು ಜೋಕ್ ಆಗುತ್ತದೆ ಎಂದು ಚೀನಾ ಹಣಕಾಸು ಸಚಿವಾಲಯದ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಚೀನಾದ ಹಿತಾಸಕ್ತಿಗಳ ವಿರುದ್ಧ ಅಮೆರಿಕ ತನ್ನ ಕ್ರಮಗಳನ್ನು ಮುಂದುವರೆಸಿದರೆ, ಅದನ್ನು ಚೀನಾ ದೃಢವಾಗಿ ಎದುರಿಸುತ್ತದೆ ಮತ್ತು ಕೊನೆಯವರೆಗೂ ಹೋರಾಡುತ್ತದೆ ಎಂದು ಚೀನಾ ವಕ್ತಾರರು ಇದೇ ವೇಳೆ ಘೋಷಿಸಿದ್ದಾರೆ. ಅಮೆರಿಕ ಹೇರಿರುವ ಸುಂಕಗಳ ವಿರುದ್ಧ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಮತ್ತೊಂದು ಮೊಕದ್ದಮೆ ಹೂಡುವುದಾಗಿಯೂ ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ.

 

Category
ಕರಾವಳಿ ತರಂಗಿಣಿ